ನವದೆಹಲಿ(ಆ.06): ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಕೇಂದ್ರ ಸರ್ಕಾರ ನಿರ್ಧಾರ ಇಡಿ ದೇಶಕ್ಕೆ ಸಂಭ್ರಮ ತಂದಿತ್ತು. ಆದರೆ ಇದರ ಬೆನ್ನಲ್ಲೇ  ಬಿಜೆಪಿ ಹಿರಿಯ ನಾಯಕಿ, ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ಮರಾಜ್ ನಿಧನ ಭಾರತೀಯರನ್ನು ಶೋಕಸಾಗರಲ್ಲಿ ಮುಳುಗಿಸಿದೆ. ಆರ್ಟಿಕಲ್ 370 ರದ್ದು ಕುರಿತು ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ಸಂತಸ ಹಂಚಿಕೊಂಡಿದ್ದರು. ಇದು ಸಷ್ಮಾ ಸ್ವರಾಜ್ ಅವರ ಕೊನೆಯ ಟ್ವೀಟ್ ಆಗಿತ್ತು.

ಇದನ್ನೂ ಓದಿ: ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಇನ್ನಿಲ್ಲ

ಧನ್ಯವಾದ ನರೇಂದ್ರ ಮೋದಿಜಿ. ತುಂಬು ಹೃದಯದ ಧನ್ಯವಾದ. ನನ್ನ ಜೀವಮಾನದಲ್ಲಿ  ಈ ಐತಿಹಾಸಿಕ ದಿನಕ್ಕಾಗಿ ಕಾಯುತ್ತಿದ್ದೆ ಎಂದು ಸುಷ್ಮಮಾ ಸ್ವರಾಜ್ ಟ್ವೀಟ್ ಮಾಡಿದ್ದರು. 

 

ಕಾಶ್ಮೀರದ ಆರ್ಟಿಕಲ್ 370 ಸ್ಥಾನಮಾನ ರದ್ದು ಮಾಡಿದ ಸಂಭ್ರಮದ ಬೆನ್ನಲ್ಲೇ ಸುಷ್ಮಾ ಆಸ್ಪತ್ರೆ ದಾಖಲಾಗಿದ್ದಾರೆ. ತೀವ್ರ ಹೃದಯಾಘಾತದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ  ಸುಷ್ಮಾ ಕೊನೆಯುಸಿರೆಳಿದಿದ್ದಾರೆ. 67 ವರ್ಷದ ಸುಷ್ಮಾ ಸ್ವರಾಜ್, 2014ರಿಂದ 2019ರ ವರೆಗೆ  ಮೋದಿ ಸರ್ಕಾರದಲ್ಲಿ ವಿದೇಶಾಂಗ ಸಚಿವೆಯಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ್ದರು.  ಅನಾರೋಗ್ಯದ ಕಾರಣದಿಂದ 2ನೇ ಬಾರಿಯ ಬಿಜೆಪಿ ಸರ್ಕಾರದಿಂದ ದೂರ ಉಳಿದಿದ್ದರು.