ಕುಟುಕು ಕಾರ್ಯಾಚರಣೆ ನಡೆಸಿ ಸಾಕ್ಷಿ ಸಮೇತ ಪ್ರಸಾರ ಮಾಡುತ್ತಿದ್ದಂತೆ ಪೊಲೀಸ್​ ಆಯುಕ್ತರೇ ಅದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಇಂತಹ ದಂಧೆಗಳ ಕಡಿವಾಣ ಹಾಕುವುದಷ್ಟೇ ಅಲ್ಲದೆ, ಅಕ್ರಮಕ್ಕೆ ರಕ್ಷಣೆ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ.

ಬೆಂಗಳೂರು (ಮಾ.28): ಬೆಂಗಳೂರಿನ ಬಹುತೇಕ ಕಡೆ ಮಸಾಜ್​ ಪಾರ್ಲರ್​ ಹೆಸರಲ್ಲಿ ನಡೆಯುತ್ತಿರುವ ಮಾಂಸದಂಧೆಯನ್ನು ಸುವರ್ಣ ನ್ಯೂಸ್​ ಕುಟುಕು ಕಾರ್ಯಾಚರಣೆ ನಡೆಸಿ ಪ್ರಸಾರ ಮಾಡಿದ ವರದಿಯನ್ನು ಪೊಲೀಸ್ ಇಲಾಖೆಯೇ ಒಪ್ಪಿಕೊಂಡಿದೆ. ಅಲ್ಲದೆ, ದಂಧೆಗೆ ಬೆನ್ನೆಲುಬಾಗಿದ್ದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಬಿಸಿ ಮುಟ್ಟಿಸಲಾಗಿದೆ. 

ನಗರದಲ್ಲಿ ವೇಶ್ಯಾವಾಟಿಕೆ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ವರದಿ ಮಾಡುವಂತೆ ಪ್ರತಿದಿನ ಹತ್ತಾರು ಕರೆಗಳು ಸುವರ್ಣ ನ್ಯೂಸ್​ಗೆ ಕಚೇರಿಗೆ ಬರ್ತಾನೇ ಇದ್ದವು. ಅದರಲ್ಲೂ ಇಂದಿರಾನಗರ, ಜೀವನ್​ ಭೀಮಾನಗರದಲ್ಲಿ ತುಸು ಹೆಚ್ಚಾಗಿಯೇ ಈ ದಂಧೆ ಇದೆ ಎಂಬ ಮಾಹಿತಿ ಬಂದಿತ್ತು.

ಕುಟುಕು ಕಾರ್ಯಾಚರಣೆ ನಡೆಸಿ ಸಾಕ್ಷಿ ಸಮೇತ ಪ್ರಸಾರ ಮಾಡುತ್ತಿದ್ದಂತೆ ಪೊಲೀಸ್​ ಆಯುಕ್ತರೇ ಅದನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಇಂತಹ ದಂಧೆಗಳ ಕಡಿವಾಣ ಹಾಕುವುದಷ್ಟೇ ಅಲ್ಲದೆ, ಅಕ್ರಮಕ್ಕೆ ರಕ್ಷಣೆ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮದ ಭರವಸೆ ನೀಡಿದ್ದಾರೆ.

ಪೂರ್ವ ವಲಯ ಡಿಸಿಪಿ ಅಜಯ್ ಹಿಲೋರಿ ಸೇರಿದಂತೆ ಎಲ್ಲಾ ಹಿರಿಯ ಅಧಿಕಾರಿಗಳಿಗೂ ಚುರುಕು ಮುಟ್ಟಿಸಿದ್ದು, ಜೀವನ್​ ಭೀಮಾನಗರ ಇನ್ಸ್​​ಪೆಕ್ಟರ್​ ಶಿವಪ್ರಸಾದ್'​ ರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ

ಸುವರ್ಣ ನ್ಯೂಸ್​ ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಅಕ್ರಮ ದಂಧೆ ಮಾಡುತ್ತಿದ್ದ ಬಹುತೇಕ ಮಸಾಜ್​​ ಪಾರ್ಲರ್'​ಗೆ ಬೀಗ ಹಾಕಿಸಿದ್ದಾರೆ. ಅಲ್ಲದೆ, ಅಕ್ರಮದಲ್ಲಿ ಭಾಗಿಯಾಗುವವರಿಗೂ ಖಡಕ್​ ಎಚ್ಚರಿಕೆ​​ ಕೂಡ ಹಿರಿಯ ಅಧಿಕಾರಿಗಳು ನೀಡಿದ್ದಾರೆ. ಹಲಸೂರು ಉಪವಿಭಾಗದ ಎಸಿಪಿ, ಪೂರ್ವ ವಿಭಾಗದ ಡಿಸಿಪಿ ಅವರಿಗೂ ನೋಟಿಸ್​​ ಜಾರಿ ಮಾಡಲಾಗಿದೆ.