ಯಾದಗಿರಿ(ಅ.04): ನಿಧಿಯಾಸೆಗೆ 18 ತಿಂಗಳ ಹೆಣ್ಣು ಮಗುವೊಂದನ್ನು ಬಲಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಬಲಿ ಕೊಟ್ಟ ಬಳಿಕ ಮಗುವಿನ ಮೃತ ದೇಹವನ್ನು ಬಾವಿಗೆ ಎಸೆದಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಮೃತಾ ಹೆಸರಿನ 18 ತಿಂಗಳ ಕಂದಮ್ಮ ಸಾವನ್ನಪ್ಪಿದೆ. ಮಗುವಿನ ಪೊಷಕರ ಮನೆಯ ಹಿಂಭಾಗದಲ್ಲಿ ಮಾಟ ಮಂತ್ರಕ್ಕೆ ಬಳಸಲಾದ ಅರಿಶಿಣ, ಕುಂಕುಮ, ಅಕ್ಕಿ ಇನ್ನಿತರ ವಸ್ತುಗಳು ಪತ್ತೆಯಾಗಿವೆ. ಮಗುವನ್ನು ನಿಧಿಯಾಸೆಗೆ ಬಲಿ ನೀಡಲಾಗಿದೆ ಎನ್ನುವ ಮಾತುಗಳು ಕೇಳಿಬಂದಿದೆ.

ಮಗುವಿನ ಮೃತ ದೇಹವನ್ನು ಮನೆಯ ಹಿಂಭಾಗದಲ್ಲಿರುವ ಬಾವಿಯಲ್ಲಿ ಎಸೆಯಲಾಗಿದ್ದು, ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.