ಮುಂಬರುವ ವರ್ಷಗಳಲ್ಲಿ ಭಾರತೀಯ ಡಿಜಿಟಲ್ ಕ್ಷೇತ್ರದಲ್ಲಿ ಪ್ರಾದೇಶಿಕ ಭಾಷೆಗಳದ್ದೇ ಪ್ರಾಬಲ್ಯ ಎಂಬುದು ಪರಿಣಿತರ ಅಂದಾಜು. ಇಂಟರ್ನೆಟ್ ಬಳಸುವ ಕನ್ನಡ ಭಾಷಿಕರ ಸಂಖ್ಯೆ ಸಿಕ್ಕಾಪಟ್ಟೆ ಏರಲಿದೆ ಎಂದು ಗೂಗಲ್ ಸಂಸ್ಥೆಯ ವರದಿಯೊಂದು ತಿಳಿಸಿದೆ. ಸುವರ್ಣನ್ಯೂಸ್ ಜಾಲತಾಣ ತೋರಿರುವ ಅದ್ಭುತ ಪ್ರಗತಿಯು ಈ ಮಾತಿಗೆ ಪುಷ್ಟಿ ನೀಡಿದೆ.
ಬೆಂಗಳೂರು: ಪತ್ರಿಕೋದ್ಯಮದಲ್ಲಿ ನೇರ ದಿಟ್ಟ ನಿರಂತರ ಸುದ್ದಿ ಮೂಲಕ ಹೊಸ ಭಾಷ್ಯ ಬರೆದಿರುವ ಸುವರ್ಣನ್ಯೂಸ್ ವಾಹಿನಿ ಈಗ ಕನ್ನಡ ಡಿಜಿಟಲ್ ಕ್ಷೇತ್ರದಲ್ಲಿ ಅದ್ವಿತೀಯ ಪ್ರಗತಿ ತೋರಿದೆ. ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್'ಗೆ ಸೇರಿದ ಸುವರ್ಣನ್ಯೂಸ್ ವೆಬ್'ಸೈಟ್ ಕಳೆದ ವರ್ಷದಕ್ಕಿಂತ ಈ ವರ್ಷ 20 ಪಟ್ಟು ಹೆಚ್ಚು ಓದುಗರ ಬಳಗವನ್ನು ಹೆಚ್ಚಿಸಿಕೊಂಡಿದೆ. ಏಷ್ಯಾನೆಟ್ ನ್ಯೂಸ್ ವೆಬ್'ಸೈಟ್ ಮೂಲಕ ಮಲಯಾಳ ಭಾಷಾ ಮಾರುಕಟ್ಟೆಯಲ್ಲಿ ಪ್ರಬಲ ಬೇರು ಬಿಟ್ಟಿರುವ ಏಷ್ಯಾನೆಟ್'ನ್ಯೂಸ್ ನೆಟ್ವರ್ಕ್ ಈಗ ಸುವರ್ಣನ್ಯೂಸ್ ಮೂಲಕ ಕರ್ನಾಟಕದಲ್ಲಿ ನಂಬರ್ ಒನ್ ಆಗುವತ್ತ ದಿಟ್ಟ ಹೆಜ್ಜೆ ಇಟ್ಟಿದೆ.
ಮುಂಬರುವ ವರ್ಷಗಳಲ್ಲಿ ಭಾರತೀಯ ಡಿಜಿಟಲ್ ಕ್ಷೇತ್ರದಲ್ಲಿ ಪ್ರಾದೇಶಿಕ ಭಾಷೆಗಳದ್ದೇ ಪ್ರಾಬಲ್ಯ ಎಂಬುದು ಪರಿಣಿತರ ಅಂದಾಜು. ಇಂಟರ್ನೆಟ್ ಬಳಸುವ ಕನ್ನಡ ಭಾಷಿಕರ ಸಂಖ್ಯೆ ಸಿಕ್ಕಾಪಟ್ಟೆ ಏರಲಿದೆ ಎಂದು ಗೂಗಲ್ ಸಂಸ್ಥೆಯ ವರದಿಯೊಂದು ತಿಳಿಸಿದೆ. ಸುವರ್ಣನ್ಯೂಸ್ ಜಾಲತಾಣ ತೋರಿರುವ ಅದ್ಭುತ ಪ್ರಗತಿಯು ಈ ಮಾತಿಗೆ ಪುಷ್ಟಿ ನೀಡಿದೆ.
ಸುವರ್ಣನ್ಯೂಸ್ ಯಶಸ್ಸಿನ ಗುಟ್ಟು:
ಸುವರ್ಣನ್ಯೂಸ್ ಸುದ್ದಿ ವಾಹಿನಿ ಮತ್ತು ಕನ್ನಡ ಪ್ರಭ ಪತ್ರಿಕೆ ಎರಡೂ ಕೂಡ ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್'ಗೆ ಸೇರಿವೆ. ಸುದ್ದಿವಾಹಿನಿ ಮತ್ತು ಪತ್ರಿಕೆಯ ಎರಡೂ ಹೂರಣಗಳು ಸುವರ್ಣನ್ಯೂಸ್ ವೆಬ್'ಸೈಟ್'ಗೆ ಶಕ್ತಿ ತುಂಬಿವೆ. ಮತ್ತೊಂದು ಮಹತ್ವದ ಸಂಗತಿ ಎಂದರೆ, ಭಾರತದಲ್ಲಿ ಇಂಟರ್ನೆಟ್ ಬಳಕೆ ಬಹುತೇಕ ಮೊಬೈಲ್'ಗಳಲ್ಲೇ ಆಗುತ್ತಿರುವುದು. ಮೊಬೈಲ್ ನ್ಯೂಸ್ ತಂತ್ರಜ್ಞಾನದಲ್ಲಿ ಸುವರ್ಣನ್ಯೂಸ್ ನಿತ್ಯವೂ ಅಪ್'ಡೇಟ್ ಆಗುತ್ತಿರುವುದು ಅದರ ಯಶಸ್ಸಿಗೆ ಮತ್ತೊಂದು ಕಾರಣವಾಗಿದೆ. ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್'ನ ಡಿಜಿಟಲ್ ವಿಭಾಗದ ಚೀಫ್ ಆಪರೇಟಿಂಗ್ ಆಫೀಸರ್ ಅನೂಪ್ ಕೂಡ ಈ ವಿಚಾರವನ್ನು ಪುಷ್ಟೀಕರಿಸುತ್ತಾರೆ.
ಕನ್ನಡ ಡಿಜಿಟಲ್ ಕ್ಷೇತ್ರವು ಈಗಷ್ಟೇ ಕುಡಿಯೊಡೆಯುತ್ತಿರುವುದರಿಂದ ಸುವರ್ಣನ್ಯೂಸ್'ನ ಮುಂದಿನ ಹಾದಿಯು ಬಹಳ ದೊಡ್ಡಿದೆ. ಅದ್ಭುತ ಪ್ರಗತಿ ತೋರಿ ಛಾಪು ಮೂಡಿಸಿರುವ ಸುವರ್ಣನ್ಯೂಸ್ ಮುಂಬರುವ ದಿನಗಳಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಸ್ವಾಮ್ಯತೆ ಸಾಧಿಸಲಿದೆ ಎಂದು ಸುವರ್ಣನ್ಯೂಸ್-ಕನ್ನಡಪ್ರಭ ಮುಖ್ಯಸಂಪಾದಕ ರವಿ ಹೆಗಡೆ ಅಭಿಪ್ರಾಯಪಡುತ್ತಾರೆ.
