Suvarna News  

(Search results - 661)
 • Shamsundar

  Dharwad20, Oct 2019, 10:57 AM IST

  ಕ್ಷಣ ಕ್ಷಣಕ್ಕೂ ಬೆರಗುಗೊಳಿಸುವ ಮಾಧ್ಯಮವೇ ನವಮಾಧ್ಯಮ: ಶ್ಯಾಮಸುಂದರ

  ಇಂದಿನ ದಿನಮಾನದಲ್ಲಿ ಅಂತರ್ಜಾಲ ಆಧಾರಿತ ನವಮಾಧ್ಯಮವು ಕ್ಷಣ ಕ್ಷಣವೂ ಬೆರಗು ಗೊಳಿಸುವ ಮಾಧ್ಯಮ. ಇದು ಉದ್ಯಮವಾಗಿ ಬೆಳೆಯುತ್ತಿದೆ ಎಂದು ಸುವರ್ಣ ನ್ಯೂಸ್ ಡಾಟ್ ಕಾಮ್‌ನ ಪ್ರಧಾನ ಸಂಪಾದಕ ಎಸ್.ಕೆ. ಶ್ಯಾಮಸುಂದರ್ ಅವರು ಹೇಳಿದ್ದಾರೆ. 
   

 • jothe jotheyali
  Video Icon

  Sandalwood14, Oct 2019, 2:57 PM IST

  ಜೊತೆ ಜೊತೆಯಲಿ ಸಕ್ಸಸ್ ಹಿಂದಿದೆ ಈ ಕಾರಣ; ರಿವೀಲ್ ಮಾಡಿದ್ರು ಆರ್ಯವರ್ಧನ್!

  ಜೀ ಕನ್ನಡ ಧಾರಾವಾಹಿಯವರೆಲ್ಲಾ ಒಟ್ಟಾಗಿ ಸೇರಿ ಜೀ ಕುಟುಂಬ ಅವಾರ್ಡ್ ಹಬ್ಬವನ್ನು ಅಚರಿಸಿದ್ದಾರೆ. ಸೀರಿಯಲ್ ಮಂದಿಯೆಲ್ಲಾ ಒಟ್ಟಾಗಿ ಸೇರಿ ಸಂಭ್ರಮಿಸಿದ್ದಾರೆ. ಖುಷಿ ಪಟ್ಟಿದ್ದಾರೆ. ಜೊತೆ ಜೊತೆಯಲಿ ಖ್ಯಾತಿಯ ಅನಿರುದ್ಧ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಸಕ್ಸಸ್ ಬಗ್ಗೆ ಹೇಳಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ನಿಂದ ಇದೇ ಮೊದಲ ಬಾರಿಗೆ ಕಿರುತೆರೆಗೆ ಬಂದಿರುವ ಅನಿರುದ್ಧ್ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. ಅನಿರುದ್ಧ್ ಅವರ ಮಾತುಗಳನ್ನು ಕೇಳಿ.  

 • Appanna
  Video Icon

  Sandalwood12, Oct 2019, 3:43 PM IST

  ಪೈಲ್ವಾನ್ ಪಾಪಣ್ಣನ ಕಿಕ್ ಗೆ ಕಿಚ್ಚ ಬೋಲ್ಡ್ !

  ಕನ್ನಡದ ಅಭಿನಯ ಚಕ್ರವರ್ತಿ ಈಗ ಬೆಳ್ಳಿ ಪರದೆಗೆ ಒಬ್ಬ ಕಾಮಿಡಿಯನ್ ನನ್ನು ಪರಿಚಯಿಸಿದ್ದಾರೆ. ಪೈಲ್ವಾನ್ ಚಿತ್ರದ ಮೂಲಕ ಆ ನಗೆಗಾರ ಹೊಸ ಮೋಡಿ ಮಾಡಿದ್ದಾರೆ. ಬಾಡಿ ಲ್ಯಾಂಗ್ಜೇಜ್ ವೆರಿ ವೇರಿ ಡಿಫರಂಟ್ ಆಗಿದೆ. ಮಾತಿನ ಶೈಲಿನೂ ಕಾಮಿಡಿ ಟಾನಿಕ್ ಉಣಿಸುತ್ತದೆ.ವಿಶೇಷ ಅಂದ್ರೆ, ಈ ಕಿಲಾಡಿ ಕಲಾಕಾರ್ ಕಾಮಿಡಿಗೆ, ಕಿಚ್ಚ ಸುದೀಪ್ ಬಿದ್ದು ಬಿದ್ದು ನಕ್ಕಿದ್ದಾರೆ. ಅದನ್ನ ಆ ಕಿಲಾಡಿ ನಮ್ಮೊಟ್ಟಿಗೆ Exclusive ಆಗಿಯೇ ಹಂಚಿಕೊಂಡಿದ್ದಾರೆ.  ಕಿಚ್ಚನ ಪೈಲ್ವಾನ್ ಚಿತ್ರದಲ್ಲಿ ಎಲ್ಲವೂ ಇದೆ. ನಗೋರಿಗೆ ನಗಿಸೋ ನಯಾ ಜಾದುಗಾರ್ ಈ ಚಿತ್ರದಲ್ಲಿದ್ದಾನೆ. ಈತನ ಮಾತೇ ಚೆಂದ. ಉತ್ತರ ಕರ್ನಾಟಕದ ಸೊಗಡಗು ಬೇರೆ. ಮಾತಲ್ಲಿಯೇ ಕಾಮಿಡಿ ಟಾನಿಕ್ ಉಣಬಡಿಸೋ ಕಿಲಾಡಿ, ಈ ಕಲಾವಿದ.ನೋಡಿ. 

   

 • Bantwal Journalist
  Video Icon

  Karnataka Districts3, Oct 2019, 9:00 PM IST

  ಬಂಟ್ವಾಳ:  ಸುವರ್ಣ ನ್ಯೂಸ್ ಹೆಸರಲ್ಲಿ 50 ಸಾವಿರಕ್ಕೆ ಬೇಡಿಕೆ ಇಟ್ಟ ನಕಲಿ ಪತ್ರಕರ್ತ

  ಸುವರ್ಣ ನ್ಯೂಸ್ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪದ ಮೇಲೆ  ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ  ದಾಖಲಾಗಿದೆ. 50 ಸಾವಿರ ರೂ. ನೀಡಲು ಬೇಡಿಕೆ ಇಟ್ಟಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ. ಬಂಟ್ವಾಳದ ಎಸ್.ವಿ.ಎಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯಿಂದ ದೂರು ದಾಖಲಾಗಿದ್ದು ಆರೋಪಿ ಅಶೋಕ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

 • Sadananda Gowda

  News2, Oct 2019, 9:44 PM IST

  ಪ್ರಶ್ನೆ ಕೇಳಿದ ಸೂಲಿಬೆಲೆ, ಸುವರ್ಣ ನ್ಯೂಸ್‌ಗೆ ಗೌಡರಿಂದ ಬ್ಲಾಕ್ ಭಾಗ್ಯ, ಆದ್ರೇನಾಯ್ತು!

  ಉತ್ತರ ಕರ್ನಾಟಕ ನೆರೆ ಪರಿಹಾರಕ್ಕೆ ಯಾಕೆ ವಿಳಂಬವಾಗುತ್ತಿದೆ ಎಂದು ಪ್ರಶ್ನೆ ಕೇಳಿದವರಿಗೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡರು ಬ್ಲಾಕ್ ಭಾಗ್ಯ ಕರುಣಿಸಿದ್ದಾರೆ. ಕನ್ನಡಿಗರಾಗಿ ಉತ್ತರ ಕರ್ನಾಟಕದ ನೋವಿಗೆ ಸ್ಪಂದಿಸಿ ಎನ್ನುವುದೇ ದೊಡ್ಡ ತಪ್ಪೆ? ನಮಗೆಂತೂ ಗೊತ್ತಿಲ್ಲ ..ಗೌಡರೇ ಹೇಳಬೇಕು.

 • Shivamogga Gangamma
  Video Icon

  Karnataka Districts2, Oct 2019, 4:45 PM IST

  ಸುವರ್ಣ ನ್ಯೂಸ್ ಇಂಪ್ಯಾಕ್ಟ್: 95ರ ಗಂಗಮ್ಮಜ್ಜಿಗೆ ನಾಡ ದೊರೆ ಕೊಟ್ಟ ಮಾತು ತಪ್ಪಲಿಲ್ಲ

  ಬರ್ಮಾದ ರಂಗೂನ್ ಮೂಲದ , ಬ್ರಿಟೀಷರ ಕಾಲದಲ್ಲಿ ಮಿಲಿಟರಿ ಮ್ಯಾನ್ ಆಗಿದ್ದ ಎ.ಸುಬ್ಬನಾಯ್ಡು ರವರ ಪತ್ನಿ ಎ.ಎಸ್.ಗಂಗಮ್ಮ ಎಂಬ ಹಣ್ಣು ಹಣ್ಣು ಅಜ್ಕಿಗೆ ಕೊನೆಗೂ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಂದಿಸಿದ್ದಾರೆ. ಅವರಿಗೆ 5ಲಕ್ಷ ರೂ ಪರಿಹಾರದ ಜತೆಗೆ ಉಚಿತ ಸೈಟ್, ಮನೆ ನೀಡುವುದಾಗಿ ಭರವಸೆ ನೀಡಿದ್ದರು. ಅದರಂತೆ  ಅಜ್ಜಿಗೆ ಮನೆಯ ಹಕ್ಕು ಪತ್ರ ನೀಡಿ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.

 • Geetha
  Video Icon

  ENTERTAINMENT28, Sep 2019, 4:37 PM IST

  ‘ಗೀತಾ’ ಗಮ್ಮತ್ತು; ಗಣೇಶ್ ಮೋಡಿ ಸಕ್ಕತ್ತು! ಮಿಸ್ ಮಾಡದೇ ನೋಡಿ

  ಗೋಕಾಕ್‌ ಚಳವಳಿಯ ಹಿನ್ನೆಲೆಗೆ ಕನೆಕ್ಟ್ ಆದ ಕತೆ ಎನ್ನುವ ಕಾರಣಕ್ಕೆ ಆರಂಭದಿಂದ ಸಾಕಷ್ಟುನಿರೀಕ್ಷೆ ಹುಟ್ಟಿಸಿದ ಸಿನಿಮಾ ‘ಗೀತಾ’. ಗಣೇಶ್ ಸಿನಿ ಕರಿಯರ್ ನಲ್ಲಿ ಇದು ವಿಭಿನ್ನವಾದ ಸಿನಿಮಾ. ಸೆಪ್ಟೆಂಬರ್ 28 ರದು ತೆರೆಗೆ ಬಂದಿದೆ. ಇದಕ್ಕೆ ಮೂವರು ನಾಯಕಿಯರು. ಹೇಗಿತ್ತು ‘ಗೀತಾ’ ತಯಾರಿ? ಏನಿದರ ವಿಶೇಷ? ಯಾಕಾಗಿ ಸಿನಿಮಾವನ್ನು ನೋಡಬೇಕು? ಎನ್ನುವುದೆಲ್ಲದರ ಬಗ್ಗೆ ಶಾಸ್ವಿ, ಗಣೇಶ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

 • Gun Mafia
  Video Icon

  NEWS27, Sep 2019, 2:03 PM IST

  ಘೋಡಾ ಆ್ಯಂಡ್ ಗೋಳಿ ಬೆನ್ನತ್ತಿದ ಸುವರ್ಣನ್ಯೂಸ್‌ಗೆ ಭೇಷ್ ಎಂದ ಪೊಲೀಸರು!

  ವಿಜಯಪುರದ ಗನ್ ಮಾಫಿಯಾ ಕುರಿತು ಸುವರ್ಣನ್ಯೂಸ್ ನೀಡಿದ ಖಚಿತ ಮಾಹಿತಿ ಮೇರೆಗೆ ವಿಜಯಪುರ ಜಿಲ್ಲಾ ಪೊಲೀಸರು ನಡೆಸಿದ ಕಾರ್ಯಾಚರಣೆ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ಎಸ್‌ಪಿ ಪ್ರಕಾಶ್ ನಿಕ್ಕಂ ಸುವರ್ಣನ್ಯೂಸ್ ಧೈರ್ಯ ಮತ್ತು ಸಾಮಾಜಿಕ ಕಳಕಳಿಗೆ ಧನ್ಯವಾದ ಅರ್ಪಿಸಿದ್ದಾರೆ.

 • wildlife
  Video Icon

  NEWS23, Sep 2019, 7:39 PM IST

  ಸುವರ್ಣನ್ಯೂಸ್- ಕನ್ನಡಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ಸಿಎಂ ಚಾಲನೆ

  ವನ್ಯಜೀವಿ ಸಂರಕ್ಷಣಾ ಅಭಿಯಾನಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಸೋಮವಾರ ಚಾಲನೆ ನೀಡಿದರು. ಸುವರ್ಣನ್ಯೂಸ್- ಕನ್ನಡಪ್ರಭ ವತಿಯಿಂದ ನಡೆಯುತ್ತಿರುವ ಈ ಅಭಿಯಾನಕ್ಕೆ ನಟ ಮುರಳಿ, ಚಿತ್ರನಟಿ ಶೃತಿ ನಾಯ್ಡು ರಾಯಭಾರಿಯಾಗಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಸುವರ್ಣನ್ಯೂಸ್- ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಸಂಸ್ಥೆಯ CEO ಅಭಿನವ್ ಖರೆ ಭಾಗಿಯಾದರು. ಕಳೆದೆರಡು ವರ್ಷಗಳಿಂದ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಈ ಅಭಿಯಾನವನ್ನು ನಡೆಸಲಾಗುತ್ತಿದೆ. 

 • Ramakanth Aryan

  ENTERTAINMENT23, Sep 2019, 12:05 PM IST

  ಸುದೀಪ ಏನೋ ಮಾತಾಡ್ತಿದ್ದಾರೆ ಕೇಳಿಸಿಕೊಂಡ್ರಾ? ಬಳೆ, ಸರ, ಕಡಗದಾಚೆ ಓದಿಕೊಳ್ಳಿ

  ಪೈಲ್ವಾನ್ ಸಿನಿಮಾ ಬಜೆಟ್ ಬಗ್ಗೆ 30 ರಿಂದ 40 ಕೋಟಿ ಅಂತ ಅಂದಾಜು. ಕಳೆದ ವಾರವಷ್ಟೇ ಬಿಡುಗಡೆ. ಬಿಡುಗಡೆಯಾದ ಕೆಲವೇ‌ ಗಂಟೆಗಳಲ್ಲಿ ಒಬ್ಬೊಬ್ಬನಿಂದ 4000 , 5000 ಲಿಂಕ್ ಗಳ Share. ಏನಾಗಬೇಡ ನಿರ್ಮಾಪಕನಿಗೆ?

 • Rachita Ram
  Video Icon

  ENTERTAINMENT23, Sep 2019, 10:44 AM IST

  ಸುವರ್ಣ ನ್ಯೂಸ್- ಕನ್ನಡ ಪ್ರಭ ಫುಡ್ ಫೆಸ್ಟಿವಲ್ ನಲ್ಲಿ ಡಿಂಪಲ್ ಕ್ವೀನ್

  ಸುವರ್ಣ ನ್ಯೂಸ್- ಕನ್ನಡ ಪ್ರಭ ಅರ್ಪಿಸುವ ಫುಡ್ ಫೆಸ್ಟಿವಲ್ ಬೆಂಗಳೂರಿನ ಸಹಕಾರ ನಗರದಲ್ಲಿ ನಡೆಯಿತು. ಈ ಫೆಸ್ಟಿವಲ್ ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಭಾಗಿಯಾಗಿ ಐಸ್ ಕ್ರೀಮ್, ಪುಳಿಯೊಗರೆ ಸವಿದರು. ಮಕ್ಕಳ ಜೊತೆ ಒಂದಷ್ಟು ಆಟ, ತಲೆಹರಟೆ, ತಮಾಷೆ ಮಾಡಿದರು. ಹೇಗಿತ್ತು ಫುಡ್ ಫೆಸ್ಟಿವಲ್ ಸಂಭ್ರಮ? ಇಲ್ಲಿದೆ ನೋಡಿ. 

 • ravi

  Karnataka Districts21, Sep 2019, 7:14 PM IST

  ನುಡಿ ಸಡಗರದಲ್ಲಿ ‘ಸುವರ್ಣ ಪ್ರಭಾ’ವಳಿ: ಮಾಧ್ಯಮ ದಿಗ್ಗಜರ ಮಾತು ಕೇಳಿ!

  ಕನ್ನಡ ನಾಡು ನುಡಿ ರಕ್ಷಣೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಯಲ್ಲಟ್ಟಿಯಲ್ಲಿ ನಡೆಯುತ್ತಿರುವ ಕೊಣ್ಣೂರು ನುಡಿ ಸಡಗರದ ಅಕ್ಷರ ಜಾತ್ರೆ 2ನೇ ದಿನವೂ ಹಲವು ವೈಶಿಷ್ಟ್ಯತೆಗಳಿಗೆ ಸಾಕ್ಷಿಯಾಯಿತು. ಅತ್ತ ಸುವರ್ಣನ್ಯೂಸ್‌ನ ಹಿರಿಯ ಸಂಪಾದಕರ ನೇತೃತ್ವದಲ್ಲಿ ನಡೆದ ಮಾದ್ಯಮಗೋಷ್ಠಿ ಗಮನ ಸೆಳೆದರೆ, ಇತ್ತ ಡ್ರೋಣ್ ಖ್ಯಾತಿಯ ಪ್ರತಾಪ್‌ ಅವರ ಸಲಹೆ ಯುವ ಸಮೂಹಕ್ಕೆ ಪ್ರೇರಣೆಯಾಗಿತ್ತು. 

 • Video Icon

  Karnataka Districts14, Sep 2019, 1:43 PM IST

  ಮಸಾಜ್ ಪಾರ್ಲರ್‌ ಹುಡ್ಗಿ ಬೇಕೆಂದ ಪೊಲೀಸಪ್ಪ, ಈಗ ಮನೆಗೆ ಹೋಗಪ್ಪಾ!

  ಬೆಂಗಳೂರಿನ ಮೈಕೋ ಲೇಔಟ್ ಪೊಲೀಸರ ಕರ್ಮಕಾಂಡದ ಬಗ್ಗೆ ಕೆಲದಿನಗಳ ಹಿಂದೆ ಸುವರ್ಣನ್ಯೂಸ್ ವರದಿ ಮಾಡಿತ್ತು. ಮಸಾಜ್ ಪಾರ್ಲರ್‌ಗಳಿಂದ ಹೆಣ್ಣು ಮತ್ತು ಹಣ ಪೀಕುವ ಪೊಲೀಸರ ‘ದಂಧೆ’ಯನ್ನು ಬಯಲು ಮಾಡಿತ್ತು. ಅದರ ಬೆನ್ನಲ್ಲೇ ಎಚ್ಚೆತ್ತ ಹಿರಿಯ ಅಧಿಕಾರಿಗಳು ಆ ಪೊಲೀಸರ ವಿರುದ್ಧ ಕ್ರಮ ಜರುಗಿಸಿದ್ದಾರೆ. 

 • Sadguru - Jaggi Vasudev
  Video Icon

  NEWS8, Sep 2019, 12:09 PM IST

  ಕಾವೇರಿ ಕೂಗು ; ಸುವರ್ಣ ನ್ಯೂಸ್ ಜೊತೆ ಸದ್ಗುರು ಮಾತುಕತೆ

  ಜಗದ್ವಿಖ್ಯಾತ ಚಿಂತಕ, ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌  ‘ಕಾವೇರಿ ಕೂಗು’ ಎಂಬ ವಿಶಿಷ್ಟ ಆಂದೋಲನವನ್ನು ಹುಟ್ಟು ಹಾಕಿದ್ದಾರೆ.  ಇದು ಕಾವೇರಿ ಕೂಗು ಮಾತ್ರವಲ್ಲ. ಇದು ಎಲ್ಲ ನದಿಗಳ ಕೂಗು ಹೌದು. ನದಿ ನೀರಿಗಾಗಿ ರೈತರ ಕೂಗೂ ಹೌದು. ಕುಡಿವ ನೀರಿಗಾಗಿ ಪಟ್ಟಣದ ಜನರ ಕೂಗು ಹೌದು. ಬೆಳೆದ ಬೆಳೆಗೆ ಬೆಲೆಯಿಲ್ಲದೇ ಕಂಗಾಲಾಗಿರುವ ರೈತರ ದಯನೀಯ ಕೂಗೂ ಹೌದು. ದೇಶಾದ್ಯಂತ ನದಿಗಳು ಬತ್ತುತ್ತಿವೆ. ಕಾವೇರಿ ನದಿಯಂತೂ ವರ್ಷದ ಆರು ತಿಂಗಳು ಒಣಗಿ ಸಮುದ್ರವನ್ನೇ ಸೇರುವುದಿಲ್ಲ. ಈ ನದಿ ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ ಕದನಗಳಾಗುತ್ತಿವೆ. ಕುಡಿಯುವ ನೀರಿಗಾಗಿ ಹಾಹಾಕಾರವೆದ್ದಿದೆ. ಈ ಬಗ್ಗೆ ಜಗ್ಗಿ ವಾಸುದೇವ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿ ಸದ್ಗುರು - ಸುವರ್ಣ ನ್ಯೂಸ್ ಮಾತುಕತೆ. 

 • modi isro chief

  TECHNOLOGY7, Sep 2019, 1:09 PM IST

  ಸದಾ ಸಾಧನೆಯ ಗುಂಗಲ್ಲೇ ಇರೋ ಇಸ್ರೋ ಸಿವನ್‌ (ಶಿವ)ಗೆ ದಕ್ಕದ ಚಂದ್ರನೇ..?

  ಭಾರತೀಯರ ಪ್ರಾರ್ಥನೆ ಫಲಿಸಲೇ ಇಲ್ಲ. ಇನ್ನೇನು ಚಂದ್ರನಲ್ಲಿ ಲ್ಯಾಂಡ್ ಆಗಬೇಕಿದ್ದ ವಿಕ್ರಮ ದಾರಿ ತಪ್ಪಿದ. ಪ್ರತಿಯೊಬ್ಬರಿಗೂ ಅತ್ಯಂತ ದುಃಖದ ವಿಷಯವಿದು. ಅದರಲ್ಲಿಯೂ 12 ವರ್ಷಗಳ ಶ್ರಮ ಈ ರೀತಿ ವ್ಯರ್ಥವಾಗಿದ್ದು ಇಸ್ರೋ ಮುಖ್ಯಸ್ಥರಿಗೆ ಅರಗಿಸಿಕೊಳ್ಳುವುದು ಕಷ್ಟ. ಇವರಿಗೆ ಧೈರ್ಯ ಹೇಳಿದ್ದಾರೆ ಸುವರ್ಣ ನ್ಯೂಸ್‌ನ ರಮಾಕಾಂತ್.