ಕಳೆದ ಬುಧವಾರ ಕ್ಯಾನ್ಸಸ್’ನ ನೈಟ್ ಕ್ಲಬ್’ವೊಂದರಲ್ಲಿ ಆ್ಯಡಂ ಪುರಿನ್'ಟನ್ ಎಂಬ ಅಮೆರಿಕಾದ ಮಾಜಿ ನೌಕಾಧಿಕಾರಿ ಕ್ಷುಲ್ಲಕ ವಿಚಾರದಲ್ಲಿ ಭಾರತೀಯ ಇಂಜಿನಿಯರ್ ಶ್ರೀನಿವಾಸ್’ಗೆ ಗುಂಡು ಹಾರಿಸುವಾಗ ಮಧ್ಯೆ ಪ್ರವೇಶಿಸಿ ತಡೆಯಲು ಯತ್ನಿಸಿದ್ದೇ ಈ ಇಯಾನ್ ಗ್ರಿಲಾಟ್.
ನವದೆಹಲಿ (ಫೆ.28): ಚಿತ್ರದಲ್ಲಿ ಕಾಣುವ ವ್ಯಕ್ತಿಗೆ ಅತೀ ಶೀಘ್ರದಲ್ಲಿ ಗುಣಮುಖರಾಗುಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಶುಭ ಹಾರೈಸಿದ್ದಾರೆ.
ಚಿತ್ರದಲ್ಲಿರುವ ಅಮೆರಿಕನ್ ಪ್ರಜೆಯ ಹೆಸರು ಇಯಾನ್ ಗ್ರಿಲಾಟ್. ಕಳೆದ ಬುಧವಾರ ಕ್ಯಾನ್ಸಸ್’ನ ನೈಟ್ ಕ್ಲಬ್’ವೊಂದರಲ್ಲಿ ಆ್ಯಡಂ ಪುರಿನ್'ಟನ್ ಎಂಬ ಅಮೆರಿಕಾದ ಮಾಜಿ ನೌಕಾಧಿಕಾರಿ ಕ್ಷುಲ್ಲಕ ವಿಚಾರದಲ್ಲಿ ಭಾರತೀಯ ಇಂಜಿನಿಯರ್ ಶ್ರೀನಿವಾಸ್’ಗೆ ಗುಂಡು ಹಾರಿಸುವಾಗ ಮಧ್ಯೆ ಪ್ರವೇಶಿಸಿ ತಡೆಯಲು ಯತ್ನಿಸಿದ್ದೇ ಈ ಇಯಾನ್ ಗ್ರಿಲಾಟ್.
ಗ್ರಿಲಾಟ್ ಶ್ರಿನಿವಾಸ್ ಅವರನ್ನು ಬದುಕಿಸುವ ಪ್ರಯತ್ನದಲ್ಲಿ ಗುಂಡೇಟು ತಿಂದು ಗಾಯಗೊಂಡಿದ್ದಾರೆ. ಕೈ ಹಾಗೂ ಎದೆಗೆ ಗುಂಡು ತಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಿಯಾಟ್ ಅವರಿಗೆ ಭಾರತವು ಸಲ್ಯೂಟ್ ಮಾಡುತ್ತದೆ ಎಂದು ಸುಷ್ಮಾ ಹೇಳಿದ್ದಾರೆ.
