ನವದೆಹಲಿ[ಆ. 07]  ಸುಷ್ಮಾ ಸ್ವರಾಜ್ ಯಾವ ಕಾರಣಕ್ಕೆ ರಾಜಕಾರಣ ಮುತ್ಸದ್ಧಿಯಾಗಿ ನಿಲ್ಲುತ್ತಾರೆ? ಅವರು ಸ್ಪಂದಿಸುತ್ತಿದ್ದ ರೀತಿ ಹೇಗೆ? ಹೊರ ದೇಶದಲ್ಲಿ ನೆಲೆಯೂರಿರುವ ಭಾರತೀಯರು ಇಂದಿಗೂ ಸುಷ್ಮಾ ಅವರ ವಿದೇಶಾಂಗ ನೀತಿ ಯಾಕೆ ಕೊಂಡಾಡುತ್ತಾರೆ? ಇಲ್ಲಿದೆ ಉತ್ತರ...

4640 ಭಾರತೀಯರನ್ನು ಯಮನ್ ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದ ಮಮತಾಮಯಿ: ಯಮನ್ ನಲ್ಲಿ ಹೌತಿ ರೆಬೆಲ್ಸ್ ಹಾಗೂ ಸರ್ಕಾರದ ನಡುವೆ ಭಾರೀ ಕಾಳಗ ಅರಂಭವಾಗಿತ್ತು. ಹೀಗಿರುವಾಗ ಉದ್ಯೋಗಕ್ಕೆಂದು ಯಮನ್ ಗೆ ತೆರಳಿದ್ದ ಭಾರತೀಯರು ಸಂಕಷ್ಟಕ್ಕೀಡಾಗಿದ್ದರು. ಹೇಗಾದರೂ ನಮ್ಮನ್ನು ಕಾಪಾಡಿ ಎಂದು ಹಣಕಾಸು ಸಚಿವರಾಗಿದ್ದ ಸುಷ್ಮಾರಿಗೆ ಮನವಿ ಮಾಡಿದ್ದರು. ವಿದೇಶದಲ್ಲಿದ್ದ ಭಾರತೀಯರ ಕೂಗು ಆಲಿಸಿದ ಸುಷ್ಮಾ ತಡ ಮಾಡದೇ ಆಪರೇಷನ್ ರಾಹತ್ ಮೂಲಕ ಸುಮಾರು ಐದು ಸಾವಿರಕ್ಕೂ ಅಧಿಕ ಭಾರತೀಯನ್ನು ರಕ್ಷಿಸಿದ್ದರು.

ಸುಷ್ ‘ಮಾ ತುಜೆ ಸಲಾಂ’: ಸ್ವರಾಜ್ಯದಿಂದ ದೇವ ರಾಜ್ಯಕ್ಕೆ ಸುಷ್ಮಾ ಪಯಣ!

ಸೂಡಾನ್ ನಲ್ಲಿ ಏರ್ಪಟ್ಟ ಶೀತಲ ಸಮರದ ವೇಳೆ ಭಾರತೀಯರನ್ನು ತಾಯ್ನಾಡಿಗೆ ಕರೆತಂದ್ರು: ದಕ್ಷಿಣ ಸೂಡಾನ್ ನ್ಲಲಿ ಏರ್ಪಟ್ಟಿದ್ದ ಶೀತಲ ಸಮರದಿಂದ ಸಂಕಷ್ಟಕ್ಕೀಡಾಗಿದ್ದ ಭಾರತೀಯರನ್ನು ತವರಿಗೆ ಕರೆತರುವಲ್ಲಿ ಸುಷ್ಮಾ ಪಾತ್ರ ಬಹಳ ಪ್ರಮುಖ. ಸಂಕಟಮೋಚನ ಎಂಬ ಆಪರೇಷನ್ ಮೂಲಕ ದಕ್ಷಿಣ ಸೂಡಾನ್ ನಲ್ಲಿ ಸಿಲುಕಿದ್ದ ಸುಮಾರು 150ಕ್ಕೂ ಹೆಚ್ಚು ಭಾರತೀಯರನ್ನು ಅವರು ಸೇಫಾಗಿ ತವರುನಾಡಿಗೆ ಕರೆತಂದಿದ್ದರು.

ಲಿಬಿಯಾದಲ್ಲಿ ಸಿಲುಕಿದ್ದ 29 ಭಾರತೀಯರ ರಕ್ಷಣೆ: ಲಿಬಿಯಾದಲ್ಲಿ ನಾಗರೀಕರು ಹಾಗೂ ಸರ್ಕಾರದ ನಡುವಿನ ಗುದ್ದಾಟದಲ್ಲಿ ಅಸಹಾಯಕರಾಗಿದ್ದ ಭಾರತೀಯರ ರಕ್ಷಣೆಗೂ ಸುಷ್ಮಾ ಧಾವಿಸಿದ್ದರು. ಇತರ ರಾಷ್ಟ್ರಗಳ ಸಹಾಯದಿಂದ ಸುಮಾರು 29 ಭಾರತೀಯನ್ನು ರಕ್ಷಿಸಿದ್ದ ಸುಷ್ಮಾ, ಭಾರತೀಯರು ವಿಶ್ವದ ಯಾವ ಮೂಲೆಯಲ್ಲಿ ತೊಂದರೆಗೊಳಗಾಗಿದ್ದರೂ ಬಾರತೀಯ ವಿದೇಶಾಂಗ ಸಚಿವಾಲಯ ನಿಮ್ಮ ಸಹಾಯಕ್ಕಿದೆ ಎಂಬ ವಿಶ್ವಾಸ ಮೂಡಿಸಿದ್ದರು.

ಪಾಕಿಸ್ತಾನದಿಂದ ತವರು ನೆಲಕ್ಕೆ ಮರಳಿದ್ದ ಗೀತಾ: ಸಂಝೌತಾ ರೈಲಿನ ಮೂಲಕ 8 ವರ್ಷದ ಬಾಲಕಿಯಾಗಿದ್ದಾಗ ಪಾಕಿಸ್ತಾನಕ್ಕೆ ಹೋಗಿದ್ದ ಇಂದೋರ್‌ನ ಕಿವುಡ- ಮೂಕ ಯುವತಿ ಗೀತಾ ಎಂಬಾಕೆಯನ್ನು 15 ವರ್ಷಗಳ ಬಳಿಕ ಸ್ವದೇಶಕ್ಕೆ ಕರೆಸುವಲ್ಲಿ ಸುಷ್ಮಾ ಯಶಸ್ವಿಯಾಗಿದ್ದರು. ಆಕೆಗೆ ಅವರು ತಾಯಿ ಪ್ರೀತಿ ತೋರಿದ್ದರು. ಆಕೆ ಜೀವನಕ್ಕೂ ಸುಷ್ಮಾ ಸಾಕಷ್ಟು ನೆರವಾಗಿದ್ದರು.

ಒಂದು ರೂಪಾಯಿ ಫೀಸ್ ನೀಡಲು ಸಾಳ್ವೆಯನ್ನು ಮನೆಗೆ ಆಹ್ವಾನಿಸಿದ್ದ ಸುಷ್ಮಾ!

ಗಡಿ ಎಂಬ ತೊಡಕನ್ನು ಅಳಿಸಿ ಹಾಕಿದ್ದ ಸುಷ್ಮಾ: ಸುಷ್ಮಾ ಸ್ವರಾಜ್ ವಿದೇಶಾಂಗ ಸಚಿವೆಯಾಗಿ ಸೇವೆ ಸಲ್ಲಿಸಿದ ಅವಧಿಯನ್ನು ಇಡೀ ವಿಶ್ವ, ಅದರಲ್ಲೂ ವಿಶೇಷವಾಗಿ ಭಾರತೀಯರು ಮರೆಯಲಸಾಧ್ಯ. ಟ್ವಿಟರ್ ಹಾಗೂ ಸೋಶಿಯಲ್ ಮಿಡಿಯಾ ಮೂಲಕವೇ ವಿಶ್ವದ ನಾನಾ ಭಾಗದಲ್ಲಿ ಸಿಲುಕಿದ್ದ ಭಾರತೀಯರನ್ನು ಅವರು ರಕ್ಷಿಸಿದ್ದರು. ಇಷ್ಟೇ ಅಲ್ಲದೇ ಪಾಕಿಸ್ತಾನ ಸೇರಿದಂತೆ ಇತರ ದೇಶಗಳ ರೋಗಿಗಳಿಗೆ ಭಾರತದ ವೀಸಾ ನೀಡಿ ಇಲ್ಲಿ ಚಿಕಿತ್ಸೆ ನೀಡುವ ಮೂಲಕ ವಿದೇಶಾಂಗ ಅಚಿವಾಲಯದಲ್ಲಿ ಹೀಗೂ ಕೆಲಸ ಮಾಡಬಹುದೆಂದು ತೋರಿಸಿಕೊಟ್ಟರು.

ಕಳೆ ಕಳೆದುಕೊಂಡ ವರಮಹಾಲಕ್ಷ್ಮೀ; ಆಚರಿಸಲು ಸುಷ್ಮಾ ಇನ್ನಿಲ್ಲ!

ಚಿಕಿತ್ಸೆ ಪಡೆಯಲು ಪಾಕ್ ನಾಗರಿಕರಿಗೆ ಭಾರತದ ವೀಸಾ: 2017ರ ಅಕ್ಟೋಬರ್ 19ರಂದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಾಕಿಸ್ತಾನದ ಸುಮೈರಾ ಎಂಬಾಕೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ತನ್ನ ತಮ್ಮನಿಗೆ ಚಿಕಿತ್ಸೆ ನೀಡಲು ಭಾರತದ ವೀಸಾ ನೀಡಿ ಎಂದು ಸುಷ್ಮಾಗೆ ಮನವಿ ಮಾಡಿಕೊಂಡಿದ್ದರು. ಸುಮೈರಾ ಟ್ವೀಟ್ ಗಮನಿಸಿದ್ದ ಸುಷ್ಮಾ 24 ಗಂಟೆಯೊಳಗೆ ಭಾರತದ ವೀಸಾ ನೀಡಲಾಯ್ತು. ಈ ಘಟನೆ ಜನರಿಗೆ ಸುಷ್ಮಾ ಮೇಲಿದ್ದ ಗೌರವವನ್ನು ಇಮ್ಮಡಿಗೊಳಿಸಿತ್ತು.

ಇಟಲಿಯಲ್ಲಿ ಮಧುಚಂದ್ರಕ್ಕೆ ಅವಕಾಶ, ಆಹಾರದ ಕೊರತೆ ನಿವಾರಣೆ: ಒಂದೇ ಒಂದು ಟ್ವಿಟ್ ಗೆ ಸ್ಪಂದಿಸಿ ಹೊಸದಾಗಿ ಮದುವೆಯಾದ ದಂಪತಿಗೆ ಸುಷ್ಮಾ ಮಾಡಿದ ಸಹಕಾರ ಸಹ ಸುದ್ದಿಯಾಗಿತ್ತು.  ಜಿಮ್ಸನ್ ಎಂಬುವರಿಂದ ಸುಷ್ಮಾ ಖಾತೆಗಗೆ ದೂರೊಂದು ಬಂದಿತ್ತು. ಹನಿಮೂನ್‌ಗೆ ಇಟಲಿಗೆ ತೆರಳುವ ಮುನ್ನ  ವ್ಯಕ್ತಿ ಪಾಸ್‌ಪೋರ್ಟ್ ಕಳೆದುಕೊಂಡಿದ್ದರು. ಆ ವ್ಯಕ್ತಿಗೆ ಸುಷ್ಮಾ ತಕ್ಷಣವೇ ಪಾಸ್‌ ಪೋರ್ಟ್ ವ್ಯವಸ್ಥೆ ಮಾಡಿಕೊಟ್ಟಿದ್ದರು.

ಫಿಲಿಫೈನ್ಸ್‌ನಲ್ಲಿದ್ದ ಕಾಶ್ಮೀರದ ವಿದ್ಯಾರ್ಥಿಗಳಿಗೆ ನೆರವು: ಮೆಡಿಕಲ್ ಅಧ್ಯಯನ ಮಾಡುತ್ತಿದ್ದ  ಕಾಶ್ಮೀರಿ ವಿದ್ಯಾರ್ಥಿಗಳು ಮೇ 10 , 2018 ಸಂಕಷ್ಟಕ್ಕೆ ಸಿಲುಕಿದ್ದರು. ಇದು ಸುಷ್ಮಾ ಅವರ ಗಮನಕ್ಕೆ ಬಂದು ತಕ್ಷಣ ಸಮಸ್ಯೆ ನಿವಾರಿಸಿದ್ದರು.

ಮಾನವ ಕಳ್ಳಸಾಗಣೆ ತಡೆ: ಮಾನವ ಕಳ್ಳಸಾಗಣೆ ಜಾಲಕ್ಕೆ ಬಲಿಯಾಗುತ್ತಿದ್ದ ಸಾವಿರಾರು ಜೀವಗಳನ್ನು ಸುಷ್ಮಾ ಕಾಪಾಡಿದ್ದರು. ಗಲ್ಫ್ ದೇಶಗಳಲ್ಲಿ ತೊಂದರೆಗೆ ಒಳಗಾದ ಭಾರತೀಯರ ನೆರವಿಗೆ ಮೊದಲು ಹೋಗುತ್ತಿದ್ದುದ್ದೇ ಸುಷ್ಮಾ ಸ್ವರಾಜ್. ಹೈದಾರಾಬಾದಿನ ಜೆಸಿಂತಾ ಮೆನೋಂಡೋಕಾ ಅವರಿಗೆ ನೆರವಾಗಿದ್ದನ್ನು ಇಂದಿಗೂ ಸ್ಮರಣೆ ಮಾಡಲಾಗುತ್ತಿದೆ.