ರೋಗಿಗಳನ್ನ ಎರಡಲ್ಲಾ ಮೂರಲ್ಲಾ ಐದೈದು ಆಂಬುಲೆನ್ಸ್ ಬದಲಾಯಿಸಿ ಕರ್ಕೋಂಡು ಹೋಗಿ ಯಾವ ರೀತಿ ಅವರ ಪ್ರಾಣದ ಜೊತೆ ಚಲ್ಲಾಟ ಆಡುತ್ತಾರೆ ಅನ್ನೋದನ್ನ ನಮ್ಮ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿದೆವು.
ಸರ್ಕಾರಿ ಆಂಬುಲೆನ್ಸ್ ಸೇವೆ 108ರ ಬಗ್ಗೆ ಎಲ್ಲರಿಗೂ ಹೆಮ್ಮೆ ಇದೆ. ಅದರ ಕಾರ್ಯದ ಬಗ್ಗೆ ಗೌರವ ಇದೆ. ಆದರೆ ಈ ಹೆಮ್ಮೆ ಗೌರವಕ್ಕೆ ಧಕ್ಕೆ ತರುವಂಥಾ ಬೆಳವಣಿಗೆಯೊಂದು ಇಲ್ಲಿ ನಡೀತಿದೆ. ಈ 108 ಸೇವೆ ಹಗರಣದ ಕೂಪ ಆಗಿರೋದನ್ನ ನಮ್ಮ ಕವರ್ ಸ್ಟೋರಿ ತಂಡ ಬಟಾಬಯಲು ಮಾಡಿದೆ.
108 ಸರ್ಕಾರಿ ಆಂಬುಲೆನ್ಸ್ ಅದೆಷ್ಟೋ ಜನರಿಗೆ ಪ್ರಾಣ ದಾನ ಮಾಡಿದ ಸಂಜೀವಿನಿ. ಆದರೆ ಇಂಥಾ ಪವಿತ್ರ ಸೇವೆಯನ್ನು ಆಂಬುಲೆನ್ಸ್ ನಿರ್ವಹಣೆ ಹೊಣೆ ಹೊತ್ತ ಜಿವಿಕೆ ಅನ್ನೋ ಖಾಸಗಿ ಸಂಸ್ಥೆ ಅಪವಿತ್ರಗೊಳಿಸುತ್ತಿದೆ. ಹಣಗಳಿಸೋ ದುರುದ್ದೇಶದಿಂದ ಮಾಡಬಾರದ ಕೆಲಸ ಮಾಡುತ್ತಿದೆ.
ಹೌದು ಇವರ ದೂರಿಗೆ ಪೂರಕವಾದ ಸಾಕ್ಷಿಗಳು ಬೇಕಲ್ವೆ. ಅದಕ್ಕಾಗಿ ನಮ್ಮ ಆಪರೇಷನ್ 108ನ್ನ ಪ್ರಾರಂಭಿಸಿದ್ದೆವು. ನಮ್ಮ ಆಪರೇಷನ್ನಲ್ಲಿ ಸರ್ಕಾರದ 108 ಆಂಬುಲೆನ್ಸ್ ಸೇವೆಯ ನಿರ್ವಹಣೆಯ ಹೊಣೆ ಹೊತ್ತ ಜಿವಿಕೆ ಸಂಸ್ಥೆ ಯಾವ ರೀತಿ ಹಣಕ್ಕಾಗಿ ತನ್ನ ಅಧಿಕಾರ ದುರ್ಬಳಕೆ ಮಾಡುತ್ತಿದೆ ಅನ್ನೋ ಬಯಲಾಯ್ತು.
ರೋಗಿಗಳನ್ನ ಎರಡಲ್ಲಾ ಮೂರಲ್ಲಾ ಐದೈದು ಆಂಬುಲೆನ್ಸ್ ಬದಲಾಯಿಸಿ ಕರ್ಕೋಂಡು ಹೋಗಿ ಯಾವ ರೀತಿ ಅವರ ಪ್ರಾಣದ ಜೊತೆ ಚಲ್ಲಾಟ ಆಡುತ್ತಾರೆ ಅನ್ನೋದನ್ನ ನಮ್ಮ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿದೆವು. ಇಷ್ಟೇ ಅಲ್ಲ ಇವರು ಆಂಬುಲೆನ್ಸ್ ನಿರ್ವಹಣೆಯನ್ನೂ ಸರಿ ಮಾಡದೆ ಭಾರೀ ಮೋಸ ಮಾಡುತ್ತಿದ್ದಾರೆ. ಇದು ನಮ್ಮ ರಿಯಾಲಿಟಿ ಚೆಕ್ನಲ್ಲಿ ಬಯಲಾಯ್ತು.
ಜೊತೆಗೆ ಜಿವಿಕೆ ಸಂಸ್ಥೆ ಆಂಬುಲೆನ್ಸ್ ಸಿಬ್ಬಂದಿಗೆ ಯಾವ ಸೌಲಭ್ಯವನ್ನೂ ಒದಗಿಸದೆ, ಅವರನ್ನ ನಿರಂತರವಾಗಿ ಶೋಷಿಸುತ್ತಿದೆ. ಜಿವಿಕೆ ಸಂಸ್ಥೆ ಇಷ್ಟೆಲ್ಲಾ ಕರ್ಮಕಾಂಡ ಮಾಡಿದ್ದರೂ ಆರೋಗ್ಯ ಸಚಿವರು ಇವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದಿರುವುದು ಹಲವು ಅನುಮಾನ ಸೃಷ್ಟಿಸಿದೆ.
ವರದಿ: ರಂಜಿತ್ಹಾಗೂವಿಜಯಲಕ್ಷ್ಮಿಶಿಬರೂರು, ಸುವರ್ಣನ್ಯೂಸ್
