ನಿನ್ನೆ ನಡೆದ ಅಧಿಕಾರಿಗಳ ಈ ಧರಣಿಗೆ ಗ್ರಾಮದ ಮಕ್ಕಳು ಸಹ ಸಾಥ್ ಕೊಟ್ಟಿದ್ದರು. ಇಡೀದಿನ ನಡೆದ ಪ್ರತಿಭಟನೆಗೆ ವಿಚಲಿತರಾದ ಗ್ರಾಮಸ್ಥರು ಶೌಚಾಲಯ ನಿರ್ಮಿಸುವ ನಿರ್ಧಾರ ಮಾಡಿದ್ದಾರೆ.

ತುಮಕೂರು(ಸೆ.17): ಶೌಚಾಲಯ ಕಟ್ಟಿಸೋಕೆ ಗ್ರಾಮಸ್ಥರು ಪ್ರತಿಭಟನೆ ಮಾಡೋದನ್ನ ಕೇಳಿದೀವಿ, ನೋಡಿದೀವಿ. ಆದ್ರೆ ತುಮಕೂರು ಜಿಲ್ಲೆಯ ಗ್ರಾಮ ಒಂದರಲ್ಲಿ ಶೌಚಾಲಯ ಕಟ್ಟಿಸಿಕೊಳ್ಳಿ ಅಂತ ಅಧಿಕಾರಿಗಳೇ ಗ್ರಾಮಕ್ಕೆ ಬಂದು ಧರಣಿ ನಡೆಸಿದ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು, ತುಮಕೂರು ತಾಲೂಕಿನ ಬೆಳದರ ಗ್ರಾಮ ಪಂಚಾಯ್ತಿಯ ಜಕ್ಕೇನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ತಾಲೂಕು ಪಂಚಾಯ್ತಿ ಅಧಿಕಾರಿಗಳು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಗ್ರಾಮಸ್ಥರ ಮನವೊಲಿಸಲು ಮುಂದಾಗಿದ್ದರು. ಆದ್ರೆ ಗ್ರಾಮಸ್ಥರು ಶೌಚಾಲಯ ನಿರ್ಮಿಸಿಕೊಳ್ಳಲು ಒಪ್ಪದಿದ್ದಾಗ, ತಾಲೂಕು ಪಂಚಾಯ್ತಿ EO ನಾಗಣ್ಣ ಅವರ ನೇತೃತ್ವದಲ್ಲಿ ಧರಣಿಗೆ ಕೂತಿದ್ದಾರೆ.

ನಿನ್ನೆ ನಡೆದ ಅಧಿಕಾರಿಗಳ ಈ ಧರಣಿಗೆ ಗ್ರಾಮದ ಮಕ್ಕಳು ಸಹ ಸಾಥ್ ಕೊಟ್ಟಿದ್ದರು. ಇಡೀದಿನ ನಡೆದ ಪ್ರತಿಭಟನೆಗೆ ವಿಚಲಿತರಾದ ಗ್ರಾಮಸ್ಥರು ಶೌಚಾಲಯ ನಿರ್ಮಿಸುವ ನಿರ್ಧಾರ ಮಾಡಿದ್ದಾರೆ. ಗ್ರಾಮದ ಎಲ್ಲಾ 85 ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ನಾಳೆ ಗುದ್ದಲಿಪೂಜೆ ನೆರವೇರಲಿದೆ.