ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 700 ರೂಪಾಯಿ ಲಂಚ ನೀಡಿಲ್ಲವೆಂಬ ಕಾರಣಕ್ಕಾಗಿ ಸಿಬ್ಬಂದಿ 20 ವಾರದ ಭ್ರೂಣವೊಂದನ್ನು ಮುಟ್ಟಲು ನಿರಾಕರಿಸಿರುವ ಅಮಾನವೀಯ ಘಟನೆ ನಡೆದಿದೆ. ಇನ್ನು ಸಿಬ್ಬಂದಿಗಳು ಕೇಳಿದಷ್ಟು ತನ್ನ ಬಳಿ ಹಣವಿಲ್ಲ ಎಂದು ಪ್ಲಾಸ್ಟಕ್ ಕವರ್'ನಲ್ಲೇ ಆ ಭ್ರೂಣವನ್ನು ಹಿಡಿದು ಒಂದೂವರೆ ಗಂಟೆಗಳ ಕಾಲ ಹಿಡಿದುಕೊಂಡು ಆಸ್ಪತ್ರೆಯ ವಾರ್ಡ್ ಹೊರಗಡೆ ನಿಂತ ದೃಶ್ಯಗಳು ಎಂತಹವರ ಮನವನ್ನೂ ಕರಗಿಸುವಂತಿವೆ. ಆದರೆ ಈ ವಿಚಾರದ ಕುರಿತಾಗಿ ಕಿಮ್ಸ್ ಆಸ್ಪತ್ರೆಯ ಅಧಿಕಾರಿಗಳ ಬಳಿ ವಿಚಾರಿಸಿದಾಗ ಈ ಕುರಿತಾಗಿ ನಾವು ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಹುಬ್ಬಳ್ಳಿ(ಜೂ.03): ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ 700 ರೂಪಾಯಿ ಲಂಚ ನೀಡಿಲ್ಲವೆಂಬ ಕಾರಣಕ್ಕಾಗಿ ಸಿಬ್ಬಂದಿ 20 ವಾರದ ಭ್ರೂಣವೊಂದನ್ನು ಮುಟ್ಟಲು ನಿರಾಕರಿಸಿರುವ ಅಮಾನವೀಯ ಘಟನೆ ನಡೆದಿದೆ. ಇನ್ನು ಸಿಬ್ಬಂದಿಗಳು ಕೇಳಿದಷ್ಟು ತನ್ನ ಬಳಿ ಹಣವಿಲ್ಲ ಎಂದು ಪ್ಲಾಸ್ಟಕ್ ಕವರ್'ನಲ್ಲೇ ಆ ಭ್ರೂಣವನ್ನು ಹಿಡಿದು ಒಂದೂವರೆ ಗಂಟೆಗಳ ಕಾಲ ಹಿಡಿದುಕೊಂಡು ಆಸ್ಪತ್ರೆಯ ವಾರ್ಡ್ ಹೊರಗಡೆ ನಿಂತ ದೃಶ್ಯಗಳು ಎಂತಹವರ ಮನವನ್ನೂ ಕರಗಿಸುವಂತಿವೆ. ಆದರೆ ಈ ವಿಚಾರದ ಕುರಿತಾಗಿ ಕಿಮ್ಸ್ ಆಸ್ಪತ್ರೆಯ ಅಧಿಕಾರಿಗಳ ಬಳಿ ವಿಚಾರಿಸಿದಾಗ ಈ ಕುರಿತಾಗಿ ನಾವು ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಕಿಮ್ಸ್ ಆಸ್ಪತ್ರೆಯ ಈ ಪ್ರಕರಣ ಇದೀಗ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ಈ ಕುರಿತಾಗಿ ಆರೋಗ್ಯ ಸಚಿವ ರಮೇಶ್ ಕುಮಾರ್'ರವರ ಬಳಿ ಕೇಳಿದಾಗ 'ಈ ವಿಚಾರ ನನ್ನ ವ್ಯಾಪ್ತಿಗೆ ನನ್ನ ವ್ಯಾಪ್ತಿಗೆ ಬರುವುದಿಲ್ಲ, ವೈದ್ಯಕೀಯ ಶಿಕ್ಷಣ ಸಚಿವರ ವ್ಯಾಪ್ತಿಗೆ ಬರುತ್ತದೆ' ಎಂದು ಅಸಡ್ಡೆಯ ಉತ್ತರ ನೀಡಿದ್ದಾರೆ

ಇದೀಗ ಈ ಲಂಚ ಬಾಕರ ಹಸಿವು ನೀಗಿಸುವ ನಿಟ್ಟಿನಲ್ಲಿ ಸುವರ್ಣ ನ್ಯೂಸ್ 'ಲಂಚಕ್ಕಾಗಿ ಚಂದಾ' ಎಂಬ ವಿನೂತನ ಅಭಿಯಾನವೊಂದನ್ನು ಆರಂಭಿಸಿದೆ. ಈ ಅಭಿಯಾನದ ಮೂಲಕ ಸುವರ್ಣ ನ್ಯೂಸ್ ಲಂಚಕ್ಕಾಗಿ ಬಡವರ ಪ್ರಾಣ ಹಿಂಡಬೇಡಿ, ಇದಕ್ಕಾಗಿ ಸಾರ್ವಜನಿಕರಿಂದ ಚಂದಾ ಸಂಗ್ರಹಿಸಿ ನಾವು ಲಂಚ ನೀಡುತ್ತೇವೆ' ಎಂಬ ಸಂದೇಶ ನೀಡುತ್ತಿದೆ.

ವಾಹಿನಿಯ ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯಡೆ ವ್ಯಕ್ತವಾಗಿದೆ. ಈ ಅಭಿಯಾನಕ್ಕೆ ಬೆಂಬಲಿಸಿರುವ ನಟ ಜಗ್ಗೇಶ್ ಅಭಿಯಾನಕ್ಕಾಗಿ ತನ್ನ ವತಿಯಿಂದ 5000 ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ. ಇನ್ನು ನೆನಪಿರಲಿ ಸಿನಿಮಾ ನಟ ಪ್ರೇಮ್ ಕೂಡಾ ಪ್ರತಿಕ್ರಿಯೆ ನೀಡಿದ್ದು ಮಹಿಳೆಯ ಬಳಿ ಕೇಳಿದ ಲಂಚ ತಾನೇ ನೀಡುವುದಾಗಿ ಹೇಳಿದ್ದಾರೆ.