ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್  ಹೆಸರು ರಾಷ್ಟ್ರಪತಿ ಚುನಾವಣಾ ರೇಸ್ ನಲ್ಲಿ ಮುಂಚೂಣಿಯಲ್ಲಿ ಕೇಳಿ ಬರುತ್ತಿದ್ದು, ಸ್ವತಃ ಸುಷ್ಮಾರವರೇ ಈ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

ನವದೆಹಲಿ (ಜೂ.17): ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೆಸರು ರಾಷ್ಟ್ರಪತಿ ಚುನಾವಣಾ ರೇಸ್ ನಲ್ಲಿ ಮುಂಚೂಣಿಯಲ್ಲಿ ಕೇಳಿ ಬರುತ್ತಿದ್ದು, ಸ್ವತಃ ಸುಷ್ಮಾರವರೇ ಈ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

ಇವೆಲ್ಲಾ ವದಂತಿಗಳಷ್ಟೇ. ನಾನು ವಿದೇಶಾಂಗ ಸಚಿವೆ. ಆಂತರಿಕ ವಿಚಾರಗಳ ಬಗ್ಗೆ ನೀವು ನನ್ನನ್ನು ಕೇಳಬಹುದು. ಅದು ಬಿಟ್ಟು ರಾಷ್ಟ್ರಪತಿ ಚುನಾವಣೆ ಬಗ್ಗೆ ಕೇಳಿದರೆ ನನಗೆ ಗೊತ್ತಿಲ್ಲ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿಯಾಗಿ ವರಿಷ್ಟೆ ಸುಷ್ಮಾ ಸ್ವರಾಜ್ ಹೆಸರನ್ನು ನಾಮಾಂಕಿತಗೊಳಿಸುವ ನಿರೀಕ್ಷೆ ಬಲವಾಗಿತ್ತು. ಆದರೆ ಇದನ್ನ ಸುಷ್ಮಾ ಸ್ವರಾಜ್ ರವರೇ ತಳ್ಳಿ ಹಾಕಿದ್ದಾರೆ.