ಇಲ್ಲಿನ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಕುಡಿಯುವ ನೀರಿನಲ್ಲೂ ರಾಜಕಾರಣ ಮಾಡಿಕೊಂಡು ನೀರಿನ ಆಹಾಹಕಾರ ಉಂಟು ಮಾಡಿದ್ದರು. 5 ಕಿಲೋಮೀಟರ್ ನಿಂದ ನೀರು ತರಲು ಅವೈಜ್ಞಾನಿಕವಾದ ಪೈಪ್ ಅಳವಡಿಕೆಯೂ ಒಂದು ಕಾರಣವಾಗಿತ್ತು,

ಚಿತ್ರದುರ್ಗ ಜಿಲ್ಲೆಯಲ್ಲಿ ಬೇಸಿಗೆಯ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಸಮಸ್ಯೆ ಎಷ್ಟಿತ್ತು ಎಂದರೆ ಮಹಿಳೆಯರು ಜೀವನ ನಿರ್ವಹಣೆಗೆ ಕೂಲಿ ಕೆಲಸ ಬಿಟ್ಟು ನೀರಿಗಾಗಿ ಕೈ ಗಾಡಿಗಳನ್ನು ತಳ್ಳಿಕೊಂಡು ಕಿಲೋ ಮೀಟರ್ ಗಟ್ಟಲೆ ದೂರ ಹೋಗಿ ನೀರು ತರುವ ಸ್ಥಿತಿ ನಿರ್ಮಾಣವಾಗಿತ್ತು ಇದಕ್ಕೆ ಕಾರಣ ಇಲ್ಲಿನ ಸ್ಥಳೀಯ ರಾಜಕಾರಣ. ಇಂತಹ ವಾಟರ್ ಪಾಲಿಟಿಕ್ಸ್'ನ ವರದಿಯನ್ನು ಸುವರ್ಣ ನ್ಯೂಸ್ ವರದಿಯನ್ನು ಮಾಡಿತ್ತು.

ಇಲ್ಲಿನ ಕೆಲ ಗ್ರಾಮ ಪಂಚಾಯಿತಿ ಸದಸ್ಯರು ಕುಡಿಯುವ ನೀರಿನಲ್ಲೂ ರಾಜಕಾರಣ ಮಾಡಿಕೊಂಡು ನೀರಿನ ಆಹಾಹಕಾರ ಉಂಟು ಮಾಡಿದ್ದರು. 5 ಕಿಲೋಮೀಟರ್ ನಿಂದ ನೀರು ತರಲು ಅವೈಜ್ಞಾನಿಕವಾದ ಪೈಪ್ ಅಳವಡಿಕೆಯೂ ಒಂದು ಕಾರಣವಾಗಿತ್ತು, ಇದೆಲ್ಲವನ್ನು ಸುವರ್ಣ ನ್ಯೂಸ್ ವರದಿ ಮಾಡಿದ್ದನ್ನು ಗಮನಿಸಿದ ಜಿಲ್ಲಾ ಉಪವಿಭಾಗಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗ್ಗೆ ತಿಳಿದುಕೊಂಡು ಸಮಸ್ಯೆಯನ್ನು ತಿಳಿಸಿಗೊಳಿಸಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಿದ್ದಾರೆ.