ಒಂದು ಕಾಲು ಕಳೆದುಕೊಂಡಿರುವ ಅವರ ನೆರವಿಗಾಗಿ ಸುವರ್ಣ ನ್ಯೂಸ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು.  ನಿನ್ನೆಯಿಂದಲೇ ಸತ್ಯಜಿತ್ ಅವರ ಸಂಕಷ್ಟದ ದಿನಗಳನ್ನ ಕಥೆಯನ್ನ ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು.

ಗ್ಯಾಂಗ್ರಿನ್​ನಿಂದ ಒಂದು ಕಾಲು ಕಳೆದುಕೊಂಡು ಸಂಕಷ್ಟ ಅನುಭವಿಸುತ್ತಿರುವ ಹಿರಿಯ ನಟ ಸತ್ಯಜಿತ್ ವರದಿಯನ್ನ ನಿನ್ನೆ ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು. ಇದೀಗ ಸತ್ಯಜಿತ್ ಅವರಿಗೆ ಕೆಲವರು ನೆರವಿಗೆ ಮುಂದಾಗಿದ್ದಾರೆ. ಕಳೆದ 5 ತಿಂಗಳಿನಿಂದ ಸತ್ಯಜಿತ್ ಮನೆಯಲ್ಲಿಯೇ ಇದ್ದಾರೆ. ಒಂದು ಕಾಲು ಕಳೆದುಕೊಂಡಿರುವ ಅವರ ನೆರವಿಗಾಗಿ ಸುವರ್ಣ ನ್ಯೂಸ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು. ನಿನ್ನೆಯಿಂದಲೇ ಸತ್ಯಜಿತ್ ಅವರ ಸಂಕಷ್ಟದ ದಿನಗಳನ್ನ ಕಥೆಯನ್ನ ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು. ಇಂದೂ ಕೂಡ ಪ್ರಸಾರ ಮಾಡ್ತಿದೆ. ಅದನ್ನ ನೋಡಿದ ಸುದೀಪ್ ಅಭಿಮಾನಿಗಳ ಸಂಘದ ಸದಸ್ಯರು ಸತ್ಯಜಿತ್ ಮನೆಗೆ ದಾವಿಸಿದರು. ಹೆಗಡೆ ನಗರದ ಅವರ ಮನೆಯಲ್ಲಿಯೇ 50 ಸಾವಿರ ರೂಪಾಯಿ ನೆರವು ನೀಡಿದರು.