ಶುದ್ಧೀಕರಿಸಿದ ನೀರು ಎಂದು ಹೇಳಿ ತುಮಕೂರಿ‌ನಲ್ಲಿ ನೀರು ಸರಬರಾಜು ಮಾಡುತ್ತಿದ್ದಂತಹ ಖದೀಮರಿಗೆ ಸುವರ್ಣ ನ್ಯೂಸ್ ನ ಕವರ್ ಸ್ಟೋರಿ ತಂಡ ಸಿಂಹಸ್ವಪ್ನವಾಗಿದೆ.

ಬೆಂಗಳೂರು (ಏ.05): ಶುದ್ಧೀಕರಿಸಿದ ನೀರು ಎಂದು ಹೇಳಿ ತುಮಕೂರಿ‌ನಲ್ಲಿ ನೀರು ಸರಬರಾಜು ಮಾಡುತ್ತಿದ್ದಂತಹ ಖದೀಮರಿಗೆ ಸುವರ್ಣ ನ್ಯೂಸ್ ನ ಕವರ್ ಸ್ಟೋರಿ ತಂಡ ಸಿಂಹಸ್ವಪ್ನವಾಗಿದೆ.

ಕಳೆದ ವಾರ ಕವರ್​ ಸ್ಟೋರಿಯಲ್ಲಿ ಈ ಖದೀಮರ ಬಂಡವಾಳ ಬಯಲು ಮಾಡಲಾಗಿತ್ತು. ಇದೀಗ ಅಧಿಕಾರಿಗಳು ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ. ತುಮಕೂರು ಮಹಾನಗರ ಪಾಲಿಕೆ ಮೇಯರ್ ರವಿಕುಮಾರ್ ಅಧಿಕಾರಿಗಳನ್ನು ಕರೆದು ಅಕ್ರಮವಾಗಿ ನಡೆಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಇದರನ್ವಯ ಘಟಕಗಳಿಗೆ ಭೇಟಿ ನೀಡಿದ ಪಾಲಿಕೆ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಮೊದಲಿಗೆ ನೀರಾಜ, ಎಂಡಿಎಂ, ಶಿವಶ್ರೀ, ಯಶ್ ಆಕ್ವಾ ಸೇರಿದಂತೆ ಅನೇಕ ಘಟಕಗಳಿಗೆ ಭೇಟಿ ನೀಡಿತು. 7 ದಿನಗಳಲ್ಲಿ ಉತ್ತರಿಸುವಂತೆ ಪಾಲಿಕೆಯಿಂದ ನೋಟೀಸ್ ಜಾರಿ ಮಾಡಲಾಗಿದೆ.