ಸ್ವಾಮೀಜಿ ಉದ್ಧಟತನಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿದೆ.

ನೆಲಮಂಗಲ(ನ.08): ಮಠದ ಉದ್ಘಾಟನೆ ವೇಳೆ ಸ್ವಾಮೀಜಿಯೊಬ್ಬರು ಶಿವಲಿಂಗದ ಮೇಲೆ ಕಾಲಿಟ್ಟು ಪೂಜೆ ಮಾಡಿಸಿಕೊಂಡು ಉದ್ಧಟತನ ತೋರಿದ್ದಾರೆ.

ನೆಲಮಂಗಲದ ಜಡೆ ಶಾಂತಲಿಂಗೇಶ್ವರ ಶಾಖಾ ಮಠ ಉದ್ಘಾಟನೆ ವೇಳೆ ಶಾಂತಲಿಂಗೇಶ್ವರ ಸ್ವಾಮೀಜಿಗಳು ಶಿವಲಿಂಗದ ಮೇಲೆ ಕಾಲಿಟ್ಟು ಪೂಜೆ ಮಾಡಿಸಿಕೊಂಡಿದ್ದಾರೆ. ಸ್ವಾಮೀಜಿ ಉದ್ಧಟತನಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿದೆ.