ಸೂಕ್ಷ್ಮ ವಿಚಾರವಾದ ಹಿನ್ನಲೆಯಲ್ಲಿ ಈ ವಿವಾದ ಮುಂದಿನ ದಿನಗಳಲ್ಲಿ ಭಾರಿ ವಿವಾದ ಪಡೆಯುವ ಕಾರಣದಿಂದ ದೂರನ್ನು ವಾಪಸ್ ಪಡೆಯುವುದಾಗಿ ಡಿಸೋಜಾ ಅವರು ತಿಳಿಸಿದರು. ಈ ಮೂಲಕ ಸಮಾಜದ ಸಾಮರಸ್ಯ ಕಾಪಾಡುವಲ್ಲಿ ಸುವರ್ಣ ನ್ಯೂಸ್ ಕೂಡ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿತು
ಬೆಂಗಳೂರು(ಡಿ.23): ರಾಜ್ಯದ ಇತಿಹಾಸ ಪ್ರಸಿದ್ಧ ದೇವಸ್ಥಾನ ಮಂಗಳೂರಿನ ಕದ್ರಿ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಧ್ವನಿವರ್ಧಕದ ವಿರುದ್ಧ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಹಾಗೂ ಮಂಗಳೂರು ಮೇಯರ್ ಅವರಿಗೆ ದೂರು ನೀಡಿದ್ದ ಸ್ಥಳೀಯರಾದ ಬ್ಲಾನಿ ಡಿಸೋಜಾ ಅವರು ಧಾರ್ಮಿಕ ಸಾಮರಸ್ಯ ಕಾಪಾಡುವ ಕಾರಣಕ್ಕಾಗಿ ದೂರು ವಾಪಸ್ ಪಡೆಯಲು ನಿರ್ಧರಿಸಿದ್ದಾರೆ.
ಈ ವಿಷಯದ ವಿಚಾರವಾಗಿ ಸುವರ್ಣ ನ್ಯೂಸ್ 'ಮಂಜುನಾಥ ಮತ್ತು ಮಾಲಿನ್ಯ' ಎಂಬ ಶೀರ್ಷಿಕೆಯಡಿ ಸ್ಟುಡಿಯೋದಲ್ಲಿ ಚರ್ಚೆಯನ್ನು ಹಮ್ಮಿಕೊಂಡಿತು. ಕಾರ್ಯಕ್ರಮದಲ್ಲಿ ದೂರುದಾರ ಬ್ಲಾನಿ ಡಿಸೋಜಾ ಕೂಡ ಆಗಮಿಸಿದ್ದರು. ಸೂಕ್ಷ್ಮ ವಿಚಾರವಾದ ಹಿನ್ನಲೆಯಲ್ಲಿ ಈ ವಿವಾದ ಮುಂದಿನ ದಿನಗಳಲ್ಲಿ ಭಾರಿ ವಿವಾದ ಪಡೆಯುವ ಕಾರಣದಿಂದ ಚರ್ಚೆಯ ವೇಳೆಯಲ್ಲಿ ದೂರನ್ನು ವಾಪಸ್ ಪಡೆಯುವುದಾಗಿ ಡಿಸೋಜಾ ಅವರು ತಿಳಿಸಿದರು. ಈ ಮೂಲಕ ಸಮಾಜದ ಸಾಮರಸ್ಯ ಕಾಪಾಡುವಲ್ಲಿ ಸುವರ್ಣ ನ್ಯೂಸ್ ಕೂಡ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿತು.
ಧ್ವನಿವರ್ಧಕದ ವಿರುದ್ಧ ತೊಂದರೆಯಾಗುತ್ತಿದೆ ಎಂದು 2016ರ ಆಗಸ್ಟ್ ನಲ್ಲಿ ಧಾರ್ಮಿಕ ದತ್ತಿ ಆಯುಕ್ತರು, ಮಂಗಳೂರು ಮೇಯರ್ ಅವ್ರಿಗೆ ಸ್ಥಳೀಯ ಕೆಲವರು ದೂರು ಸಲ್ಲಿಸಿದ್ದರು. ಅದರಂತೆ ಮನವಿಗೆ ಸ್ಪಂದಿಸಿದ ಇಲಾಖೆ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗೆ ನೋಟೀಸ್ ನೀಡಿ ಕ್ರಮಕ್ಕೆ ಆದೇಶಿಸಿರೋ ವಿಚಾರ ಸದ್ಯ ಬಾರೀ ವಿವಾದಕ್ಕೆ ಕಾರಣವಾಗಿತ್ತು. ಈ ನೋಟೀಸ್ ಮತ್ತು ಸ್ಥಳೀಯ ಬ್ಲಾನಿ ಡಿಸೋಜಾ ಎಂಬವರು ಸಲ್ಕಿಸಿರೋ ದೂರಿನ ಪ್ರತಿ ಸಾಮಾಜಿಕ ತಾಣಗಳಲ್ಲಿ ವೈರಲ್ ಕೂಡ ಆಗಿತ್ತು. ಹೀಗಾಗಿ ಸಾಮಾಜಿಕ ತಾಣಗಳಲ್ಲಿ ದೂರುದಾರರು ಮತ್ತು ಸರ್ಕಾರದ ವಿರುದ್ಧ ಕೆಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
