ನಕಲಿ ನೋಟು ಪ್ರಕರಣ : ಕಿರುತೆರೆ ನಟಿ ಬಂಧನ

First Published 5, Jul 2018, 5:22 PM IST
Surya Sasikumar, Malayalam TV actress caught red handed with mother and sister
Highlights
  • ಕಿರುತೆರೆ ನಟಿ ಸೂರ್ಯ ಶಶಿಕುಮಾರ್, ಸೋದರಿ ಶೃತಿ ಹಾಗೂ ತಾಯಿ ರೆಮಾ ದೇವಿ ಬಂಧಿತರು
  • ಬಂಧಿತರಿಂದ 57 ಲಕ್ಷ ರೂ. ಮೌಲ್ಯದ ನಕಲಿ ನೋಟು ವಶ

ತಿರುವನಂತಪುರಂ[ಜು.05]: ನಕಲಿ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಿ ಕಿರುತೆರೆ ನಟಿ ಹಾಗೂ ಆಕೆಯ ಸೋದರಿ ಮತ್ತು ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಿರುತೆರೆ ನಟಿ ಸೂರ್ಯ ಶಶಿಕುಮಾರ್, ಸೋದರಿ ಶೃತಿ ಹಾಗೂ ತಾಯಿ ರೆಮಾ ದೇವಿ ಬಂಧಿತರು. ಮೂವರನ್ನು ಕೊಲ್ಲಂನ ತಮ್ಮ ನಿವಾಸದಲ್ಲಿ 57 ಲಕ್ಷ ರೂ. ನಕಲಿ ನೋಟು ಚಲಾವಣೆ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಬಂಧಿಸಿದ್ದಾರೆ. 

ಬಂಧಿತರಿಂದ 57 ಲಕ್ಷ ರೂ. ನಕಲಿ ನೋಟು, ಪ್ರಿಂಟರ್, ಕಾಗದಗಳು ಹಾಗೂ ಇತರ ಮುದ್ರಿತ ಯಂತ್ರಗಳನ್ನು ವಶಪಡಿಸಿಕೊಳ್ಲಲಾಗಿದೆ. ಸ್ಥಳದಲ್ಲಿ ಅಮೌಲ್ಯಿಕರಣಗೊಂಡ ಒಂದಷ್ಟು 500 ರೂ. ನೋಟುಗಳು ಪತ್ತೆಯಾಗಿವೆ. ಪ್ರಕರಣದಲ್ಲಿ ನಟಿಯ ತಾಯಿ ರೆಮಾ ದೇವಿ ಪ್ರಮುಖ ಕಿಂಗ್ ಪಿನ್ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ  2.25 ಲಕ್ಷ ರೂ ನಕಲಿ ನೋಟು ಹೊಂದಿದ್ದ ಕಾರಣಕ್ಕಾಗಿ ಇಡುಕ್ಕಿಯಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದರು. ಇವರನ್ನು ವಿಚಾರಣೆಗೊಳಪಡಿಸಿದಾಗ ನಟಿ ಕುಟುಂಬದ ನೋಟು ಜಾಲದ ಬಗ್ಗೆ ತಿಳಿದು ಬಂದಿದೆ. ದಂಧೆಯಲ್ಲಿ ಇನ್ನು ಹಲವರು ಭಾಗಿಯಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಇಡುಕಿ ಪೊಲೀಸ್ ಮುಖ್ಯಸ್ಥ ಕೆ.ಬಿ. ವೇಣುಗೋಪಾಲ್ ತಿಳಿಸಿದ್ದಾರೆ.

loader