ಚಿಕ್ಕಮಗಳೂರಿನಲ್ಲಿ ಮಾತನಾಡಿದ ದೇವೇಗೌಡರು, ಸರ್ಜಿಕಲ್ ಆಪರೇಷನ್ ಮಹಾ ಸಾಧನೆ ಎಂದು ಹೇಳುತ್ತಿರುವುದು ನನಗೆ ಇಷ್ಟವಿಲ್ಲ. ಅಲ್ಲದೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಇಷ್ಟವಿಲ್ಲವೆಂದಿದ್ದಾರೆ.

ಚಿಕ್ಕಮಗಳೂರು (ಅ.19): ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆದಿದ್ದು ಯುದ್ಧವಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. 

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಸರ್ಜಿಕಲ್ ಆಪರೇಷನ್ ಮಹಾ ಸಾಧನೆ ಎಂದು ಹೇಳುತ್ತಿರುವುದು ನನಗೆ ಇಷ್ಟವಿಲ್ಲ. ಅಲ್ಲದೆ ಈ ಬಗ್ಗೆ ಪ್ರತಿಕ್ರಿಯೆ ನೀಡಲು ಇಷ್ಟವಿಲ್ಲವೆಂದಿದ್ದಾರೆ.

ಉಗ್ರರು ನುಸುಳಿ ಬಂದು ನಮ್ಮ ಸೈನಿಕರನ್ನು ಕೊಂದಿದ್ದರು. ಅಂದು ನನಗೆ ಕೇಂದ್ರ ಸರಕಾರದ ಪ್ರತಿನಿಧಿಗಳು ಮಧ್ಯಾಹ್ನ 12ಕ್ಕೆ ಫೋನ್ ಮಾಡಿ ಸರ್ಜಿಕಲ್ ಸ್ಟ್ರೈಕ್ ಮಾಡಿ ಬೆಳಗ್ಗೆ 4.30ಕ್ಕೆ ಖಾಲಿ ಮಾಡಿದ್ದೇವೆ ಎಂದಿದ್ದರು. ಇದನ್ನು ದೇಶ ಮೆಚ್ಚಲಿದೆ, ಮಾಡಿ ಹೇಳಿದ್ದೆ ಎಂದಿದ್ದಾರೆ.