ದ್ವಿಪಕ್ಷೀಯ ಮಾತುಕತೆ ನಡೆಯುವಂತಾಗಲು ಅಗತ್ಯವಿರುವ ವಾತವರಣವನ್ನು ರಚಿಸುವುದು ಪಾಕಿಸ್ತಾನದ ಜವಾಬ್ದಾರಿಯಾಗಿದೆ, ಎಂದು ವಿಕಾಸ್ ಸ್ವರೂಪ್ ಹೇಳಿದ್ದಾರೆ.
ನವದೆಹಲಿ (ನ.24): ‘ಹಾರ್ಟ್ ಆಫ್ ಏಶಿಯಾ’ ಸಮ್ಮೇಳನದಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭಾಗವಹಿಸುವುದಿಲ್ಲವೆಂದು ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಆದರೆ, ಆ ಸಂದರ್ಭದಲ್ಲಿ ಪಾಕಿಸ್ತಾನ ಜತೆಗೆ ಭಾರತ ದ್ವಿಪಕ್ಷೀಯ ಮಾತುಕತೆ ನಡೆಸಲಿದೆಯೇ ಎಂಬ ಬಗ್ಗೆ ವಿಕಾಸ್ ಸ್ವರೂಪ್ ನಿಖರವಾದ ಮಾಹಿತಿ ನೀಡಲಿಲ್ಲ.
ದ್ವಿಪಕ್ಷೀಯ ಮಾತುಕತೆ ನಡೆಯುವಂತಾಗಲು ಅಗತ್ಯವಿರುವ ವಾತವರಣವನ್ನು ರಚಿಸುವುದು ಪಾಕಿಸ್ತಾನದ ಜವಾಬ್ದಾರಿಯಾಗಿದೆ, ಎಂದು ವಿಕಾಸ್ ಸ್ವರೂಪ್ ಹೇಳಿದ್ದಾರೆ.
ಉರಿ ದಾಳಿ ಹಾಗೂ ಗಡಿಯಲ್ಲಿ ಪಾಕಿಸ್ತಾನವು ನಿರಂತರ ಕದನ ವಿರಾಮ ಉಲ್ಲಂಘನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ, ಉಭಯ ದೇಶಗಳ ನಡುವಿನ ಸಂಬಂಧ ಹದೆಗೆಟ್ಟಿದೆ. ಅದಾಗ್ಯೂ, ಭಾರತದಲ್ಲಿ ನಡೆಯಲಿರುವ ‘ಹಾರ್ಟ್ ಆಫ್ ಏಶಿಯಾ’ ಸಮ್ಮೇಳನದಲ್ಲಿ ಪಾಕ್’ನ ಹಿರಿಯ ರಾಜತಾಂತ್ರಿಕ ಸರ್ತಾಜ್ ಅಝೀಝ್ ಭಾಗವಹಿಸಲಿದ್ದಾರೆ.
ಮುಂಬರುವ ಡಿಸೆಂಬರ್ 3 ಮತ್ತು 4 ರಂದು ಅಮೃತಸರದಲ್ಲಿ ಹಾರ್ಟ್ ಆಫ್ ಏಶಿಯಾ ಸಮ್ಮೆಳನ ನಡೆಯಲಿದೆ,
