ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ‘ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ರಾಜಕಾರಣವನ್ನು ಹೊರತುಪಡಿಸಿ ಅನೇಕ ವಿಚಾರ ಮಾತನಾಡಿದರು.
ಬೆಂಗಳೂರು[ಮಾ. 22] ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಅಸಾಮಾನ್ಯ ಕನ್ನಡಿಗರನ್ನು ಆಯ್ಕೆ ಮಾಡುವುದು ಕಷ್ಟದ ಸಂಗತಿ. ಅಸಾಮಾನ್ಯ ಕನ್ನಡಿಗರನ್ನ ಆಯ್ಕೆ ಮಾಡಿದ ಎಲ್ಲರಿಗೂ ನನ್ನ ಧನ್ಯವಾದಗಳು. ಇದೊಂದು ಪವಿತ್ರ ಕಾರ್ಯಕ್ರಮ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಸುವರ್ಣನ್ಯೂಸ್ ಮತ್ತು ಕನ್ನಡಪ್ರಭ ‘ಅಸಾಮಾನ್ಯ ಕನ್ನಡಿಗ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಇಂತಹ ಅಸಾಮಾನ್ಯ ಕನ್ನಡಿಗರಾಗಬೇಕು ಅಂದರೆ ಅವರ ಕುಟುಂಬದವರು ಸಾಕಷ್ಟು ಬೆಂಬಲ ನೀಡಿರುತ್ತಾರೆ. ಅವರಿಗೂ ನನ್ನ ಧನ್ಯವಾದಗಳು. ರಾಜಕಾರಣ ಮಾತನಾಡಲು ನನಗೆ ಇಷ್ಟವಿಲ್ಲ. ನಾವು ನಮ್ಮ ನಂಬಿಕೆಯಿಂದ ಬದುಕುತ್ತೇವೆ. ಕೆಲವರು ಒಳ್ಳೆಯವರನ್ನು ನಂಬುತ್ತಾರೆ, ಕೆಲವರು ಕೆಟ್ಟವರನ್ನು ನಂಬುತ್ತಾರೆ. ಅದು ಅವರವರಿಗೆ ಬಿಟ್ಟಿದ್ದು. ಇಂತಹ ಕಾರ್ಯಕ್ರಮಗಳಿಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು.
ಯಶ್ ದಿನ ಬಣ್ಣ ಹಾಕಿ ನಾಟಕ ಮಾಡಿದ್ದಾರೆ. ಆದರೆ ನಾವು ಬಣ್ಣ ಹಾಕದೇ ನಾಟಕ ಮಾಡುತ್ತೇವೆ ಎಂದು ಡಿಕೆಶಿ ಹಾಸ್ಯ ಚಟಾಕಿ ಹಾರಿಸಿದರು.
