ಬೆಂಗಳೂರು :  ಎಸ್ಸೆಸ್ಸೆಲ್ಸಿ ಮುಗಿಯಿತು, ಪಿಯುಸಿನೂ ಆಯ್ತು, ಉನ್ನತ ಶಿಕ್ಷಣಕ್ಕೆ ಹೋಗಬೇಕು. ಯಾವ ಕೋರ್ಸು ಆಯ್ಕೆ ಮಾಡಿಕೊಳ್ಳೋದು, ಇಂಜಿನಿಯರಿಂಗಾ? ವೈದ್ಯಕೀಯವಾ? ಮ್ಯಾನೇಜ್‌ಮೆಂಟಾ? ಪತ್ರಿಕೋದ್ಯಮವಾ? ಯಾವ ಶಿಕ್ಷಣ ಪಡೆದರೆ ಭವಿಷ್ಯದಲ್ಲಿ ಒಳ್ಳೆಯ ಉದ್ಯೋಗಾವಕಾಶ ಸಿಗುತ್ತೆ?

ವಿದೇಶದಲ್ಲಿ ಹೋಗಿ ಪದವಿ, ಸ್ನಾತಕೋತ್ತರ ಪದವಿ ಅಧ್ಯಯನ ಮಾಡಬೇಕು ಅಂತಿದ್ದೀರಾ? ಹಾಗಾದರೆ ಯಾವ ದೇಶದಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆ ಇದೆ? ವಿದೇಶಿ ವಿದ್ಯಾರ್ಥಿಗಳಿಗೆ ಯಾವ್ಯಾವ ದೇಶಗಳಲ್ಲಿ ಯಾವೆಲ್ಲಾ ವಿಶೇಷ ಅವಕಾಶಗಳಿವೆ? ಇಂತಹ ಎಲ್ಲಾ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಒಂದೇ ಸೂರಿನಡಿ ಉಪಯುಕ್ತ ಮಾಹಿತಿಗಳನ್ನು ಒದಗಿಸಲು ‘ಸುವರ್ಣ ನ್ಯೂಸ್‌’ ಮತ್ತು ‘ಕನ್ನಡಪ್ರಭ’ ಇದೇ ಮಾ.30 ಮತ್ತು 31ರ ಶನಿವಾರ ಮತ್ತು ಭಾನುವಾರ ನಗರದಲ್ಲಿ ಅತಿದೊಡ್ಡ ಎಜುಕೇಷನ್‌ ಕಾನ್‌ಕ್ಲೇವ್‌ ಮತ್ತು ಎಕ್ಸ್‌ಪೋ ಆಯೋಜಿಸಿವೆ.

ಅಷ್ಟೇ ಅಲ್ಲ, ಈ ಎಜುಕೇಷನ್‌ ಎಕ್ಸ್‌ಪೋದಲ್ಲಿ ಬೆಂಗಳೂರು ನಗರ ಪಶ್ಚಿಮ ವಿಭಾಗದ ಡಿಸಿಪಿ ಡಿ.ರವಿ ಚನ್ನಣ್ಣನವರ್‌ ಅವರಂತಹ ಉನ್ನತ ಅಧಿಕಾರಿಗಳು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಣ ತಜ್ಞರೊಂದಿಗೆ ಉನ್ನತ ಶಿಕ್ಷಣ, ಐಎಎಸ್‌, ಐಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಚರ್ಚಿಸುವ ಅವಕಾಶ ಕೂಡ ನಿಮ್ಮದಾಗಲಿದೆ. ಬನ್ನಿ ಜಯನಗರ ‘ಟಿ’ ಬ್ಲಾಕ್‌ನಲ್ಲಿರುವ ಶಾಲಿನಿ ಮೈದಾನದಲ್ಲಿ ನಡೆಯುವ ಎರಡು ದಿನಗಳ ಈ ಎಕ್ಸ್‌ಪೋದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ. ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿಮ್ಮ ಯಾವುದೇ ಪ್ರಶ್ನೆ, ಗೊಂದಲಗಳನ್ನು ಬಗೆಹರಿಸಿಕೊಳ್ಳಿ, ಉಪಯುಕ್ತ ಮಾಹಿತಿ ಪಡೆದು ಉತ್ತಮ ಕಾಲೇಜು, ಭವಿಷ್ಯ ರೂಪಿಸುವ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡು ಉನ್ನತ ಶಿಕ್ಷಣದತ್ತ ಹೆಜ್ಜೆ ಹಾಕಿ.

ಬೆಳಗ್ಗೆ 10.30ಕ್ಕೆ ಉದ್ಘಾಟನೆ:

ನಟಿ ಪ್ರಣಿತಾ ಸುಭಾಷ್‌, ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ. ಚನ್ನಣ್ಣವರ್‌ ಶನಿವಾರ ಬೆಳಗ್ಗೆ 10.30ಕ್ಕೆ ‘ಸುವರ್ಣ ನ್ಯೂಸ್‌’ ಮತ್ತು ‘ಕನ್ನಡಪ್ರಭ’ ‘ಎಜುಕೇಷನ್‌ ಎಕ್ಸ್‌ಪೋ’ಗೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

ಎರಡು ದಿನಗಳ ಕಾಲ ನಡೆಯಲಿರುವ ಎಕ್ಸ್‌ಪೋದಲ್ಲಿ ಬೆಂಗಳೂರು ನಗರ ಮತ್ತು ರಾಜ್ಯದ ವಿವಿಧೆಡೆ ಇರುವ ಶಿಕ್ಷಣ ಸಂಸ್ಥೆಗಳು ಪಾಲ್ಗೊಳ್ಳಲಿವೆ. ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಬಳಿಕ ವಿದ್ಯಾರ್ಥಿಗಳು ಹಾಗೂ ಪೋಷಕರ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಎಕ್ಸ್‌ಪೋ ಆಯೋಜಿಸಲಾಗಿದೆ. ಕಾಲೇಜು, ಕೋರ್ಸ್‌ಗಳು, ಕಾಲೇಜಿನ ಬೋಧಕ ವರ್ಗ, ಮೂಲ ಸೌಕರ್ಯಗಳು, ಪ್ರಯೋಗಾಲಯ, ಕಾಲೇಜು ಕ್ಯಾಂಪಸ್‌, ಕಾಲೇಜಿನ ವಿಶೇಷತೆಗಳ ಜತೆಗೆ ತಮಗಿರುವ ಗೊಂದಲಗಳನ್ನು ಬಗೆಹರಿಸಲಿವೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸದ್ಬಳಕೆ ಮಾಡಿಕೊಳ್ಳಬಹುದು.

ಭಾಗವಹಿಸಲಿರುವ ಸಂಸ್ಥೆಗಳು:

ಎಕ್ಸ್‌ಪೋದಲ್ಲಿ ಪ್ರಮುಖ ವಿಶ್ವವಿದ್ಯಾಲಯಗಳಾದ ರೇವಾ, ಗೀತಂ, ಪಿಇಎಸ್‌, ರಾಮಯ್ಯ ಮತ್ತು ಪ್ರೆಸಿಡೆನ್ಸಿ ಪಾಲ್ಗೊಳ್ಳಲಿವೆ. ಕೇಂಬ್ರಿಡ್ಜ್‌, ಆಕ್ಸ್‌ಫರ್ಡ್‌, ಕಮ್ಯೂನಿಟಿ ಗ್ರೂಪ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಕೃಪಾನಿಧಿ ಗ್ರೂಫ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌, ಎಕ್ಸೆಲ್‌ ಅಕಾಡೆಮಿಕ್ಸ್‌, ವಿಷನ್‌ ಪಿಯು ಕಾಲೇಜು, ಅಮೃತ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌, ಐಎಫ್‌ಐಎಂ ಕಾಲೇಜುಗಳು ಭಾಗವಹಿಸಲಿವೆ. ಕುಣಿಗಲ್‌ ವ್ಯಾಲ್ಯೂ ರೆಸಿಡೆನ್ಸಿಯಲ್‌ ಸ್ಕೂಲ್‌ ಹಾಗೂ ಮೈಸೂರಿನ ಜ್ಞಾನ ಸರೋವರ ಶಾಲೆಗಳು ಮತ್ತು ಬೆಂಗಳೂರು ಸ್ಟಡಿ ಡಾಟ್‌ ಕಾಂ ಎಂಬ ಪ್ರೊಫೆಷನಲ್‌ ಇನ್‌ಸ್ಟಿಟ್ಯೂಷನ್ಸ್‌ ಸೇರಿದಂತೆ ಹತ್ತಾರು ಶಾಲಾ-ಕಾಲೇಜುಗಳು ಎಕ್ಸ್‌ ಪೋದಲ್ಲಿ ಭಾಗವಹಿಸಲಿವೆ.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಚನ್ನಣ್ಣವರ್‌ ಭಾಷಣ

ಉದ್ಘಾಟನೆ ಬಳಿಕ ಪ್ರಸ್ತುತ ಶಿಕ್ಷಣ ವ್ಯವಸ್ಥೆಯನ್ನು ಉದ್ದೇಶಿಸಿ ಬೆಳಗ್ಗೆ 11ರಿಂದ 12 ಗಂಟೆಯವರೆಗೂ ಪಶ್ಚಿಮ ವಿಭಾಗ ಡಿಸಿಪಿ ರವಿ ಡಿ. ಚನ್ನಣ್ಣವರ್‌ ಮಾತನಾಡಲಿದ್ದಾರೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರಶ್ನೆ ಕೇಳುವ ಮೂಲಕ ತಮಗಿರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಬಹುದು.

ಎಕ್ಸ್‌ ಪೋದಲ್ಲಿ ಏನೆಲ್ಲಾ ಕಾರ್ಯಕ್ರಮಗಳಿವೆ?

ಶನಿವಾರ

ಬೆಳಗ್ಗೆ 11    
ವಿದ್ಯಾರ್ಥಿಗಳನ್ನು ಕುರಿತು ರವಿ ಚನ್ನಣ್ಣವರ್‌ ಭಾಷಣ

ಮಧ್ಯಾಹ್ನ 12    
ಕಾಮೆಡ್‌ ಕೆ ಕಾರ್ಯಕಾರಿ ನಿರ್ದೇಶಕ ಎಸ್‌. ಕುಮಾರ್‌ ಅವರಿಂದ ಕಾಮೆಡ್‌ ಕುರಿತ ಸಂಪೂರ್ಣ ಮಾಹಿತಿ

ಮಧ್ಯಾಹ್ನ 2    
ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಮನರಂಜನಾ ಚಟುವಟಿಕೆಗಳು

ಸಂಜೆ 4    
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ತಮ್ಮ ಕಾಲೇಜಿನಲ್ಲಿರುವ ಕೋರ್ಸ್‌, ಮೂಲ ಸೌಕರ್ಯ, ಕಾಲೇಜು ಕ್ಯಾಂಪಸ್‌ ಸಿಬ್ಬಂದಿ ಕುರಿತ ಮಾಹಿತಿ ನೀಡಲಿದೆ.

ಸಂಜೆ 4.30     ರೇವಾ ವಿಶ್ವವಿದ್ಯಾಲಯ

ಸಂಜೆ 5    ಪಿಇಎಸ್‌ ವಿವಿ

ಸಂಜೆ 5.30     ಗೀತಂ ವಿವಿ

ಸಂಜೆ 6    ಕೇಂಬ್ರಿಡ್ಜ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ

ಸಂಜೆ 6.30    ಕೃಪಾನಿಧಿ ಗ್ರೂಫ್‌ ಆಫ್‌ ಇನ್‌ಸ್ಟಿಟ್ಯೂಷನ್ಸ್‌ ಮಾಹಿತಿ ಹಂಚಿಕೊಳ್ಳಲಿವೆ

ಭಾನುವಾರ

ಬೆಳಗ್ಗೆ 11    

ಆಚಾರ್ಯ ಇನ್‌ಸ್ಟಿಟ್ಯೂಟ್‌ ನಿರ್ದೇಶಕ ವಿಶೇಷ್‌ ಚಂದ್ರಶೇಖರ್‌ ಅವರು ಎಂಜಿನಿಯರಿಂಗ್‌ ವೃತ್ತಿ ಜೀವನ ಕುರಿತು ಮಾತನಾಡಲಿದ್ದಾರೆ

ಮಧ್ಯಾಹ್ನ 12    

ಸಾರ್ವಜನಿಕ ರಾಜತಾಂತ್ರಿಕ ಅಧಿಕಾರಿ ರೋಹಿಣಿ ರಾಮ್‌ ಶಶಿಧರ್‌ ಅವರು ವೃತ್ತಿಪರತೆ ಹೊರತಾದ ಅವಕಾಶಗಳು ಕುರಿತ ಮಾಹಿತಿ

ಮಧ್ಯಾಹ್ನ 2    
ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಿಂದ ಮನರಂಜನಾ ಚಟುವಟಿಕೆಗಳು

ಸಂಜೆ 4ರಿಂದ 6.30    
ಕಮ್ಯೂನಿಟಿ, ರೇವಾ, ಪಿಇಎಸ್‌, ಗೀತಂ ಮತ್ತು ಪ್ರೆಸಿಡೆನ್ಸಿ ಕಾಲೇಜುಗಳು ಮಾಹಿತಿ ನೀಡಲಿವೆ