ಬೆಂಗಳೂರು(ಸೆ. 23): ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸರಕಾರದ ಜೊತೆ ವಿಪಕ್ಷಗಳೂ ಕೈಜೋಡಿಸಿವೆ. ಇಂದು ವಿಶೇಷ ಅಧಿವೇಶನದಲ್ಲಿ ಉಭಯ ಸದನಗಳು ಭಾಗವಹಿಸಲಿದ್ದು ಒಮ್ಮತದ ನಿರ್ಧಾರ ಮೂಡುವ ಸಾಧ್ಯತೆ ಇದೆ. ತಮಿಳುನಾಡಿಗೆ ನೀರು ಹರಿಸಬಾರದು ಎಂಬ ನಿರ್ಧಾರವನ್ನು ತೆಗೆದುಕೊಂಡಲ್ಲಿ ಮುಂದೇನಾಗುತ್ತದೆ? ಇಲ್ಲಿದೆ ಸಾಧ್ಯಾಸಾಧ್ಯತೆಗಳ ಲೆಕ್ಕಾಚಾರ.
* ಸರ್ಕಾರ ನೀರು ಬಿಡುವುದಿಲ್ಲ ಎಂದು ನೇರವಾಗಿ ಹೇಳಿ ಆದೇಶ ಉಲ್ಲಂಘಿಸಿಲ್ಲ; ಆದರೆ, ನೀರು ಬಿಡಬೇಕು ಎಂಬ ನ್ಯಾಯಾಲಯದ ಆದೇಶವನ್ನು ಮಾತ್ರ ಮುಂದೂಡಿದೆ.
* ಸಕಾರಣವಿದ್ದಲ್ಲಿ ಕೋರ್ಟ್ ಆದೇಶ ಪಾಲನೆಯನ್ನು ವಿಳಂಬ ಮಾಡುವ ಅವಕಾಶ ಇದೆ
* ನೀರು ಬಿಡುಗಡೆ ಮುಂದೂಡಿದ್ದು ಏಕೆ ಎಂಬುದನ್ನು ಸಮರ್ಥಿಸಿಕೊಳ್ಳುವ ಅನಿವಾರ್ಯ
* ಅಧಿವೇಶನದಲ್ಲಿ ನಿರ್ಣಯ ಕೈಗೊಂಡರೆ ಸರ್ಕಾರದ ಮೇಲೆ ನೇರ ಆರೋಪ ಬರುವುದಿಲ್ಲ; ಸಿಎಂ ಎಂಬ ಒಬ್ಬ ವ್ಯಕ್ತಿಯ ನಿರ್ಧಾರವಲ್ಲ, ವಿಧಾನಮಂಡಲದ ನಿರ್ಣಯ ಎಂದಾಗುತ್ತದೆ
* ಕೋರ್ಟ್ ನಿಂದನೆ ಆರೋಪವು ಇಡೀ ವಿಧಾನಮಂಡಲಕ್ಕೆ ಬರಬೇಕಾಗುತ್ತದೆ; ನಿರ್ಣಯವನ್ನು ನ್ಯಾಯಾಂಗ ಸುಲಭವಾಗಿ ಶಿಕ್ಷಿಸುವಂತಹ ಸಾಧ್ಯತೆ ಇಲ್ಲ; ಒಂದು ವೇಳೆ ಕೈಗೊಂಡರೆ ಅದು ಸಂವಿಧಾನ ಬಿಕ್ಕಟ್ಟು ನಿರ್ಮಾಣಕ್ಕೆ ಕಾರಣವಾಗುತ್ತೆ
* ಅನ್ಯಪೀಠ ಬೇಕಾದರೆ ಹಾಲಿ ದ್ವಿಸದಸ್ಯ ಪೀಠದ ಮುಂದೆಯೇ ಪ್ರಶ್ನೆ ಮಾಡಬೇಕಾಗುತ್ತದೆ; ಇಲ್ಲವೇ, ಬೇರೆ ಪೀಠ ಏರ್ಪಡಿಸಿಕೊಡುವಂತೆ ಸುಪ್ರೀಂ ರಿಜಿಸ್ಟ್ರಾರ್‌ಗೆ ಸರ್ಕಾರ ಮನವಿ ಸಲ್ಲಿಸಬೇಕಾಗುತ್ತೆ
* ವಿಶ್ವಾಸಾರ್ಹತೆ ಪ್ರಶ್ನಿಸುವ ಸರ್ಕಾರದ ನಡವಳಿಕೆ ವಿರುದ್ಧ ನಿರ್ಣಯ ಕೈಗೊಂಡರೆ ಸರ್ಕಾರ ಇಕ್ಕಟ್ಟಿಗೆ ಸಿಲುಕುತ್ತೆ
