ಪಾಕ್ ಪ್ರಧಾನಿ ಇಮ್ರಾನ್ ಖಾನ್‌ಗೆ ನಾಸಿರುದ್ಧಿನ್ ಶಾ ಟಾಂಗ್ | ಪ್ರಧಾನಿ ಮೋದಿ ಬಗ್ಗೆ ಅಲ್ಪಸಂಖ್ಯಾತರ ಬಗೆಗಿನ ಹೇಳಿಕೆ ಶಾ ತಿರುಗೇಟು | 

ನವದೆಹಲಿ (ಡಿ. 24): ಅಲ್ಪಸಂಖ್ಯಾತರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ತೋರಿಸಿಕೊಡುತ್ತೇವೆ ಎಂದು ನೆರೆಯ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಹೇಳಿಕೆಗೆ ಬಾಲಿವುಡ್ ನಟ ನಾಸಿರು ದ್ದೀನ್ ಶಾ ಅವರು ತಿರುಗೇಟು ನೀಡಿದ್ದಾರೆ.

’ಭಿಕ್ಷುಕ’ ಅಂದ್ರೆ ನನ್ನ ಫೋಟೋ ಯಾಕೆ ತೋರಿಸುತ್ತೆ? Googleಗೆ ಇಮ್ರಾನ್ ಪ್ರಶ್ನೆ

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಅವರು ತಮ್ಮ ದೇಶದ ಸಮಸ್ಯೆಗಳನ್ನು ಮೊದಲು ಪರಿಹರಿಸಿಕೊಳ್ಳಲಿ. ನೆರೆಯ ರಾಷ್ಟ್ರ ಅಥವಾ ತಮಗೆ ಸಂಬಂಧಿಸಿಲ್ಲದ ವಿಚಾರದ ಬಗ್ಗೆ ಮೌನವಾಗಿದ್ದರೆ ಒಳಿತು ಎಂದು ಇಮ್ರಾನ್ ಅವರಿಗೆ ನಾಸಿರುದ್ದೀನ್ ಶಾ ಅವರು ಸಲಹೆ ನೀಡಿದ್ದಾರೆ.

ಮುಂಬೈ ದಾಳಿ ನಮ್ಮವರೇ ಮಾಡಿದ್ದು: ಇದನ್ನೇ ಅಲ್ವೇ ಎಲ್ರೂ ಹೇಳಿದ್ದು?

ಈ ಬಗ್ಗೆ ಸಂಡೆ ಎಕ್ಸ್‌ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ನಾಸಿರುದ್ದೀನ್ ಶಾ ಅವರು, ‘ಇಮ್ರಾನ್ ಅವರು ತಮಗೆ ಸಂಬಂಧಿಸಿಲ್ಲದ ವಿಚಾರದ ಬಗ್ಗೆ ಮಾತನಾಡುವ ಬದಲಿಗೆ ತಮ್ಮ ದೇಶದ ಸಮಸ್ಯೆಗಳ ಬಗ್ಗೆ ಮೊದಲು ಗಮನ ಹರಿಸಲಿ’ ಎಂದು ಇಮ್ರಾನ್‌ಗೆ ಟಾಂಗ್ ನೀಡಿದ್ದಾರೆ.