ಗುಡುಗುಸಹಿತ ಮಳೆಗೆ ತಾಜ್'ಮಹಲ್ ಗೇಟ್'ಗಳಿಗೆ ಹಾನಿ

news | Thursday, April 12th, 2018
Suvarna Web Desk
Highlights

ಪ್ರವಾಸಿ ತಾಣದ ದಕ್ಷಿಣ ದ್ವಾರದ ಗೇಟುಗಳು, ಕೆಲವು ವಿಶೇಷ ವಸ್ತುಗಳು ಹಾನಿಗೊಳಗಾಗಿವೆ. ಆದರೆ ಕಟ್ಟಡಕ್ಕೆ ಯಾವುದೇ ರೀತಿಯ ತೊಂದರೆಯಾಗಿಲ್ಲ.

ನವದೆಹಲಿ(ಏ.12): ಆಗ್ರದಲ್ಲಿ ಗುಡುಗುಸಹಿತ ಮಳೆಗೆ ವಿಶ್ವವಿಖ್ಯಾತ ತಾಜ್'ಮಹಲ್'ನ ಪ್ರವೇಶದ್ವಾರದ ಗೇಟ್'ಗಳು ಹಾನಿಗೊಳಗಾಗಿವೆ.

ಮೊಘಲ್ ಚಕ್ರವರ್ತಿ ಶಹಜಹಾನ್ ನಿರ್ಮಿತ ತಾಜ್ ಯುನೆಸ್ಕೋದಿಂದ ವಿಶ್ವ ಪಾರಂಪರಿಕ ಸ್ಥಳಗಳ ಪಟ್ಟಿಯ ಇತರ 11 ಅದ್ಭುತಗಳಲ್ಲಿ ಸ್ಥಾನ ಪಡೆದುಕೊಂಡಿದೆ. ನಿನ್ನೆ ಸುರಿದ ಗುಡುಗು ಸಹಿತ ಭಾರಿ ಮಳೆಗೆ ಪ್ರವೇಶದ್ವಾರದ ಗೇಟುಗಳು,ಧ್ವಜಸ್ತಂಭ ಮುರಿದುಕೊಂಡಿವೆ.

ಪ್ರವಾಸಿ ತಾಣದ ದಕ್ಷಿಣ ದ್ವಾರದ ಗೇಟುಗಳು, ಕೆಲವು ವಿಶೇಷ ವಸ್ತುಗಳು ಹಾನಿಗೊಳಗಾಗಿವೆ. ಆದರೆ ಕಟ್ಟಡಕ್ಕೆ ಯಾವುದೇ ರೀತಿಯ ತೊಂದರೆಯಾಗಿಲ್ಲ. ಅಸ್ತವ್ಯಸ್ತಗೊಂಡಿರುವ ಎಲ್ಲ ವಸ್ತುಗಳನ್ನು ಪರಿಶೀಲಿಸಿ ಪುನರ್'ನಿರ್ಮಾಣ ಕಾರ್ಯ ಕೈಗೊಳ್ಳುವುದಾಗಿ ಭಾರತದ ಪುರತತ್ವ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗ್ರ,ಫಿರೋಜಾಬಾದ್ ಮುಂತಾದ ಕಡೆ ಗುಡುಗುಸಹಿತ ಮಳೆಯಿಂದಾಗಿ 8 ಮಂದಿ ಮೃತಪಟ್ಟಿದ್ದಾರೆ.

Comments 0
Add Comment

    Tree Fall Down on Car

    video | Friday, March 23rd, 2018