ನಿಮ್ಮ ಸುವರ್ಣ ನ್ಯೂಸ್  ಎಕ್ಸಕ್ಲೂಸಿವ್​​ ಸ್ಪೋಟಕ ಸುದ್ದಿಯೊಂದನ್ನು ಬಹಿರಂಗಪಡಿಸುತ್ತಿದೆ. ಇಡೀ ದೇಶ ಮಾತ್ರವೇ ಏಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಹತ್ಯೆಯೊಂದರಲ್ಲಿ ಪೊಲೀಸರಿಗೆ ಬೇಕಾಗಿರುವ ವ್ಯಕ್ತಿ ಈತ.

ಬೆಂಗಳೂರು (ಜ.01): ನಿಮ್ಮ ಸುವರ್ಣ ನ್ಯೂಸ್ ಎಕ್ಸಕ್ಲೂಸಿವ್​​ ಸ್ಪೋಟಕ ಸುದ್ದಿಯೊಂದನ್ನು ಬಹಿರಂಗಪಡಿಸುತ್ತಿದೆ. ಇಡೀ ದೇಶ ಮಾತ್ರವೇ ಏಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಹತ್ಯೆಯೊಂದರಲ್ಲಿ ಪೊಲೀಸರಿಗೆ ಬೇಕಾಗಿರುವ ವ್ಯಕ್ತಿ ಈತ.

ಇದು ಸುವರ್ಣ ನ್ಯೂಸ್ ನ ಸ್ಫೋಟಕ ಸುದ್ದಿ. ಈತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬೇಕಾದವನು. ಕಳೆದ ನಾಲ್ಕು ತಿಂಗಳಿನಿಂದ ಪೊಲೀಸರ ನಿದ್ದೆಗೆಡಿಸಿದ್ದವನು ಇದೇ ವ್ಯಕ್ತಿ. ಗೌರಿ ಲಂಕೇಶ್ ಹತ್ಯೆ ಮಾಡಿದ್ದು ಇದೇ ಹಂತಕನಾ, ಗೌರಿ ಹತ್ಯೆಗೂ ಒಂದೂವರೆ ಗಂಟೆ ಮೊದಲು ಗೌರಿ ಮನೆ ಮುಂದೆ ಈತ ಕಾಣಿಸಿಕೊಂಡಿದ್ದು ಏಕೆ? ಸೆಪ್ಟಂಬರ್ 5ರ ಸಂಜೆ 7:15ರ ಸುಮಾರಿಗೆ ಗೌರಿ ಮನೆ ಓಡಾಡಿದ್ದಾನೆ. ಈಕ ಆಪಲ್ ಮೊಬೈಲ್​ನಿಂದ ಯಾರಿಗೆ ಕರೆ ಮಾಡಿದ್ದಾನೆ ಎಂಬ ಅನುಮಾನದಲ್ಲಿ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಈತ ಹತ್ಯೆಗೂ ಮೊದಲು ಹೆಲ್ಮೆಟ್ ಧರಿಸದೇ ಬಂದಿದ್ದನಾ ದಾಡಿ ತೆಗೆದರೆ ಹೇಗೆ ಕಾಣಬಹುದು ಅಂತ ಬೇರೆ ಬೇರೆ ವೇಷದಲ್ಲಿ ಈತನ ಪೋಟೋ ಮಾರ್ಪಡಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಆತ ಮಂಗಳೂರು ಮೂಲದ ವ್ಯಕ್ತಿ ಎಂಬ ಅನುಮಾನದಲ್ಲಿ ಸಿಸಿಟಿವಿಯನ್ನು ಜಾಲಾಡುತ್ತಿದ್ದಾರೆ.