ಕನ್ನಡಪ್ರಭ, ಸುವರ್ಣ ನ್ಯೂಸ್ ಅಭಿಯಾನದ ಆಗ್ರಹದ ಮೇರೆಗೆ  ಅರಣ್ಯ ಇಲಾಖೆ ಸಿಬ್ಬಂದಿಗೆ "ಮುಖ್ಯಮಂತ್ರಿಗಳ ಚಿನ್ನದ ಪದಕ" ನೀಡುವುದಾಗಿ  ಅರಣ್ಯ ಸಚಿವ ರಮಾನಾಥ್ ರೈ ಹೇಳಿದ್ದಾರೆ.  ಇದು ಸುರ್ಣ ನ್ಯೂಸ್-ಕನ್ನಡ ಪ್ರಭ ಅಭಿಯಾನದ  ಇಂಪ್ಯಾಕ್ಟ್!

ಬೆಂಗಳೂರು (ಡಿ.06): ಕನ್ನಡಪ್ರಭ, ಸುವರ್ಣ ನ್ಯೂಸ್ ಅಭಿಯಾನದ ಆಗ್ರಹದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿಗೆ "ಮುಖ್ಯಮಂತ್ರಿಗಳ ಚಿನ್ನದ ಪದಕ" ನೀಡುವುದಾಗಿ ಅರಣ್ಯ ಸಚಿವ ರಮಾನಾಥ್ ರೈ ಹೇಳಿದ್ದಾರೆ. ಇದು ಸುರ್ಣ ನ್ಯೂಸ್-ಕನ್ನಡ ಪ್ರಭ ಅಭಿಯಾನದ ಇಂಪ್ಯಾಕ್ಟ್!

ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ 25 ಅರಣ್ಯ ಸಿಬ್ಬಂದಿಗೆ ಪದಕ ಪ್ರದಾನ ಮಾಡಲಾಗುವುದು ಎಂದು ಡಿಸೆಂಬರ್ 4 ರಂದು ಸರ್ಕಾರ ಆದೇಶ ಹೊರಡಿಸಿದೆ. ಉತ್ತಮ ಕರ್ತವ್ಯ ನಿರ್ವಹಿಸಿದ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಲಾಗುವುದು. ಸಿಬ್ಬಂದಿಗಳು ಜೀವದ ಹಂಗು ತೊರೆದು ಕೆಲಸ ಮಾಡಬೇಕಾಗುತ್ತದೆ. ಸಿಬ್ಬಂದಿಯಲ್ಲಿ ಪ್ರೋತ್ಸಾಹ ಮೂಡಿಸುವ ನಿಟ್ಟಿನಲ್ಲಿ ಪದಕ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಅರಣ್ಯ ಸಚಿವ ರಮಾನಾಥ ರೈ ಹೇಳಿದ್ದಾರೆ.