ಬೀದರ್ (ಸೆ.26): ಬೀದರ್​​​ ಜಿಲ್ಲೆಯಾದ್ಯಂತ ವರುಣನ ಆರ್ಭಟ ಕಡಿಮೆಯಾಗಿದೆ. ಆದರೆ ಮಹಾರಾಷ್ಟ್ರದ ಧನೇಗಾಂವ್​ ಡ್ಯಾಂನಿಂದ ನೀರು ಬಿಟ್ಟಿರುವ ಹಿನ್ನೆಲೆ ಮಾಂಜ್ರಾ ನದಿ ತೀರದ 12 ಗ್ರಾಮಗಳಿಗೆ ಜಲಾವೃತಗೊಳ್ಳುವ ಭೀತಿ ಎದುರಾಗಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ನದಿ ತೀರದ 12 ಗ್ರಾಮಗಳಲ್ಲಿ ಹೈಅಲರ್ಟ್ ಘೋಷಿಸಿದೆ. ಕಳೆದ ಮೂರು ದಿನಗಳಿಂದ ನೆರೆಯಲ್ಲಿ ಸಿಲುಕಿದ್ದ 40ಕ್ಕೂ ಹೆಚ್ಚು ಕಪಿಗಳು ರೋದಿಸುತ್ತಿದ್ದವು. ಈ ಬಗ್ಗೆ ಸುವರ್ಣನ್ಯೂಸ್ ವರದಿ ಪ್ರಸಾರ ಮಾಡಿತ್ತು.

ಬಳಿಕ ಜಿಲ್ಲಾ ನ್ಯಾ. ಸಂಜೀವಕುಮಾರ ಹಂಚಾಟೆ ನಮ್ಮ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ಸದ್ಯ ಸ್ಥಳದಲ್ಲೆ ಬೀಡಾರ ಹೂಡಿ ಎನ್‌ಡಿಆರ್ ಎಫ್ ತಂಡದಿಂದ ಕಪಿಗಳಿಗೆ ಆಹಾರದ ವ್ಯವಸ್ಥೆ ಕಲ್ಪಿಸಲಾಗಿದ್ದು, ಜಿಲ್ಲಾಡಳಿತದ ಸಕಲ ಅಧಿಕಾರಿಗಳ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.