ಸರ್ಕಾರದಿಂದ ಆರಂಭಿಸಲಾದ ಈ ಹೊಸ ಮೊಬೈಲ್‌ ಆ್ಯಪ್‌ ಭಾರಿ ಯಶಸ್ಸನ್ನು ಪಡೆದಿದೆ. ಆ್ಯಪ್‌ ಲೋಕಾರ್ಪಣೆಗೊಂಡ ಎರಡೇ ದಿನಗಳಲ್ಲಿ ಅದು 10 ಲಕ್ಷ ಸಂಖ್ಯೆಯಷ್ಟು ಡೌನ್‌ಲೋಡ್‌ ಆಗಿದೆ. 

ನವದೆಹಲಿ: ದೇಶದ ಯಾವ ಮೂಲೆಯಿಂದಾದರೂ ಪಾಸ್‌ಪೋರ್ಟ್‌ ಅರ್ಜಿ ಸಲ್ಲಿಸಬಹುದಾದ ಸರ್ಕಾರದ ಹೊಸ ಪಾಸ್‌ಪೋರ್ಟ್‌ ಸೇವಾ ಮೊಬೈಲ್‌ ಆ್ಯಪ್‌ ಭಾರಿ ಯಶಸ್ಸನ್ನು ಪಡೆದಿದೆ. ಆ್ಯಪ್‌ ಲೋಕಾರ್ಪಣೆಗೊಂಡ ಎರಡೇ ದಿನಗಳಲ್ಲಿ ಅದು 10 ಲಕ್ಷ ಸಂಖ್ಯೆಯಷ್ಟು ಡೌನ್‌ಲೋಡ್‌ ಆಗಿದೆ. 

ಈ ಬಗ್ಗೆ ಶುಕ್ರವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಟ್ವೀಟ್‌ ಮಾಡಿದ್ದಾರೆ. ಪಾಸ್‌ಪೋರ್ಟ್‌ ಸೇವಾ ದಿವಸದ ಪ್ರಯುಕ್ತ ಬುಧವಾರವಷ್ಟೇ ಆ್ಯಪ್‌ ಲೋಕಾರ್ಪಣೆಗೊಂಡಿತ್ತು. 

ಹೊಸ ಆ್ಯಪ್‌ ಲೋಕಾರ್ಪಣೆ ಸಂದರ್ಭ ಮಾತನಾಡಿದ್ದ ಸುಷ್ಮಾ, ಇದೊಂದು ಕ್ರಾಂತಿಕಾರಿ ಕ್ರಮ ಎಂದಿದ್ದರು. ಆ್ಯಪ್‌ ಮೂಲಕ ಬಳಕೆದಾರರು ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ಸೇವೆಗಳನ್ನು ಆನ್‌ಲೈನ್‌ ಮೂಲಕ ಪಡೆಯಬಹುದು.