ವಿಭೂತಿಪುರ ಮಠದ ಶ್ರೀ ಮಹಾಂತಲಿಂಗ ಸ್ವಾಮೀಜಿಗಳು ಈಗ ಹಣ ಕಳೆದುಕೊಂಡು ಪರದಾಟ ನಡೆಸಿದ್ದಾರೆ. ಕಳೆದ ಜೂನ್ನಲ್ಲಿ ಪರಿಚಯವಾದ ಉಮೇಶ್ ಎಂಬಾತನನ್ನು ನಂಬಿದ ಗೂರೂಜಿ, ತಮ್ಮ ಕಡೆಯ ಇಬ್ಬರು ಹುಡುಗರಿಗೆ ಸರ್ಕಾರಿ ಕೆಲಸ ಕೊಡಿಸಬೇಕೆಂದು ಅದಕ್ಕಾಗಿ ಐದು ಲಕ್ಷ ಹಣವನ್ನು ಕೊಟ್ಟಿದ್ದಾರೆ. ಆದರೆ ಕೆಲಸವೂ ಕೊಡಿಸದೇ ಹಣವನ್ನೂ ವಾಪಾಸ್ ಕೊಡದಿದ್ದಾಗ ಗೂರೂಜಿ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ದೂರು ನೀಡಿದ್ದರು.
ಬೆಂಗಳೂರು(ನ.20): ಬೆಂಗಳೂರಿನ ಸ್ವಾಮೀಜಿಯೊಬ್ಬರು ತಮ್ಮ ಹುಡುಗರಿಗೆ ಲಂಚ ಕೊಟ್ಟು ಸರ್ಕಾರಿ ಕೆಲಸ ಕೊಡಿಸಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ.
ವಿಭೂತಿಪುರ ಮಠದ ಶ್ರೀ ಮಹಾಂತಲಿಂಗ ಸ್ವಾಮೀಜಿಗಳು ಈಗ ಹಣ ಕಳೆದುಕೊಂಡು ಪರದಾಟ ನಡೆಸಿದ್ದಾರೆ. ಕಳೆದ ಜೂನ್ನಲ್ಲಿ ಪರಿಚಯವಾದ ಉಮೇಶ್ ಎಂಬಾತನನ್ನು ನಂಬಿದ ಗೂರೂಜಿ, ತಮ್ಮ ಕಡೆಯ ಇಬ್ಬರು ಹುಡುಗರಿಗೆ ಸರ್ಕಾರಿ ಕೆಲಸ ಕೊಡಿಸಬೇಕೆಂದು ಅದಕ್ಕಾಗಿ ಐದು ಲಕ್ಷ ಹಣವನ್ನು ಕೊಟ್ಟಿದ್ದಾರೆ. ಆದರೆ ಕೆಲಸವೂ ಕೊಡಿಸದೇ ಹಣವನ್ನೂ ವಾಪಾಸ್ ಕೊಡದಿದ್ದಾಗ ಗೂರೂಜಿ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ಸ್ವಾಮೀಜಿ ದೂರು ನೀಡಿದ್ದರು.
ವಂಚನೆ ಪ್ರಕರಣದ ಆರೋಪದ ಮೇಲೆ ಸದ್ಯ ಪೊಲೀಸರು ಉಮೇಶ್ನನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ವೇಳೆ ಆರೋಪಿ ಉಮೇಶ್ ತಪ್ಪೊಪ್ಪಿಗೆ ಹೇಳಿಕೆ ಕೂಡ ನೀಡಿದ್ದಾನೆ.