ಚನ್ನರಾಯಪಟ್ಟಣ ತಹಸೀಲ್ದಾರ್ ವಿದ್ಯಾವತಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಎದುರು ಕಣ್ಣೀರು ಹಾಕಿರುವ ಘಟನೆ ಹಾಸನ ಜಿಲ್ಲಾಪಂಚಾಯ್ತಿಯಲ್ಲಿ ನಡೆದಿದೆ.
ಬೆಂಗಳೂರು (ಏ.05): ಚನ್ನರಾಯಪಟ್ಟಣ ತಹಸೀಲ್ದಾರ್ ವಿದ್ಯಾವತಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಎದುರು ಕಣ್ಣೀರು ಹಾಕಿರುವ ಘಟನೆ ಹಾಸನ ಜಿಲ್ಲಾಪಂಚಾಯ್ತಿಯಲ್ಲಿ ನಡೆದಿದೆ.
ನನಗೆ ನಿವೃತ್ತಿಗೆ ಎರಡೂವರೆ ತಿಂಗಳ ಮಾತ್ರ ಇದ್ದು, ಈ ವೇಳೆ ನನ್ನನ್ನು ಕಡ್ಡಾಯ ರಜೆ ಮೇಲೆ ಡಿಸಿ ಕಳುಹಿಸುತ್ತಿದ್ದಾರೆ. ಹೀಗಾಗಿ ಮಾನಸಿಕ ತುಂಬಾ ನೊಂದಿದ್ದೇನೆ, ನನಗೆ ನ್ಯಾಯ ಕೊಡಿಸಿ ಎಂದು ಸಚವರಲ್ಲಿ ಮನವಿ ಮಾಡಿದರು. ಆದರೆ ತಹಸೀಲ್ದಾರ್ ವಿದ್ಯಾವತಿಯನ್ನು ಗದರಿಸಿದ ಸಚಿವರು, ಇದು ಅಧಿಕಾರಿಗಳ ನಡವಳಿಕೆ ಅಲ್ಲ ಅಂದರು. ಜಿಲ್ಲಾ ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಘಟನೆ ನಡೆಯಿತು.
ಈ ವೇಳೆ ಶಾಸಕರಾದ ಹೆಚ್ಡಿ ರೇವಣ್ಣ, ಬಾಲಕೃಷ್ಣ ತಹಸಿಲ್ದಾರ್ ಬೆಂಬಲಕ್ಕೆ ನಿಂತರು. ಕರ್ತವ್ಯದಲ್ಲಿ ಲೋಪ ತೋರಿದ ಹಿನ್ನೆಲೆ ಚನ್ನರಾಯಪಟ್ಟಣ ತಹಸಿಲ್ದಾರ್ ವಿದ್ಯಾವತಿಗೆ ಡಿಸಿ ಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚಿಸಿದ್ದಾರೆ. ಅಲ್ಲದೇ ತಾಲೂಕಿನಲ್ಲಿ ಮೇವು ಪೂರೈಕೆ, ಕುಡಿಯುವ ನೀರು ನಿರ್ವಹಣೆ ಕೆಲಸದಲ್ಲಿ ಲೋಪ ತೋರಿದ್ದೀರೆಂದು ತಹಸಿಲ್ದಾರ್ಗೆ ನೀಡಿದ ನೋಟೀಸ್ನಲ್ಲಿ ಡಿಸಿ ಉಲ್ಲೇಖಿಸಿದ್ದಾರೆ. ಡಿಸಿ ಆದೇಶ ಹಿಂಪಡೆದು ನನಗೆ ಕೆಲಸ ಮಾಡಲು ಅವಕಾಶ ಮಾಡಿಕೊಡುವಂತೆ ತಹಸಿಲ್ದಾರ್ ಮನವಿ ಮಾಡಿದ್ದಾರೆ.
