Asianet Suvarna News Asianet Suvarna News

ತಾಜ್‌ಮಹಲ್‌ ನೋಡಲು 3ಗಂಟೆ ಮಾತ್ರ ಅವಕಾಶ

ಇತ್ತೀಚೆಗೆ ತಾಜ್‌ಮಹಲ್‌ ಪ್ರವೇಶದ ದರ ಏರಿಕೆಯಾದ ಬೆನ್ನಲ್ಲೇ, ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ)ಯು ತಾಜ್‌ಮಹಲ್‌ ವೀಕ್ಷಣೆ ಅವಧಿಯನ್ನೂ ಕಡಿತಗೊಳಿಸಲು ಮುಂದಾಗಿದೆ.

Taj Mahal Entry tickets to be valid for 3 Hours only

ಲಕ್ನೋ: ಇತ್ತೀಚೆಗೆ ತಾಜ್‌ಮಹಲ್‌ ಪ್ರವೇಶದ ದರ ಏರಿಕೆಯಾದ ಬೆನ್ನಲ್ಲೇ, ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್‌ಐ)ಯು ತಾಜ್‌ಮಹಲ್‌ ವೀಕ್ಷಣೆ ಅವಧಿಯನ್ನೂ ಕಡಿತಗೊಳಿಸಲು ಮುಂದಾಗಿದೆ.

ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿರುವ ಎಎಸ್‌ಐ, ಕೇವಲ 3 ಗಂಟೆ ಮಾತ್ರ ತಾಜ್‌ಮಹಲ್‌ ವೀಕ್ಷಣೆಗೆ ಅವಕಾಶ ನೀಡಲಿದ್ದು, ಈ ನಿಯಮ ಏ.1 ರಿಂದಲೇ ಜಾರಿಗೆ ತರಲಾಗುತ್ತದೆಂದು ತಿಳಿಸಿದೆ.

ಕೆಲ ತಜ್ಞರು ‘ಮಾನವ ಮಾಲಿನ್ಯ’ದ ಬಗ್ಗೆ ವರದಿ ಮಾಡಿ ಸಲಹೆ ನೀಡಿದ ಬಳಿಕ ತಾಜ್‌ಮಹಲ್‌ನಲ್ಲಿ ಜನಸಂದಣಿ ಮತ್ತು ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಎಎಸ್‌ಐ ಈ ನಿರ್ಧಾರಕ್ಕೆ ಬಂದಿದೆ. ಪ್ರಸ್ತುತ ಪ್ರತೀ ವಾರಾಂತ್ಯ 50,000 ಜನ ತಾಜ್‌ಗೆ ಭೇಟಿ ನೀಡುತ್ತಿದ್ದಾರೆ.

Follow Us:
Download App:
  • android
  • ios