ಜಯಪ್ಪ, ದೇವರಾಜ್ ಬಂಧಿತರು. ಇದು ಸುವರ್ಣನ್ಯೂಸ್ ಕವರ್ ಸ್ಟೋರಿ ಇಂಪ್ಯಾಕ್ಟ್. ಸಕಲೇಶಪುರ ತಾಲೂಕಿನ ವಿವಿಧೆಡೆ ನಡೆಯುತ್ತಿದ್ದ ಕಳ್ಳಭಟ್ಟಿ ದಂಧೆಯ ಕರಾಳಮುಖವನ್ನು ಸುವರ್ಣನ್ಯೂಸ್ ಕವರ್ ಸ್ಟೋರಿಯಲ್ಲಿ ಬಯಲು ಮಾಡಿತ್ತು. ಇದರಿಂದ ಎಚ್ಚೆತ್ತ ಸಕಲೇಶಪುರ ಅಬಕಾರಿ ಇನ್ಸ್ ಪೆಕ್ಟರ್ ರಮೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ, ಜೈಲಿಗೆ ಕಳುಹಿಸಿದೆ.

ಸಕಲೇಶಪುರ(ನ.28): ನಿದ್ದೆಯಲ್ಲಿದ್ದ ಹಾಸನ ಜಿಲ್ಲೆ ಸಕಲೇಶಪುರದ ಅಬಕಾರಿ ಇಲಾಖೆ ಕೊನೆಗೂ ಎಚ್ಚರವಾಗಿದ್ದು, ಸಕಲೇಶಪುರದ ಈಚಲುಬೀಡಿನಲ್ಲಿ ಕಳ್ಳಭಟ್ಟಿ ದಂಧೆಯಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದೆ.

ಜಯಪ್ಪ, ದೇವರಾಜ್ ಬಂಧಿತರು. ಇದು ಸುವರ್ಣನ್ಯೂಸ್ ಕವರ್ ಸ್ಟೋರಿ ಇಂಪ್ಯಾಕ್ಟ್. ಸಕಲೇಶಪುರ ತಾಲೂಕಿನ ವಿವಿಧೆಡೆ ನಡೆಯುತ್ತಿದ್ದ ಕಳ್ಳಭಟ್ಟಿ ದಂಧೆಯ ಕರಾಳಮುಖವನ್ನು ಸುವರ್ಣನ್ಯೂಸ್ ಕವರ್ ಸ್ಟೋರಿಯಲ್ಲಿ ಬಯಲು ಮಾಡಿತ್ತು. ಇದರಿಂದ ಎಚ್ಚೆತ್ತ ಸಕಲೇಶಪುರ ಅಬಕಾರಿ ಇನ್ಸ್ ಪೆಕ್ಟರ್ ರಮೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ, ಜೈಲಿಗೆ ಕಳುಹಿಸಿದೆ.

ಈಚಲಬೀಡಿನಲ್ಲಿ ಯಾರೆಲ್ಲ ಕಳ್ಳಭಟ್ಟಿ ದಂಧೆಯಲ್ಲಿ ತೊಡಗಿದ್ದರೆಂಬುದನ್ನು ಸುವರ್ಣನ್ಯೂಸ್ ಕವರ್ ಸ್ಟೋರಿಯಲ್ಲಿ ಬಿಚ್ಚಿಟ್ಟಿತ್ತು. ಆ ನಂತರ ಅಬಕಾರಿ ಇಲಾಖೆ ಅಧಿಕಾರಿಗಳು ಕಳ್ಳಭಟ್ಟಿ ದಂಧೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.