ಸುವರ್ಣ ನ್ಯೂಸ್ ಇಂಪ್ಯಾಕ್ಟ್ : ಡಿಸಿಗೆ ಮುಖ್ಯ ಕಾರ್ಯದರ್ಶಿ'ಯಿಂದ ತರಾಟೆ

First Published 28, Feb 2018, 9:26 PM IST
Suvarna news Impact at Bijapur
Highlights

ರೈತರ ಜಮೀನಿಗೆ ಬೆಲೆ ನಿಗದಿ ಮಾಡಿದ್ದರೂ ಅಧಿಕೃತ ಆದೇಶವನ್ನೇ ಹೊರಡಿಸದೇ ಬೇಜವಾಬ್ದಾರಿತನ ಮೆರೆದಿದ್ದ ಡಿಸಿ ವಿರುದ್ಧ ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತರಾಟೆಗೆ ತಗೆದುಕೊಂಡರು.

ಬಸವನ ಬಾಗೇವಾಡಿ ರೈತರ ಜಮೀನು ವಶಕ್ಕೆ ಪಡೆದು ಪರಿಹಾರವನ್ನು ನೀಡದೆ ಸುಮ್ಮನಿದ್ದ ಕೆಐಎಡಿಬಿ ಬೋರ್ಡ್ ಇಂದು ಸಭೆ ನಡೆಸಿದೆ.

ಸುವರ್ಣ ನ್ಯೂಸ್ ವರದಿಯ ಹಿನ್ನಲೆಯಲ್ಲಿ ಎಚ್ಚೆತ್ತ ಅಧಿಕಾರಿಗಳು ಇವತ್ತು ಕೆಐಎಡಿಬಿ ಮಂಡಳಿ ಸಭೆ ನಡೆಸಿದ್ದಾರೆ. ಈ ವೇಳೆ ಪ್ರಕರಣದ ಬಗ್ಗೆ ಚರ್ಚೆ ನಡೆಸಿದ ಅಧಿಕಾರಿಗಳಿಗೆ ಸಭೆಯಲ್ಲಿ ವಿಜಯಪುರ ಡಿಸಿ ಬೇಜವಬ್ದಾರಿತನ ಗಮನಕ್ಕೆ ಬಂದಿದೆ. ರೈತರ ಜಮೀನಿಗೆ ಬೆಲೆ ನಿಗದಿ ಮಾಡಿದ್ದರೂ ಅಧಿಕೃತ ಆದೇಶವನ್ನೇ ಹೊರಡಿಸದೇ ಬೇಜವಾಬ್ದಾರಿತನ ಮೆರೆದಿದ್ದ ಡಿಸಿ ವಿರುದ್ಧ ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತರಾಟೆಗೆ ತಗೆದುಕೊಂಡರು.

ತಕ್ಷಣ ಅಧಿಕೃತ ಆದೇಶ ಕಳುಹಿಸಲು ಸೂಚನೆ ನೀಡಿರುವ ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ವಿ. ಪ್ರಸಾದ್​, ಡಿ.ಸಿ. ಆದೇಶ ತಲುಪುತ್ತಿದ್ದಂತೆ ರೈತರಿಗೆ ಪರಿಹಾರ ನೀಡಲು ಕೆಐಎಡಿಬಿ ಮಂಡಳಿ ಸಭೆಯಲ್ಲಿ ನಿರ್ಧರಿಸಿದ್ದಾರೆ.

loader