ದೇಶಾದ್ಯಂತ ಹಿಂದೂ ದೇವಸ್ಥಾನಗಳ ಜಾಗದಲ್ಲಿ ನಿರ್ಮಾಣವಾದ 9 ಮಸೀದಿಗಳನ್ನು ಹಿಂದೂಗಳಿಗೆ ಹಿಂದಿರುಗಿಸಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ವಿರುದ್ಧ ದೂರು ದಾಖಲಿಸುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್‌ಬಿ) ಕಾರ್ಯದರ್ಶಿ ಜಫರಾರ‍ಯಬ್‌ ಜಿಲಾನಿ ತಿಳಿಸಿದ್ದಾರೆ.
ಲಖನೌ: ದೇಶಾದ್ಯಂತ ಹಿಂದೂ ದೇವಸ್ಥಾನಗಳ ಜಾಗದಲ್ಲಿ ನಿರ್ಮಾಣವಾದ 9 ಮಸೀದಿಗಳನ್ನು ಹಿಂದೂಗಳಿಗೆ ಹಿಂದಿರುಗಿಸಬೇಕು ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ವಿರುದ್ಧ ದೂರು ದಾಖಲಿಸುವುದಾಗಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(ಎಐಎಂಪಿಎಲ್ಬಿ) ಕಾರ್ಯದರ್ಶಿ ಜಫರಾರಯಬ್ ಜಿಲಾನಿ ತಿಳಿಸಿದ್ದಾರೆ.
ದೇಶಾದ್ಯಂತ ಹಿಂದೂ ದೇವಾಲಯಗಳನ್ನು ಕೆಡವಿ ಹಾಕಿ ಅವುಗಳ ಜಾಗದಲ್ಲಿ ನಿರ್ಮಾಣವಾಗಿರುವ ಮಸೀದಿಗಳನ್ನು ಹಿಂದೂಗಳಿಗೆ ವಾಪಸ್ ನೀಡಬೇಕು ಎಂದು ಶಿಯಾ ವಕ್ಫ್ ಮಂಡಳಿ ಅಧ್ಯಕ್ಷ ವಸೀಂ ರಿಜ್ವಿ ಎಐಎಂಪಿಎಲ್ಬಿಗೆ ಪತ್ರ ಬರೆದಿದ್ದರು.
ಈ ಬಗ್ಗೆ ಗುರುವಾರ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ ಜಫರಾರಯಬ್, ‘ರಿಜ್ವಿ ಅವರಿಂದ ನನಗೆ ಇದುವರೆಗೂ ಯಾವುದೇ ಪತ್ರ ಬಂದಿಲ್ಲ. ಇಂಥ ಯಾವುದೇ ಪತ್ರಗಳು ಬಂದ ಮರು ಕ್ಷಣವೇ, ಮಸೀದಿಗಳ ವಿರುದ್ಧ ಹೇಳಿಕೆ ನೀಡಿದ ರಿಜ್ವಿ ವಿರುದ್ಧ ಕೇಸು ದಾಖಲಿಸುತ್ತೇನೆ,’ ಎಂದಿದ್ದಾರೆ.
ಹೋಳಿಯಂಥ ಸಂಭ್ರಮದ ನಡುವೆಯೇ ಎರಡೂ ಸಮುದಾಯಗಳ ನಡುವಿನ ಭ್ರಾತೃತ್ವಕ್ಕೆ ಧಕ್ಕೆ ತರುವ ರಿಜ್ವಿ ಅಂಥವರ ಹೇಳಿಕೆಗೆ ಮಾಧ್ಯಮಗಳು ಸುಖಾಸುಮ್ಮನೇ ಹೆಚ್ಚು ಮಾನ್ಯತೆ ನೀಡುತ್ತಿವೆ ಎಂದು ಎಐಎಂಪಿಎಲ್ಬಿ ಕಾರ್ಯಕಾರಿ ಸದಸ್ಯ ಮೌಲಾನಾ ಖಾಲೀದ್ ರಶೀದ್ ಫರಂಗಿ ಮಹಾಲಿ ತಿಳಿಸಿದ್ದಾರೆ.
ಅಲ್ಲದೆ, ಬಾಬ್ರಿ ಮಸೀದಿ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಕ್ಕಾಗಿ ಮಧ್ಯಸ್ಥಿಕೆ ವಹಿಸಿದ ಶ್ರೀ ಶ್ರೀ ರವಿಶಂಕರ್ ಗುರೂಜಿ ವಿಚಾರದ ಬಗ್ಗೆ ಇದೇ ವೇಳೆ ಪ್ರತಿಕ್ರಿಯಿಸಿದ ಮಹಾಲಿ, ಉತ್ತರ ಪ್ರದೇಶದ ಫäಲ್ಪುರ ಮತ್ತು ಗೋರಖ್ಪುರ ಲೋಕಸಭೆಯ ಉಪಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣ ನಿರ್ಮಿಸಲು ಶ್ರೀಶ್ರೀ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
