ಪಿಒಪಿ ಗಣೇಶ ವಿಸರ್ಜನೆಗೆ 10 ಸಾವಿರ ರು. ದಂಡ!

ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ, ನಂತರ ಬಿಬಿಎಂಪಿ ನಿರ್ಮಿಸಿರುವ ಕೆರೆ, ಕಲ್ಯಾಣಿ, ಮೊಬೈಲ್‌ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಲು ಅವಕಾಶವಿಲ್ಲ. ಒಂದು ವೇಳೆ ವಿಸರ್ಜಿಸಬೇಕಾದರೆ 10 ಸಾವಿರ ರು. ದಂಡ ವಿಧಿಸುವುದಾಗಿ ಸೂಚನೆ ನೀಡಿದೆ. 

10 Thousand Fine Imposed In POP Ganesh immersion

ಬೆಂಗಳೂರು [ಆ.01]:  ಸರ್ಕಾರದ ನಿಯಮಗಳನ್ನೂ ಮೀರಿ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ (ಪಿಒಪಿ) ಗಣಪತಿಗಳನ್ನು ಪ್ರತಿಷ್ಠಾಪಿಸಿ ನಂತರ ವಿಸರ್ಜನೆಗಾಗಿ ಬಿಬಿಎಂಪಿ ನಿರ್ಮಿಸಿರುವ ಕಲ್ಯಾಣಿಗಳಿಗೆ ಬಂದರೆ 10 ಸಾವಿರ ರು. ದಂಡದ ಜತೆಗೆ ಜೈಲು ಶಿಕ್ಷೆ ವಿಧಿಸುವುದಾಗಿ ಬಿಬಿಎಂಪಿ ಖಡಕ್‌ ಎಚ್ಚರಿಕೆ ನೀಡಿದೆ.

ಪಿಒಪಿ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ, ನಂತರ ಬಿಬಿಎಂಪಿ ನಿರ್ಮಿಸಿರುವ ಕೆರೆ, ಕಲ್ಯಾಣಿ, ಮೊಬೈಲ್‌ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಲು ಅವಕಾಶವಿಲ್ಲ. ಒಂದು ವೇಳೆ ವಿಸರ್ಜಿಸಬೇಕಾದರೆ 10 ಸಾವಿರ ರು. ದಂಡ ವಿಧಿಸುವುದಾಗಿ ಸೂಚನೆ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವ ಆಯೋಜಿಸಲು ಬಿಬಿಎಂಪಿ, ಬೆಸ್ಕಾಂ, ಪೊಲೀಸ್‌ ಮತ್ತು ಅಗ್ನಿಶಾಮಕ ದಳದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಅದಕ್ಕಾಗಿ 63 ಉಪ ವಿಭಾಗದಲ್ಲಿ ಏಕಗವಾಕ್ಷಿ ಯೋಜನೆ ಅಡಿಯಲ್ಲಿ ಅನುಮತಿ ನೀಡಲಾಗುತ್ತಿದೆ.

24 ಕೆರೆಗಳಲ್ಲಿ ವಿಸರ್ಜನೆಗೆ ವ್ಯವಸ್ಥೆ:

ಬಿಬಿಎಂಪಿ ವತಿಯಿಂದ ಗಣೇಶ ಮೂರ್ತಿ ವಿಸರ್ಜನೆಗಾಗಿ ನಗರದ 24 ಕೆರೆಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಕೆರೆಗಳ ಸುತ್ತ ಬ್ಯಾರಿಕೇಡ್‌ ಅಳವಡಿಕೆ, ಮುಳುಗು ತಜ್ಞರ ನೇಮಕ, ಕ್ರೇನ್‌ಗಳ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಸಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಜತೆಗೆ 400 ಮೊಬೈಲ್‌ ಟ್ಯಾಂಕರ್‌ಗಳು ಮತ್ತು 37 ತಾತ್ಕಾಲಿಕ ಹೊಂಡ ಮತ್ತು ಕಲ್ಯಾಣಿಗಳನ್ನು ಸ್ಥಾಪಿಸಲಾಗಿದೆ.

ಯಲಹಂಕ ಕೆರೆ, ಚಳ್ಳಕೆರೆ, ಮಲ್ಲತಹಳ್ಳಿ ಕೆರೆ, ಅಲ್ಲಾಳಸಂದ್ರ ಕೆರೆ, ಸ್ಯಾಂಕಿ ಟ್ಯಾಂಕ್‌, ಕೈಗೊಂಡನಹಳ್ಳಿ ಕೆರೆ, ಅಟ್ಟೂರು ಕೆರೆ, ಚೊಕ್ಕಸಂದ್ರ ಕೆರೆ, ಕಸವನಹಳ್ಳಿ ಕೆರೆ, ಕೋಗಿಲು ಕೆರೆ, ಸಾದರಮಂಗಳ ಕೆರೆ, ದೊಡ್ಡಕೋನೇನಹಳ್ಳಿ ಕೆರೆ, ರಾಚನಹಳ್ಳಿ ಕೆರೆ, ಹೇರೋಹಳ್ಳಿ ಕೆರೆ, ಮೇಸ್ತ್ರೀಪಾಳ್ಯ ಕೆರೆ, ಜಕ್ಕೂರು ಕೆರೆ (ಸಂಪಿಗೆಹಳ್ಳಿ ಕೆರೆ), ಮುನೇನಕೊಳಲು ಕೆರೆ, ಯಡಿಯೂರು ಕೆರೆ, ಪಳನಹಳ್ಳಿ ಕೆರೆ, ಹಲಸೂರು ಕೆರೆ, ದೊರೆಕೆರೆ, ದೊಡ್ಡಬೊಮ್ಮಸಂದ್ರ ಕೆರೆ, ಉಳ್ಳಾಲ ಕೆರೆ ಮತ್ತು ಸಿಂಗ್ರಸಂದ್ರ ಕೆರೆಗಳಲ್ಲಿ ಮೂರ್ತಿ ವಿಸರ್ಜನೆ ಮಾಡಬಹುದು.

 ಮೊಬೈಲ್‌ ಟ್ಯಾಂಕರ್‌

ಮನೆಗಳಲ್ಲಿ ಪ್ರತಿಷ್ಠಾಪಿಸಿದ ಗಣಪತಿ ಮೂರ್ತಿಗಳನ್ನು ವಿಸರ್ಜಿಸಲು ಅನುಕೂಲವಾಗುವಂತೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಕಲ್ಪಿಸಿರುವ ಹತ್ತು ಮೊಬೈಲ್‌ ಟ್ಯಾಂಕರುಗಳು ಸೆ.2ರಂದು ನಗರದ ಹಲವು ನಗರಗಳಲ್ಲಿ ಸಂಚರಿಸಲಿದೆ. ಟ್ಯಾಂಕರ್‌ ಸಂಚರಿಸುವ ಸ್ಥಳ ಮತ್ತು ಮೊಬೈಲ್‌ ಸಂಖ್ಯೆ ನೀಡಲಾಗಿದೆ.

ಬಡಾವಣೆವಾರು ವೇಳಾಪಟ್ಟಿ

ಬಡಾವಣೆ    ಸಮಯ    ಸಂಪರ್ಕಿಸಬೇಕಾದ ಸಂಖ್ಯೆ

ಗಣಪತಿ ನಗರ (ಪೀಣ್ಯ)    ಸಂಜೆ 4 ರಿಂದ 6.15    90356 64203

ಪೀಣ್ಯ 2ನೇ ಹಂತ ಬಸ್‌ ಸ್ಟಾಪ್‌    ಸಂಜೆ 6.30 ರಿಂದ 7.30    8088892920

ಲಗ್ಗೆರೆ ಪಾರ್ಕ್    ರಾತ್ರಿ 7.45 ರಿಂದ 8.30    80888 92920

ಕೆಐಎಡಿಬಿ ಕ್ವಾಟ್ರರ್ಸ್‌    ರಾತ್ರಿ 8.45ರಿಂದ 10    80888 92920

ಮೀನಾಕ್ಷಿ ದೇವಸ್ಥಾನ ಬನ್ನೇರುಘಟ್ಟರಸ್ತೆ    ರಾತ್ರಿ 7ರಿಂದ 8    97310 66026

ಎಚ್‌ಎಸ್‌ಆರ್‌ ಲೇಔಟ್‌    ರಾತ್ರಿ 9ರಿಂದ 10    90354 71530

ಟಿ.ದಾಸರಹಳ್ಳಿ (ಬಿಬಿಎಂಪಿ ಕಚೇರಿ ಎದುರು)    ಸಂಜೆ 4.30ರಿಂದ 5.30    99861 96215

ಎಂಇಐ ಕಾಲೋನಿ ಮೈದಾನ ದಾಸರಹಳ್ಳಿ    ಸಂಜೆ 5.45ರಿಂದ 6.30    99861 96215

ಮಲ್ಲಸಂದ್ರ ಸರ್ಕಾರಿ ಸ್ಕೂಲ್‌ ದಾಸರಹಳ್ಳಿ    ಸಂಜೆ 6.45ರಿಂದ 7.45    99861 96215

ನೆಲಗದರನಹಳ್ಳಿ ಸರ್ಕಲ್‌    ರಾತ್ರಿ 8ರಿಂದ 9    99861 96215

ಹೇರೋಹಳ್ಳಿ    ಸಂಜೆ 4.30ರಿಂದ 5.30    81475 88165

ತಿಗಳರಪಾಳ್ಯ ಸರ್ಕಲ್‌    ಸಂಜೆ 5.45ರಿಂದ 6.30    81475 88165

ಹೆಗ್ಗನಹಳ್ಳಿ ಬಸ್‌ ಸ್ಟಾಪ್‌    ಸಂಜೆ 6.45ರಿಂದ 7.45    81475 88165

ಪೀಣ್ಯ 2ನೇ ಹಂತ    ರಾತ್ರಿ 8ರಿಂದ 9    81475 88165

ಜಯನಗರ 4ನೇ ಹಂತ    ಸಂಜೆ 5 ರಿಂದ 7    99458 00675

ಹನುಮಂತನಗರ ಪೊಲೀಸ್‌ ಠಾಣೆ    ರಾತ್ರಿ 7.15ರಿಂದ 10    88848 79071

ಜೀವನ್‌ ಭೀಮಾನಗರ ಪೊಲೀಸ್‌ ಠಾಣೆ    ಸಂಜೆ 4ರಿಂದ 7.45    98864 15886

ಅಲಸೂರು ಪೊಲೀಸ್‌ ಠಾಣೆ    ರಾತ್ರಿ 8 ರಿಂದ 10    99027 72852

ಪವಿತ್ರ ಪ್ಯಾರಡೈಸ್‌ ಎದುರು ಬಸವೇಶ್ವರನಗರ    ಮಧ್ಯಾಹ್ನ 3ರಿಂದ 5    86186 28326

ಜಯನಗರ ಬಸ್‌ ನಿಲ್ದಾಣ    ಸಂಜೆ 5.30ರಿಂದ 7    86186 28326

ಮಾಗಡಿ ರಸ್ತೆ ಶನಿಮಹಾತ್ಮ ದೇವಸ್ಥಾನ    ರಾತ್ರಿ 7.30ರಿಂದ 8.30    97391 44797

ಮಂಜುನಾಥನಗರ, 1ನೇ ಕ್ರಾಸ್‌    ರಾತ್ರಿ 9ರಿಂದ 10.30    97391 44797

ಮಲ್ಲೇಶ್ವರಂ ಪೊಲೀಸ್‌ ಸ್ಟೇಷನ್‌    ಮಧ್ಯಾಹ್ನ 3 ರಿಂದ 5.30    78929 27718

18ನೇ ಕ್ರಾಸ್‌ ಮಲ್ಲೇಶ್ವರ    ಸಂಜೆ 6ರಿಂದ 7.30    78929 27718

ಬ್ರಿಗೇಡ್‌ ಅಪಾರ್ಟ್‌ಮೆಂಟ್‌    ರಾತ್ರಿ 8ರಿಂದ 9.15    78929 27718

ಯಶವಂತಪುರ ಪೊಲೀಸ್‌ ಸ್ಟೇಷನ್‌    ರಾತ್ರಿ 9.30ರಿಂದ 10.30    78929 27718

ಯಲಹಂಕ ನ್ಯೂ ಟೌನ್‌, 4ನೇ ಹಂತ    ಸಂಜೆ 5.30ರಿಂದ 6    94481 68193

ಎನ್‌ಇಎಸ್‌ ಕಚೇರಿ ಸಮೀಪ    ಸಂಜೆ 6.15ರಿಂದ 6.45    97400 23306

ಯಲಹಂಕ ಹಳೇಪಟ್ಟಣ ಬಸ್‌ ನಿಲ್ದಾಣ    ರಾತ್ರಿ 7ರಿಂದ 8    97313 87003

ಸಹಕಾರನಗರ, ಗಣೇಶ ಮಂದಿರ    ರಾತ್ರಿ 8ರಿಂದ 10    97313 87003

ಬಿಇಎಂಎಲ್‌, ರಾಜರಾಜೇಶ್ವರಿನಗರ    ಸಂಜೆ 5ರಿಂದ 9    98800 60975

ನಿಮಿಷಾಂಬ ಮಂದಿರ, ಪ್ರಾದೇಶಿಕ ಕಚೇರಿ ರಾಜರಾಜೇಶ್ವರಿನಗರ    ರಾತ್ರಿ 9ರಿಂದ 10    96633 89678

ರಾಮಮೂರ್ತಿನಗರ, ಪೊಲೀಸ್‌ ಸ್ಟೇಷನ್‌    ಸಂಜೆ 4.30ರಿಂದ 5.30    96323 97043

ಮಹದೇವಪುರ    ಸಂಜೆ 5.45ರಿಂದ 6.30    96323 97043

ಮಾರತ್‌ಹಳ್ಳಿ ಬ್ರಿಜ್‌    ಸಂಜೆ 6.45ರಿಂದ 7.30    96323 97043

ಎಇಸಿಎಸ್‌ ಲೇಔಟ್‌, ಕುಂದಲಹಳ್ಳಿ    ರಾತ್ರಿ 7.45 ರಿಂದ 8.30    78993 57501

ಎಚ್‌ಎಎಲ್‌ ವಿಮಾನ ನಿಲ್ದಾಣ ರಸ್ತೆ    ರಾತ್ರಿ 8.45ರಿಂದ 10.30    78993 57501

Latest Videos
Follow Us:
Download App:
  • android
  • ios