ಯೋಗೀಶ್ ಕೊಲೆ ಪ್ರಕರಣದಲ್ಲಿ ಸಚಿವ ವಿನಯ ಕುಲಕರ್ಣಿ ಕೈವಾಡ ? ವಿಚಾರದ ಬಗ್ಗೆ ಸುವರ್ಣ ನ್ಯೂಸ್ ಮೆಗಾ ಎಕ್ಲೂಸಿವ್ ಮಾಹಿತಿಯನ್ನು ಪ್ರಸಾರ ಮಾಡುತ್ತಿದ್ದಂತೆ ಅತ್ತ ವಿಧಾನ ಸಭೆ ಅಧಿವೇಶನದಲ್ಲೂ ಸುವರ್ಣನ್ಯೂಸ್ ಎಕ್ಲೂಸಿವ್ ವರದಿ ಪ್ರತಿಧ್ವನಿಯಾಗಿದೆ.
ಬೆಳಗಾವಿ (ನ.23): ಯೋಗೀಶ್ ಕೊಲೆ ಪ್ರಕರಣದಲ್ಲಿ ಸಚಿವ ವಿನಯ ಕುಲಕರ್ಣಿ ಕೈವಾಡ ? ವಿಚಾರದ ಬಗ್ಗೆ ಸುವರ್ಣ ನ್ಯೂಸ್ ಮೆಗಾ ಎಕ್ಲೂಸಿವ್ ಮಾಹಿತಿಯನ್ನು ಪ್ರಸಾರ ಮಾಡುತ್ತಿದ್ದಂತೆ ಅತ್ತ ವಿಧಾನ ಸಭೆ ಅಧಿವೇಶನದಲ್ಲೂ ಸುವರ್ಣನ್ಯೂಸ್ ಎಕ್ಲೂಸಿವ್ ವರದಿ ಪ್ರತಿಧ್ವನಿಯಾಗಿದೆ.
ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ನಾಯಕ ವಿಶ್ವೇಶ್ವರ ಹೆಗಡೆ ಕಾಗೇರಿ ವಿಷಯ ಪ್ರಸ್ತಾಪಿಸಿದ್ದಾರೆ. ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಸಚಿವ ವಿನಯ್ ಕುಲಕರ್ಣಿ ಕೈವಾಡ ಇರುವುದರ ಬಗ್ಗೆ ದಾಖಲೆಗಳೊಂದಿಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡುತ್ತಿದೆ
ಈ ಬಗ್ಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ಸಚಿವ ಜಾರ್ಜ್ ಪ್ರಕರಣದಲ್ಲೂ ಸರ್ಕಾರ ಸರಿಯಾದ ಉತ್ತರ ನೀಡುತ್ತಿಲ್ಲ. ವಿನಯ್ ಕುಲಕರ್ಣಿ ಪ್ರಕರಣದ ಬಗ್ಗೆ ಸ್ಪಷ್ಟೀಕರಣ ನೀಡಬೇಕು. ಹಲವು ಕೊಲೆ ಪ್ರಕರಣಗಳನ್ನು ಮುಚ್ಚಿಹಾಕಲು ಸರ್ಕಾರ ಯತ್ನಿಸುತ್ತಿದೆ. ಈ ಬಗ್ಗೆ ಚರ್ಚಿಸಲು ಅವಕಾಶ ನೀಡುವಂತೆ ವಿಶ್ವೇಶ್ವರ ಹೆಗಡೆ ಆಗ್ರಹಿಸಿದ್ದಾರೆ.
