ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ನೆರವಾಗಿದ್ದಾರೆ. ಇದು ಆ ಮಗುವಿನ ತಂದೆಯ ಪ್ರಶಂಸೆಗೆ ಕಾರಣವಾಗಿದ್ದು, ಅವರು ‘ಜೈ ಹಿಂದ್’ ಎನ್ನುವ ಮೂಲಕ ಭಾರತಕ್ಕೆ ಗೌರವ ಸಲ್ಲಿಸಿದ್ದಾರೆ.
ನವದೆಹಲಿ(ಜೂ.02): ಹೃದ್ರೋಗದಿಂದ ಬಳಲುತ್ತಿರುವ ಪಾಕಿಸ್ತಾನದ ಎರಡೂವರೆ ತಿಂಗಳ ಮಗುವೊಂದು ಭಾರತದಲ್ಲಿ ಚಿಕಿತ್ಸೆ ಪಡೆಯುವುದಕ್ಕಾಗಿ ವೀಸಾ ಕೊಡಿಸಲು ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್ ನೆರವಾಗಿದ್ದಾರೆ. ಇದು ಆ ಮಗುವಿನ ತಂದೆಯ ಪ್ರಶಂಸೆಗೆ ಕಾರಣವಾಗಿದ್ದು, ಅವರು ‘ಜೈ ಹಿಂದ್’ ಎನ್ನುವ ಮೂಲಕ ಭಾರತಕ್ಕೆ ಗೌರವ ಸಲ್ಲಿಸಿದ್ದಾರೆ.
ತಮ್ಮ ಮಗು ಹೃದ್ರೋಗದಿಂದ ಬಳಲುತ್ತಿದೆ ಎಂದು ಮಗುವಿನ ಜತೆ ತೆಗೆಸಿಕೊಂಡ ಫೋಟೋವೊಂದನ್ನು ಲಗತ್ತಿಸಿ ಲಾಹೋರ್‌ನ ಎಂಜಿನಿಯರ್ ಕೆನ್ ಸಿದ್ ಅವರು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುಷ್ಮಾ, ಮಗುವಿಗೆ ಭಾರತದಲ್ಲಿ ಚಿಕಿತ್ಸೆ ಕೊಡಿಸಲು ವೈದ್ಯಕೀಯ ವೀಸಾ ನೀಡುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ಪಾಕಿಸ್ತಾನದ ಭಾರತೀಯ ಹೈಕಮಿಷನ್ ಕಚೇರಿ ಸಂಪರ್ಕಿಸಲು ಕೋರಿದ್ದರು. ಇದರಿಂದ ಕೆನ್ ಅವರ ಹೃದಯ ತುಂಬಿ ಬಂದಿದೆ. ‘ಮೇಡಂ ನನ್ನ ಭಾವನೆ ಹೇಳಿಕೊಳ್ಳಲು ಆಗುತ್ತಿಲ್ಲ. ನನಗೆ ಹಾಗೂ ನನ್ನ ಮಗನಿಗೆ ನೀವು ಮಾಡಿದ ಸಹಾಯಕ್ಕೆ ಧನ್ಯವಾದ. ಭಾರತ ಸರ್ಕಾರಕ್ಕೆ ಪ್ರಶಂಸೆ ಸೂಚಿಸುತ್ತೇನೆ. ಜೈ ಹಿಂದ್’ ಎಂದು ಅವರು ಟ್ವೀಟ್ ಮಾಡಿದ್ದಾರೆ.
