ಒಟ್ಟು 224 ವಿದಾನಸಭಾ ಕ್ಷೇತ್ರಗಳಲ್ಲಿ ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ, ಮೈಸೂರು ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಬೆಂಗಳೂರು ಒಳಗೊಂಡು ಸಮೀಕ್ಷೆ ನಡೆಸಲಾಗಿತ್ತು.
ಬೆಂಗಳೂರು(ಡಿ.07): ಸುವರ್ಣ ನ್ಯೂಸ್ ಹಾಗೂ ಸಮೀಕ್ಷಾ ಸಂಸ್ಥೆ ಸಿ'ಝೆಡ್ ಜಂಟಿ ಸಹಯೋಗದಲ್ಲಿ ನಡೆಸಿದ ಮುಂದಿನ 2018ರ ವಿದಾನಸಭಾ ಚುನಾವಣೆಯ ಸಮೀಕ್ಷೆಯಲ್ಲಿ ರಾಜ್ಯದ ಮತದಾರ ಯಾವೊಂದು ಪಕ್ಷಕ್ಕೂ ಬಹುಮತ ನೀಡಿಲ್ಲ.
ಸಮೀಕ್ಷೆಯಂತೆ ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳಿಗೂ ಅಧಿಕಾರ ರಚಿಸುವ ಅವಕಾಶವಿದೆ. ಒಟ್ಟು 224 ವಿದಾನಸಭಾ ಕ್ಷೇತ್ರಗಳಲ್ಲಿ ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ, ಮೈಸೂರು ಕರ್ನಾಟಕ, ಕರಾವಳಿ ಕರ್ನಾಟಕ ಹಾಗೂ ಬೆಂಗಳೂರು ಒಳಗೊಂಡು ಸಮೀಕ್ಷೆ ನಡೆಸಲಾಗಿತ್ತು.
ಸಮೀಕ್ಷೆಯ ಪ್ರಕಾರ 224 ಕ್ಷೇತ್ರಗಳಲ್ಲಿ ಕಾಂಗ್ರೆಸ್ 88, ಬಿಜೆಪಿ 82, ಜೆಡಿಎಸ್ 43 ಹಾಗೂ ಇತರೆ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಉತ್ತರ,ಮಧ್ಯ,ಕರಾವಳಿ ಭಾಗಗಳಲ್ಲಿ ಕಾಂಗ್ರೆಸ್, ಬಿಜೆಪಿ ಪ್ರಾಬಲ್ಯ ಮೆರೆದರೆ, ಮೈಸೂರು ಕರ್ನಾಟಕ, ಬೆಂಗಳೂರು ಕಡೆ ಜೆಡಿಎಸ್ ಹಾಗೂ ಕಾಂಗ್ರೆಸ್ ಜಯ ಪಡೆಯಲಿದೆ.
ಜೆಡಿಎಸ್ ಕಿಂಗ್ ಮೇಕರ್
ಮ್ಯಾಜಿಕ್ ಸಂಖ್ಯೆ 113 ಯಾವೊಂದು ಪಕ್ಷಕ್ಕೂ ಸಿಗದ ಕಾರಣ 40 ರಿಂದ 45 ಪಡೆಯುವ ಜೆಡಿಎಸ್ ಕಿಂಗ್ ಮೇಕರ್ ಆಗುವ ಸಾಧ್ಯತೆ ನಿಚ್ಚಳವಾಗಿದೆ. ಎರಡೂ ರಾಜಕೀಯ ಪಕ್ಷಗಳ ಜೊತೆಯಲ್ಲಿ ಅಧಿಕಾರ ಹಂಚಿಕೊಂಡು ಸರ್ಕಾರ ರಚಿಸುವ ಸಂಭವ ಹೆಚ್ಚಾಗಿದೆ. ನೂತನ ಪಕ್ಷಗಳಾದ ಉಪೇಂದ್ರ ಅವರ ಕಪಿಜೆಪಿ, ಅಮ್ ಆದ್ಮಿ ಮುಂತಾದವು 11 ಸ್ಥಾನಗಳಿಗೆ ತೃಪ್ತಿ ಹೊಂದಲಿವೆ.
