ಇಂದಿರಾ ಕ್ಲಿನಿಕ್'ನ ಕನ್ನಡ ಬೋರ್ಡ್'ನಲ್ಲಿ 9 ರಿಂದ 4 ಎಂದು ಬರೆದಿದ್ದರೆ, ಇಂಗ್ಲೀಷ್ ಬೋರ್ಡ್'ನಲ್ಲಿ 10 ರಿಂದ 5 ಗಂಟೆ ಎಂದು ನಮೂದಾಗಿತ್ತು.

ಬೆಂಗಳೂರು(ಡಿ.02): ನಗರದ ಮೆಜೆಸ್ಟಿಕ್'ನಲ್ಲಿ ಇಂದಿರಾ ಕ್ಲಿನಿಕ್ ಆರಂಭವಾಗಿದ್ದು ಅಧಿಕಾರಿಗಳು ವೇಳಾಪಟ್ಟಿ ವ್ಯತ್ಯಾಸ ಮಾಡಿ ಬೋರ್ಡ್ ಹಾಕಲಾಗಿತ್ತು.

ಈ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಕಟಿಸುವ ಮೂಲಕ ಅಧಿಕಾರಿಗಳನ್ನು ಎಚ್ಚರಿಸಿತ್ತು. ಸುವರ್ಣ ನ್ಯೂಸ್ ವರದಿಯಿಂದ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ಕ್ಲಿನಿಕ್ ವೇಳಾಪಟ್ಟಿಯನ್ನು ಸರಿಪಡಿಸಿದೆ.

ಇಂದಿರಾ ಕ್ಲಿನಿಕ್'ನ ಕನ್ನಡ ಬೋರ್ಡ್'ನಲ್ಲಿ 9 ರಿಂದ 4 ಎಂದು ಬರೆದಿದ್ದರೆ, ಇಂಗ್ಲೀಷ್ ಬೋರ್ಡ್'ನಲ್ಲಿ 10 ರಿಂದ 5 ಗಂಟೆ ಎಂದು ನಮೂದಾಗಿತ್ತು. ಇದು ಪ್ರಯಾಣಿಕರಲ್ಲಿ ಗೊಂದಲವನ್ನುಂಟು ಮಾಡಿತ್ತು. ಈ ಬಗ್ಗೆ ಸುವರ್ಣ ನ್ಯೂಸ್ ವರದಿಯಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ವೇಳಾಪಟ್ಟಿ ಸರಿಪಡಿಸಿದ್ದಾರೆ.

ಹಳೆ ಬೋರ್ಡ್ ಹೀಗಿತ್ತು: