ಶುಂಠಿ ಅನ್ನೋ ಅಮೃತಕ್ಕೆ  ಇವತ್ತು ಅನಾಮತ್ತಾಗಿ ವಿಷ ಸೇರಿಸ್ತಿದೆ ಆಹಾರ ಮಾಫಿಯಾ. ಲಾಭದಾಸೆಗೆ ಶುಂಠಿಯೊಳಗೆ ಗಂಧಕದಂಥಾ ಅಪಾಯಕಾರಿ ರಾಸಾಯನಿಕ ಸೇರಿಸಿ ನಮ್ಮ ಬಾಳಿನ ಜೊತೆ ಚಲ್ಲಾಟ ಆಡುತ್ತಿದ್ದಾರೆ ಸ್ವಾರ್ಥಿ ಉದ್ಯಮಿಗಳು.

ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ಮತ್ತೊಂದು ವಿಷ ಆಹಾರ ಮಾಫಿಯಾದ ಬೇಟೆ ಆಡಿದೆ. ಈ ಬಾರಿ ನಮ್ಮ ಆರೋಗ್ಯ ವೃದ್ಧಿಸೋ ಸಂಜೀವಿನಿ ಆಗ್ಬೇಕಾದ ಶುಂಠಿಗೆ ಯಾವ ರೀತಿ ವಿಷ ಸೇರಿಸ್ತಾರೆ ಅನ್ನೋ ಭಯಾನಕ ಸತ್ಯ'ವನ್ನ ಬಯಲು ಮಾಡಿದೆ. ಅದರ ಸಂಕ್ಷಿಪ್ತ ವರದಿ ಇಲ್ಲಿದೆ ನೋಡಿ.

ಶುಂಠಿ ಅನ್ನೋ ಅಮೃತಕ್ಕೆ ಇವತ್ತು ಅನಾಮತ್ತಾಗಿ ವಿಷ ಸೇರಿಸ್ತಿದೆ ಆಹಾರ ಮಾಫಿಯಾ. ಲಾಭದಾಸೆಗೆ ಶುಂಠಿಯೊಳಗೆ ಗಂಧಕದಂಥಾ ಅಪಾಯಕಾರಿ ರಾಸಾಯನಿಕ ಸೇರಿಸಿ ನಮ್ಮ ಬಾಳಿನ ಜೊತೆ ಚಲ್ಲಾಟ ಆಡುತ್ತಿದ್ದಾರೆ ಸ್ವಾರ್ಥಿ ಉದ್ಯಮಿಗಳು. ಶುಂಠಿ ಬೆಳ್ಳಗೆ ಕಾಣಲಿ, ಹೆಚ್ಚು ವರ್ಷ ಬಾಳಿಕೆ ಬರಲಿ, ಡಿಮ್ಯಾಂಡ್​ ಬರಲಿ ಅನ್ನೋ ದುರುದ್ದೇಶದಿಂದ ಉದ್ಯಮಿಗಳು ಗಂಧಕದಂಥಾ ಅಪಾಯಕಾರಿ ರಾಸಾಯನಿಕವನ್ನು ಹೊಗೆ ರೂಪದಲ್ಲಿ ಶುಂಠಿಯೊಳಗೆ ಸೇರಿಸಿ, ಜನರಿಗೆ ಹಾಗೂ ಪರಿಸರಕ್ಕೆ ಕಂಟಕವಾಗಿ ಕಾಡುತ್ತಿದ್ದಾರೆ.

ಹಸಿ ಶುಂಠಿ, ಒಳ ಶುಂಠಿಯನ್ನ ಆಸಿಡ್​, ಸೋಡಿಯಂ, ಟಾಯ್ಲೆಟ್​ ಕ್ಲೀನರ್​,​ ಫಿನಾಯಿಲ್ ಮುಂತಾದ​ ವಿಷಕಾರಿ ರಾಸಾಯನಿಕ ಹಾಕಿ ತೊಳೀತಾರೆ. ಇದೇ ವಿಷ ರಾಸಾಯನಿಕ ಶುಂಠಿಯನ್ನ ಔಷಧಿ, ಆಹಾರ ಪದಾರ್ಥಗಳಿಗೆ ಬಳಸಲಾಗುತ್ತೆ. ಶುಂಠಿ ಕಣಗಳಲ್ಲಿ ಗಂಧಕದ ಹೊಗೆ ಹಾಕುವುದರಿಂದ ಶಿವಮೊಗ್ಗದ ಹತ್ತಾರು ಹಳ್ಳಿ ಮಂದಿ ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳಲ್ಲಿ ಅಸ್ತಮಾ ಕಾಮನ್​ ಆಗಿದೆ. ಪರಿಸರ, ಅಂತರ್ಜಲ ಗಂಧಕಮಯವಾಗಿದೆ. ಆದರೂ ಸರ್ಕಾರ ಈ ವಿಷ ಆಹಾರ ಮಾಫಿಯಾದ ವಿರುದ್ಧ ಕ್ರಮಕೈಗೊಳ್ಳದಿರೋದು ಅನುಮಾನ ಮೂಡಿಸಿದೆ.

ವರದಿ: ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್​