ಯೂ ಟ್ಯೂಬ್‌ನಲ್ಲಿ ನಕಲಿ ವಸ್ತುಗಳ ಬಗ್ಗೆ ನೋಡುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಪ್ಲಾಸ್ಟಿಕ್‌ನಿಂದ ತಯಾರಿಸಿದ ದಿನನಿತ್ಯದ ವಸ್ತುಗಳ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ವೇಳೆ ಮನೆಗೆ ತಂದಿದ್ದ ಕೋಸುಗಡ್ಡೆಯನ್ನು ಪರೀಕ್ಷಿಸಲೆಂದು ಮಹಿಳೆ, ಕೋಸುಗಡ್ಡೆಯನ್ನು ಸುಮ್ಮನೆ ಕತ್ತರಿಸಿದಾಗ, ಅದು ನೈಸರ್ಗಿಕ ಕೋಸುಗಡ್ಡೆಯಂತೆ ಸುಲಭವಾಗಿ ಕತ್ತರಿಸಲು ಬಂದಿಲ್ಲ.!

ಯೂ ಟ್ಯೂಬ್ನಲ್ಲಿ ನಕಲಿ ವಸ್ತುಗಳ ಬಗ್ಗೆ ನೋಡುತ್ತಿದ್ದ ವೇಳೆ ಮಹಿಳೆಯೊಬ್ಬರಿಗೆ ಪ್ಲಾಸ್ಟಿಕ್ನಿಂದ ತಯಾರಿಸಿದ ದಿನನಿತ್ಯದ ವಸ್ತುಗಳ ಬಗ್ಗೆ ಮಾಹಿತಿ ಸಿಕ್ಕಿತ್ತು. ಈ ವೇಳೆ ಮನೆಗೆ ತಂದಿದ್ದ ಕೋಸುಗಡ್ಡೆಯನ್ನು ಪರೀಕ್ಷಿಸಲೆಂದು ಮಹಿಳೆ, ಕೋಸುಗಡ್ಡೆಯನ್ನು ಸುಮ್ಮನೆ ಕತ್ತರಿಸಿದಾಗ, ಅದು ನೈಸರ್ಗಿಕ ಕೋಸುಗಡ್ಡೆಯಂತೆ ಸುಲಭವಾಗಿ ಕತ್ತರಿಸಲು ಬಂದಿಲ್ಲ. ನಂತರ ಎಲೆಯನ್ನು ಗ್ಯಾಸ್ಸ್ಟೌವ್ನಲ್ಲಿ ಬೆಂಕಿಗೆ ಹಿಡಿದಾಗ, ಹಲವು ಸೆಕೆಂಡ್ಗಳ ಬಳಿಕವೂ ಯಾವುದೇ ವ್ಯತ್ಯಾಸ ಕಾಣದೇ ಹಾಗೆಯೇ ಉಳಿದುಕೊಂಡಿದೆ.
ಇದು ಮಹಿಳೆಯನ್ನು ಗಾಬರಿಗೆ ಗುರಿ ಮಾಡಿದ್ದು, ಈ ಕುರಿತು ವಿಡಿಯೋವನ್ನು ಆಕೆ ಯೂ ಟ್ಯೂಬ್ನಲ್ಲಿ ಹಾಕಿದ್ದಾರೆ. ಮನೆಯ ಬಳಿಯೇ ಇದ್ದ ಖ್ಯಾತನಾಮ ಮಳಿಗೆಯೊಂದರಿಂದ ಈ ಕೋಸು ಖರೀದಿಸಿ ತಂದಿದ್ದೆ. ಪರೀಕ್ಷೆ ಬಳಿಕ ಅದು, ಪ್ಲಾಸ್ಟಿಕ್ನಿಂದ ತಯಾರಿಸಿದ್ದು ಎಂದು ಕಂಡುಬಂದಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
