ಚೆನ್ನೈ(ಡಿ.14): ವಾರ್ದ ಚಂಡಮಾರುತದ ಹೊಡೆತಕ್ಕೆ ಸಿಕ್ಕಿರುವ ತಮಿಳುನಾಡಿನ ಆರು ಜಿಲ್ಲೆಗಳಲ್ಲಿ ಜನಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ.

ಚೆನ್ನೈ, ಕಂಚೀಪುರಂ, ತಿರುವಳ್ಳೂರು ಜಿಲ್ಲೆಗಳಲ್ಲಿ ವ್ಯತ್ಯಯವಾಗಿರುವ ಮೊಬೈಲ್, ದೂರವಾಣಿ ಸೇವೆಯನ್ನು ಪುನಾರಂಭಿಸಲಾಗುತ್ತಿದೆ. ಇದರ ಜತೆಗೆ ಇಂಟರ್‌'ನೆಟ್ ವ್ಯವಸ್ಥೆಯನ್ನೂ ಹೆಚ್ಚಿನ ಭಾಗಗಳಲ್ಲಿ ಸರಿಪಡಿಸಲಾಗಿದೆ ಎಂದು ದೂರಸಂಪರ್ಕ ಕಂಪನಿಗಳು ಹೇಳಿವೆ.

ವಿದ್ಯುತ್, ರಸ್ತೆ ಸಂಪರ್ಕಗಳನ್ನು ಪುನರ್'ಸ್ಥಾಪಿಸುವ ಕೆಲಸವೂ ಮುಂದುವರಿದಿದೆ. ವಾರ್ದ ಚಂಡಮಾರುತದ ವಿಚಾರ ರಾಜ್ಯಸಭೆಯಲ್ಲಿಯೂ ಪ್ರಸ್ತಾಪವಾಗಿದ್ದು ತಮಿಳುನಾಡಿಗೆ ವಿಶೇಷ ಹಣಕಾಸು ನೆರವು ನೀಡಬೇಕೆಂದು ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.