ಸುವರ್ಣ ನ್ಯೂಸ್ ಇಂಪಾಕ್ಟ್ | 'ಡ್ರಿಂಕ್ ಮಾಸ್ಟರ್' ಕುಮಾರಸ್ವಾಮಿ ಅಮಾನತು | ತಾತ್ಕಾ ರೈಲ್ವೇ ಸ್ಟೇಶನ್ ಮಾಸ್ಟರ್ ನೇಮಕ
ಚಿಕ್ಕಬಳ್ಳಾಪುರ (ಅ.13): ಕಂಠಪೂರ್ತಿ ಕುಡಿದು ಪ್ರಯಾಣಿಕರಿಗೆ ಟಿಕೆಟ್ ನೀಡದೇ ಸತಾಯಿಸುತ್ತಿದ್ದ ಶಿಡ್ಲಘಟ್ಟ ರೈಲ್ವೇ ಸ್ಟೇಶನ್ ಮಾಸ್ಟರ್ ಬಗ್ಗೆ ಸುವರ್ಣ ನ್ಯೂಸ್ ಮಾಡಿದ್ದ ವರದಿಯಿಂದ ಎಚ್ಚೆತ್ತುಕೊಂಡ ಹಿರಿಯ ರೈಲ್ವೇ ಅಧಿಕಾರಿಗಳು 'ಡ್ರಿಂಕ್ ಮಾಸ್ಟರ್' ಕುಮಾರಸ್ವಾಮಿಯನ್ನು ಅಮಾನತು ಮಾಡಿದ್ದಾರೆ.
ಶಿಡ್ಲಘಟ್ಟ ನಗರದ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಕುಮಾರಸ್ವಾಮಿ ಕರ್ತವ್ಯದ ವೇಳೆ ಕಂಠಪೂರ್ತಿ ಕುಡಿದು, ಕುಡಿದ ಮತ್ತಿನಲ್ಲಿ ಪ್ರಯಾಣಿಕರಿಗೆ ಟಿಕೆಟ್ ಕೊಡದೇ ಬೇಜಾವಬ್ದಾರಿ ತೋರುತ್ತಿರುವ ಬಗ್ಗೆ ಸುವರ್ಣ ನ್ಯೂಸ್ ವರದಿ ಮಾಡಿತ್ತು.
ಪ್ರತಿನಿತ್ಯ ಬೆಳ್ಳಂಬೆಳ್ಳಗ್ಗೆಯೇ ಕುಡಿದು ಪ್ರಯಾಣಿಕರಿಗೆ ಟಿಕೆಟ್ ನೀಡದೇ ಫುಲ್ ಟೈಟ್ ಆಗಿ ಮಲಗಿರುವ ಕುಮಾರಸ್ವಾಮಿ, ಕಚೇರಿಯಲ್ಲೇ ಸಿಗರೇಟು ಪ್ಯಾಕ್ ಕೂಡ ಪಕ್ಕದಲ್ಲೇ ಇಟ್ಟುಕೊಳ್ಳುತ್ತಿದ್ದ.
ಕುಮಾರಸ್ವಾಮಿ ದುರ್ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಹಿರಿಯ ರೈಲ್ವೆ ಅಧಿಕಾರಿಗಳು ಡ್ರಿಂಕಿಂಗ್ ಮಾಸ್ಟರ್ ಕುಮಾರಸ್ವಾಮಿಯನ್ನು ಅಮಾನತು ಮಾಡಿದ್ದಾರೆ.
ಈ ಬಗ್ಗೆ ಸುವರ್ಣ ನ್ಯೂಸ್ ಜತೆ ಮಾತನಾಡಿದ ಸಿನಿಯರ್ ಡಿಓಎಂ ಗೋಪಿನಾಥ್ ಅವರು ಕುಮಾರಸ್ವಾಮಿಯನ್ನು ಅಮಾನತು ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೇ, ಅವರ ಬದಲಾಗಿ ರವಿಕುಮಾರ್ ಎಂಬುವರನ್ನು ತಾತ್ಕಾಲಿಕವಾಗಿ ನೇಮಿಸಿಲಾಗಿದೆ ಎಂದಿದ್ದಾರೆ.
