ಇನ್ನು ಕರ್ನಾಟಕದಲ್ಲಿ ಮೋದಿ ಸರ್ಕಾರದ ಸಾಧನೆಯನ್ನು ಶೇ.60 ಜನ ಮೆಚ್ಚಿದ್ದಾರೆ. ಪ್ರಧಾನಿ ಮೋದಿ ಅವರನ್ನು ಶೇ.70 ಜನ ಹೊಗಳಿದ್ದಾರೆ.
ನವದೆಹಲಿ(ಜು.04): ಈಗ ಲೋಕಸಭೆ ಚುನಾವಣೆ ನಡೆದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಹಿನ್ನಡೆ ಸಾಧಿಸಲಿದೆ ಎಂದು ವಿಡಿಪಿ ಅಸೋಸಿಯೇಟ್ಸ್ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆ ಹೇಳಿದೆ.
ಕರ್ನಾಟಕದಲ್ಲಿನ ಶೇಕಡಾವಾರು ಮತಗಳ ಅಂಕಿ ಅಂಶಗಳನ್ನು ಸಂಸ್ಥೆ ನೀಡಿದ್ದು, ಎನ್'ಡಿಎ ಗೆ ಶೇ.47, ಯುಪಿಎಗೆ ಶೇ.37, ಜೆಡಿಎಸ್ ಶೇ.9 ಮತಗಳು ಬೀಳಲಿವೆ ಎಂದು ಭವಿಷ್ಯ ನುಡಿದಿದೆ. ಇನ್ನು ಕರ್ನಾಟಕದಲ್ಲಿ ಮೋದಿ ಸರ್ಕಾರದ ಸಾಧನೆಯನ್ನು ಶೇ.60 ಜನ ಮೆಚ್ಚಿದ್ದಾರೆ. ಪ್ರಧಾನಿ ಮೋದಿ ಅವರನ್ನು ಶೇ.70 ಜನ ಹೊಗಳಿದ್ದಾರೆ.
