ಹೊಸ ಕಾನೂನಿನಲ್ಲಿ ಜಾನವಾರು ಅಂತ ಇದೆ. ಜಾನುವಾರು ಎಂದರೆ ಹಸು, ಕೋಣ, ಎಮ್ಮೆ ಎಲ್ಲವೂ ಬರತ್ತೆ. ಇತ್ತಿಚೆಗೆ ವಿಶೇಷ ತಳಿಗಳ ಸಂಖ್ಯೆ ಕುಸಿಯುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಪರಿಸರ ಇಲಾಖೆ ಈ ಸುತ್ತೋಲೆ ಹೊರಡಿಸಿದೆ.

ಬೆಂಗಳೂರು(ಮೇ.29): ಯಾರ ಆಹಾರವನ್ನು ಕಸಿದುಕೊಳ್ಳುವ ಅಥವಾ ಯಾರ ಮನಸ್ಸಿಗೆ ಘಾಸಿಗೊಳಿಸುವ ಪ್ರಯತ್ನ ಕೇಂದ್ರ ಸರ್ಕಾರ ಮಾಡಿಲ್ಲ ಎಂದು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಗೋಹತ್ಯೆ ನಿಷೇದ ಕಾಯ್ದೆಯನ್ನ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಬಿಜೆಪಿ ಹೊರಡಿಸಿದ ಸುತ್ತೋಲೆ ಅಲ್ಲ. ಸಂವಿಧಾನದ 48 ರ ವಿಧಿಯ ಪ್ರಕಾರ ಸುತ್ತೋಲೆ ಹೊರಡಿಸಲಾಗಿದೆ. ಇದು ನಿಮಗೆ ಇಷ್ಟ ಇಲ್ಲ ಅಂದ್ರೆ ಸಂವಿಧಾನ ಪೀಠಕ್ಕೆ ಹೋಗಿ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ಹೊಸ ಕಾನೂನಿನಲ್ಲಿ ಜಾನವಾರು ಅಂತ ಇದೆ. ಜಾನುವಾರು ಎಂದರೆ ಹಸು, ಕೋಣ, ಎಮ್ಮೆ ಎಲ್ಲವೂ ಬರತ್ತೆ. ಇತ್ತಿಚೆಗೆ ವಿಶೇಷ ತಳಿಗಳ ಸಂಖ್ಯೆ ಕುಸಿಯುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಪರಿಸರ ಇಲಾಖೆ ಈ ಸುತ್ತೋಲೆ ಹೊರಡಿಸಿದೆ. ಇದೇ ವೇಳೆ ಬೀಫ್ ಪೆಸ್ಟ್ ನಡೆಸೋದಕ್ಕೆ ಅವಕಾಶ ನೀಡಬಾರದು ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.