‘ಏಪ್ರಿಲ್‌ 4ರಂದು ಕನ್ನಡ ಪ್ರಭ ದಿನಪತ್ರಿಕೆ ಗೋಶಾಲೆಗಳ ನಿರ್ವ ಹಣೆ ಕುರಿತಂತೆ ವರದಿ ಪ್ರಕಟಿಸಿದೆ.
ಬೆಂಗಳೂರು(ಏ.12): ರಾಜ್ಯದ ಗೋಶಾಲೆಗಳಲ್ಲಿ ಜಾನುವಾರು ಗಳಿಗೆ ಸಮರ್ಪಕ ಮೇವು ಹಾಗೂ ನೀರು ಪೂರೈಕೆ ಇಲ್ಲದೇ ಕರಾಳ ಸ್ಥಿತಿ ನಿರ್ಮಾಣವಾಗಿದೆ ಎಂದು ಸುವರ್ಣ ನ್ಯೂಸ್-ಕನ್ನಡಪ್ರಭ ವಿಸ್ತೃತ ವರದಿ ಪ್ರಸಾರ ಮಾಡಿದ ಬೆನ್ನಲ್ಲೇ ಎಚ್ಚೆತ್ತಿರುವ ರಾಜ್ಯ ಸರ್ಕಾರ, ಗೋಶಾಲೆಗಳ ಸಮರ್ಪಕ ನಿರ್ವಹಣೆಗೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಕಟ್ಟೆಚ್ಚರ ನೀಡಿದೆ.
ಗೋಶಾಲೆಗಳ ಸ್ಥಿತಿಗತಿ ಮೇಲೆ ಬೆಳಕು ಚೆಲ್ಲಿದ್ದು, ನಿಯಮಾವಳಿ ಅನುಸಾರ ಗೋಶಾಲೆಗಳ ನಿರ್ವಹಣೆ ನಡೆಯುತ್ತಿಲ್ಲ ಎಂದು ವರದಿ ಮಾಡಿದೆ. ಟೀವಿ ಚಾನೆಲ್ಗಳಲ್ಲೂ ಕೂಡ ಗೋಶಾಲೆಗಳ ಅವ್ಯವಸ್ಥೆ ಬಗೆಗೆ ವರದಿ ಬರುತ್ತಿವೆ. ಹೀಗಾಗಿ ಈ ಕುರಿತು ಸಂಬಂಧಪಟ್ಟಜಿಲ್ಲಾಧಿಕಾರಿ ಗಳು, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕರು ಸೂಕ್ತ ಕ್ರಮ ಕೈಗೊ ಳ್ಳಬೇಕು' ಎಂದಿದ್ದಾರೆ. ಗೋಶಾಲೆಗಳಲ್ಲಿ ನಿಯಮಾನು ಸಾರ ಮೇವು ಹಾಗೂ ನೀರು ಪೂರೈಸು ವಂತೆ ಅಭಿವೃದ್ಧಿ ಆಯುಕ್ತರು ಕೂಡ ಈಗಾಗಲೇ ಎಲ್ಲ ಜಿಲ್ಲೆಗಳಿಗೆ ಸುತ್ತೋಲೆ ಹೊರಡಿಸಿದ್ದು, ಗೋಶಾಲೆಗಳ ನಿರ್ವ ಹಣೆಗೆ ಸೂಕ್ತ ನಿಯಮಾವಳಿಯನ್ನು ಸೂಚಿಸಿದ್ದಾರೆ.
