ಬೆಳಗ್ಗೆ ತಿಂಡಿಗೆ ಏನು ಮಾಡುವುದು? ಬೇಗ ತಯಾರಿಸುವ ತಿನಿಸು ಏನಿದೆ ಎಂದು ಯೋಚಿಸುತ್ತಿರುವಿರಾ? ಇಲ್ಲಿದೆ ನೋಡಿ ನಿಮಗಾಗಿ ಆಲೂ ಪಲಾವ್
ಬೆಳಗ್ಗೆ ತಿಂಡಿಗೆ ಏನು ಮಾಡುವುದು? ಬೇಗ ತಯಾರಿಸುವ ತಿನಿಸು ಏನಿದೆ ಎಂದು ಯೋಚಿಸುತ್ತಿರುವಿರಾ? ಇಲ್ಲಿದೆ ನೋಡಿ ನಿಮಗಾಗಿ ಆಲೂ ಪಲಾವ್
ಬೇಕಾಗುವ ಸಾಮಗ್ರಿಗಳು: ಅನ್ನ 3 ಕಪ್, ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ 10, ಕತ್ತರಿಸಿದ ಈರುಳ್ಳಿ 1/2 ಕಪ್, ಶುಂಠಿ ರಸ 1 ಟೀ ಚಮಚ, ಮೆಣಸಿನ ಪುಡಿ 1/2 ಟೀ ಚಮಚ, 2 ಆಲೂಗಡ್ಡೆ, ಎಣ್ಣೆ 3 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಗೆ ಎಣ್ಣೆ ಹಾಕಿ ಕಾಯಿಸಿಕೊಳ್ಳಿ, ಎಣ್ಣೆ ಕಾಯುವಾಗ ಅದಕ್ಕೆ ಬೆಳ್ಳುಳ್ಳಿ ಮತ್ತು ಈರುಳ್ಳಿ ಸೇರಿಸಿ, ಅದು ಕಂದು ಬಣ್ಣ ಬಂದ ನಂತರ ಅದಕ್ಕೆ ಆಲೂಗಡ್ಡೆ ಮತ್ತು ಉಪ್ಪು ಸೇರಿಸಿ ಚನ್ನಾಗಿ ಮಿಶ್ರ ಮಾಡಿ. ನಂತರ ಅದಕ್ಕೆ ಶುಂಠಿ ರಸ ಮತ್ತು ಮೆಣಸಿನ ಪುಡಿ ಸೇರಿಸಿ ಮಿಶ್ರ ಮಾಡಿ. ಅಂತಿಮವಾಗಿ ಅದಕ್ಕೆ ಅನ್ನವನ್ನು ಸೇರಿಸಿ. ಬಿಸಿ ಮಾಡಿದರೆ ಆಲೂ ಪಲಾವ್ ಸವಿಯಲು ಸಿದ್ದ. ರುಚಿಗೆ ಬೇಕಾದರೆ ಒಣ ದ್ರಾಕ್ಷಿ, ಗೋಡಂಬಿ ಕೊತ್ತಂಬರಿ ಸೊಪ್ಪು ಸೇರಿಸಬಹುದು.
