ದಿ ನ್ಯೂ ಇಂಡಿಯನ್ ಟೈಮ್ಸ್ ಮೀಡಿಯಾ ಅವಾರ್ಡ್ ಘೋಷಣೆ ಸುವರ್ಣ ನ್ಯೂಸ್ ಸಿಬ್ಬಂದಿಗೆ ಹೆಚ್ಚಿನ ಪಾಲು

ಬೆಂಗಳೂರು[ಜೂ.16]: ದಿ ನ್ಯೂ ಇಂಡಿಯನ್ ಟೈಮ್ಸ್ ಮೀಡಿಯಾ ಅವಾರ್ಡ್'ನಲ್ಲಿ ಸುವರ್ಣ ನ್ಯೂಸ್ ಗೆ ಸಿಂಹ ಪಾಲು ಲಭಿಸಿದೆ.

ಬೆಸ್ಟ್ ಅಲ್ ರೌಂಡ್ ವಿಭಾಗದಲ್ಲಿ ಸುವರ್ಣ ನ್ಯೂಸ್ ನ ಜಯಪ್ರಕಾಶ್ ಶೆಟ್ಟಿ, ಬೆಸ್ಟ್ ಪೊಲಿಟಿಕಲ್ ರಿಪೋರ್ಟರ್ ವಿಭಾಗದಲ್ಲಿ ಆನಂದ ಬೈದನಮನೆ, ಬೆಸ್ಟ್ ರಿಪೋರ್ಟರ್ ವಿಭಾಗದಲ್ಲಿ ಮಮತಾ, ಸಿನಿಮಾ ವಿಭಾಗದಲ್ಲಿ ಸುಗುಣ, ಬೆಸ್ಟ್ ವಿಡಿಯೋ ಎಡಿಟರ್ ವಿಭಾಗದಲ್ಲಿ ನಂದಾ ಹಾಗೂ ಧನಂಜಯ ಆಯ್ಕೆಯಾಗಿದ್ದಾರೆ.

ಟಿಎನ್ ಐಟಿ ನೆಟ್ ವರ್ಕ್ ಸಂಸ್ಥೆ ಮೀಡಿಯಾದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದೆ. ಬೆಂಗಳೂರಿನ ತೆಲುಗು ವಿಜ್ಞಾನ ಸಮಿತಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ನಟ ವಿಜಯ್ ರಾಘವೇಂದ್ರ, ಬಿಗ್ ಬಾಸ್ ಖ್ಯಾತಿಯ ಕೀರ್ತಿ ಶಂಕರಘಟ್ಟ ಭಾಗಿಯಾಗಿದ್ದರು.