ತುಮಕೂರು(ಅ.8): ನಿನ್ನೆ ತುಮಕೂರಿನ ತಿಪಟೂರು ತಾಲೂಕಿನ ಸಾರ್ಥಹಳ್ಳಿಯಲ್ಲಿನ ಗೃಹಬಂಧನ ಪ್ರಕರಣದ ಬಗ್ಗೆ ಸುವರ್ಣನ್ಯೂಸ್​ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದಿಸಿದ ಗ್ರಾಮಸ್ಥರು ಯುವತಿ ಶ್ರೀಲಕ್ಷ್ಮಿಯನ್ನ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಯುವತಿ ಶ್ರೀಲಕ್ಷ್ಮಿಗೆ  ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಲಕ್ಷ್ಮೀ ತೀವ್ರತರವಾದ ಮಾನಸಿಕ ಖಾಯಿಲೆಯಿಂದ ನರಳುತಿದ್ದು 6 ವಾರಗಳ ಚಿಕಿತ್ಸೆ ಅಗತ್ಯವಿದೆ ಅಂತಾ ಜಿಲ್ಲಾಸ್ಪತ್ರೆಯ ಮನೋವೈದ್ಯೆ ಡಾ. ಮಾಲಿನಿ ಸುವರ್ಣ ನ್ಯೂಸ್ ಗೆ ಹೇಳಿದ್ದಾರೆ. ಜೊತೆಗೆ ಸತತ 13 ವರ್ಷಗಳಿಂದ ಬಂಧನದಲ್ಲಿರುವುದರಿಂದ ಆಕೆ ನಿತ್ರಾಣಗೊಂಡಿದ್ದು ದೈಹಿಕವಾಗಿಯೂ ಸದೃಢವಾಗಬೇಕಿದೆ.