Googleನಲ್ಲಿ ಭಿಕ್ಷುಕ ಎಂದು ಸರ್ಚ್ ಮಾಡಿದರೆ ಪ್ರಧಾನಿ ಇಮ್ರಾನ್ ಖಾನ್‌ರವರ ಫೋಟೋ ಪ್ರಕಟಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಪಾಕ್‌ನ ಪಂಜಾಬ್ ವಿಧಾನಸಭೆ ಗೂಗಲ್ ಸಿಇಒ ಅವರನ್ನು ಈ ವಿಚಾರವಾಗಿ ಪ್ರಶ್ನಿಸಿದೆ.
ಇಸ್ಲಮಾಬಾದ್[ಡಿ.17]: ಕೆಲ ದಿನಗಳ ಹಿಂದಷ್ಟೇ ಗೂಗಲ್‌ನಲ್ಲಿ Idiot ಎಂದು ಸರ್ಚ್ ಮಾಡಿದರೆ ಡೊನಾಲ್ಡ್ ಟ್ರಂಪ್ ಪೋಟೋ ತೋರಿಸುತ್ತಿತ್ತು. ಇದಾದ ಬಳಿಕ ಅಮೆರಿಕಾದ ಸಂಸತ್ತು ಗೂಗಲ್ ಸಿಇಒ ಸುಂದರ್ ಪಿಚೈ ಬಳಿ ಈ ಕುರಿತಾಗಿ ಸ್ಪಷ್ಟನೆ ಪಡೆದಿತ್ತು. ಇದೀಗ ಪಾಕ್ ವಿಚಾರದಲ್ಲೂ ಇಂತಹುದೇ ಪ್ರಕರಣ ಬೆಳಕಿಗೆ ಬಂದಿದ್ದು, ಭಿಕ್ಷುಕ ಎಂದು ಸರ್ಚ್ ಮಾಡಿದರೆ ಪ್ರಧಾನಿ ಇಮ್ರಾನ್ ಖಾನ್ ರವರ ಫೋಟೋ ಪ್ರಕಟಗೊಳ್ಳುತ್ತದೆ.
ಈಡಿಯಟ್ ಎಂದು ಸರ್ಚ್ ಮಾಡಿದಾಗ ಟ್ರಂಪ್ ಪೋಟೊ: Google ಸಿಇಒ ಹೇಳಿದ್ದೇನು?
ಸದ್ಯ ಈ ವಿಚಾರವಾಗಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಿಧಾನಸಭೆಯಲ್ಲಿ ವರದಿಯೊಂದನ್ನು ಪ್ರಸ್ತುತಪಡಿಸಲಾಗಿದೆ. ಇದರಲ್ಲಿ ಗೂಗಲ್ ನಲ್ಲಿ ಭಿಕ್ಷುಕ ಎಂದು ಸರ್ಚ್ ಮಾಡಿದಾಗ ಪಾಕ್ ಪ್ರಧಾನಿ ಇಮ್ರಾನ್ ಖಾನ್‌ರವರ ಫೋಟೋ ಏಕೆ ಕಾಣಿಸಿಕೊಳ್ಳುತ್ತದೆ? ಗೂಗಲ್ ಸಿಇಒ ಸುಂದರ್ ಪಿಚೈರನ್ನು ಪ್ರಶ್ನಿಸಿದ್ದು, ಸಾಕ್ಷಿಯಾಗಿ ಪಾಕ್ ಪತ್ರಕರ್ತರೊಬ್ಬರು ಶೇರ್ ಮಾಡಿಕೊಂಡಿರುವ ಫೋಟೋಗಳನ್ನೂ ಲಗತ್ತಿಸಲಾಗಿದೆ.
ಕೆಲ ದಿನಗಳ ಹಿಂದೆ ಅಮೆರಿಕಾದ ಸಂಸತ್ತಿಗೆ ತೆರಳಿದ್ದ ಸುಂದರ್ ಪಿಚೈ ಬಳಿ Idiot ಎಂಬ ಶಬ್ಧವನ್ನು ಸರ್ಚ್ ಮಾಡಿದಾಗ ಟ್ರಂಪ್ ಫೋಟೋ ಯಾಕೆ ಕಾಣಿಸಿಕೊಳ್ಳುತ್ತದೆ ಎಂದು ಪ್ರಶ್ನಿಸಲಾಗಿತ್ತು. ಈ ವೆಳೆ ಉತ್ತರಿಸಿದ್ದ ಪಿಚೈ ಗೂಗಲ್ ಅರ್ಚ್ ಇಂಜಿನ್ ಫಲಿತಾಂಶ ಪ್ರಕಟಿಸಲು ಹಲವಾರು ವಿಚಾರಗಳನ್ನು ಪರಿಶೀಲಿಸುತ್ತದೆ. ಬಳಿಕ ಹೋಲಿಕೆಯಾಗುವ ಟಾಪಿಕ್, ಪಾಪ್ಯುಲಾರಿಟಿ ಮೊದಲಾದವುಗಳನ್ನು ವಿಶ್ಲೇಷಿಸಿ ಉತ್ತಮವಾದ ರಿಸಲ್ಟ್ ನೀಡುತ್ತದೆ ಎಂದಿದ್ದರು.
ಕಳೆದ ಕೆಲ ದಿನಗಳಿಂದ ಪಾಕಿಸ್ತಾನ ಆರ್ಥಿಕವಾಗಿ ಕುಸಿತ ಕಂಡಿದೆ. ಆರ್ಥಿಕ ಸ್ಥಿತಿಯನ್ನು ನಿಯಂತ್ರಿಸಲು ಸಾಲ ಪಡೆಯಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಇಮ್ರಾನ್ ಖಾನ್ ಹಲವಾರು ರಾಷ್ಟ್ರಗಳಿಗೆ ಭೇಟಿ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಮಂದಿ ಮೀಮ್ಸ್ ಕೂಡಾ ಮಾಡಿದ್ದಾರೆ.
